ಇದ್ದಕ್ಕಿದ್ದಂತೆ ಮಂಜುಗಡ್ಡೆಗೆ ತಿರುಗಿದ ಶಿವಲಿಂಗ: ವಿಸ್ಮಯ ನೋಡಲು ಮಂದಿರದ ಕಡೆಗೆ ಭಕ್ತರ ದಂಡು

Entertainment Featured-Articles News Viral Video Wonder

ಕೆಲವೊಂದು ಪ್ರಕೃತಿ ವೈಪರೀತ್ಯಗಳನ್ನು ನೋಡಿದಾಗ ನಮಗೆ ಇದು ನಿಜವಾಗಿಯೂ ದೇವರೇ ಇದನ್ನೆಲ್ಲಾ ಮಾಡುತ್ತಿರುವನೇ ಎನ್ನುವ ಅನುಮಾನವೊಂದು ಮನಸ್ಸಿನಲ್ಲಿ ಮೂಡುತ್ತದೆ. ಕೆಲವೊಂದು ದೇವಾಲಯಗಳಲ್ಲಿ ನಡೆಯುವ ಘಟನೆಗಳು ಜನರನ್ನು ಆಶ್ಚರ್ಯದಲ್ಲಿ ಮುಳುಗಿಸುತ್ತಿವೆ. ಈಗ ಅಂತಹುದೇ ಒಂದು ಘಟನೆ ವರದಿ ಯಾಗಿದ್ದು, ಪ್ರಸಿದ್ಧ ಆಲಯವೊಂದರಲ್ಲಿ ನಡೆದ ಅಚ್ಚರಿಯ ಘಟನೆಯೊಂದು ಈಗ ದೊಡ್ಡ ಸುದ್ದಿಯಾಗಿ ಎಲ್ಲರಲ್ಲೂ ಕುತೂಹಲವನ್ನು ಮೂಡಿಸುವ ಜೊತೆಗೆ ಇದೊಂದು ವಿಸ್ಮಯ ಎನ್ನುವ ಅನುಭೂತಿ ನೀಡಿದೆ.

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಸುಪ್ರಸಿದ್ಧ ತ್ರಯಂಬಕೇಶ್ವರ ಮಂದಿರದಲ್ಲಿ ವಿಸ್ಮಯವೊಂದು ನಡೆದಿದ್ದು, ಈ ಮಂದಿರದಲ್ಲಿ ಶಿವಲಿಂಗವು ಮಂಜಿನ ರೂಪವನ್ನು ತಾಳಿದೆ. ಅಮರನಾಥದಲ್ಲಿ ಹೇಗೆ ಶಿವನು ಮಂಜಿನ ಲಿಂಗದ ರೂಪದಲ್ಲಿ ದರ್ಶನವನ್ನು ನೀಡುವನೋ ಈಗ ಮಹಾರಾಷ್ಟ್ರದ ಈ ಮಂದಿರದಲ್ಲಿ ಸಹಾ ಮಂಜಿನ ರೂಪದ ಶಿವಲಿಂಗ ದರ್ಶನವು ಭಕ್ತರನ್ನು ಅಚ್ಚರಿಯಲ್ಲಿ ಮುಳುಗಿಸಿದೆ. ಪ್ರತಿವರ್ಷ ಅಮರನಾಥ ಯಾತ್ರೆಯಲ್ಲಿ ಹಿಮ ಶಿವಲಿಂಗ ದರ್ಶನಕ್ಕಾಗಿ ಅಸಂಖ್ಯಾತ ಭಕ್ತರು ಅಮರನಾಥ ಯಾತ್ರೆ ಮಾಡುತ್ತಾರೆ.

ಜೂನ್ 30 ಗುರುವಾರದ ದಿನದಂದು ಅಮರನಾಥ ಯಾತ್ರೆ ಆರಂಭವಾಗಿದೆ. ಅದರ ಬೆನ್ನಲ್ಲೇ ಈಗ ಮಹಾರಾಷ್ಟ್ರದ ತ್ರಯಂಬಕೇಶ್ವರ ಆಲಯದಲ್ಲಿ ನಡೆದಿರುವ ಈ ರೋಚಕ ವಿದ್ಯಮಾನ ಎಲ್ಲರ ಕುತೂಹಲವನ್ನು ಕೆರಳಿಸಿದೆ. ಅರ್ಚಕರು ಲಿಂಗಕ್ಕೆ ಪೂಜೆ ಮಾಡಿ ಹೂವಿನ ಅಲಂಕಾರ ಮಾಡಿದ್ದರು ಎನ್ನಲಾಗಿದ್ದು, ಸ್ವಲ್ಪ ಹೊತ್ತಿನ ನಂತರ ಲಿಂಗದ ಮೇಲೆ ಬಿಳಿಯ ಬಣ್ಣದಲ್ಲಿ ಮಂಜಿನ ರೀತಿಯಲ್ಲಿ ಬದಲಾವಣೆ ಕಂಡಾಗ ಅವರು ಹೂವನ್ನು ಪಕ್ಕಕ್ಕೆ ಸರಿಸಿ, ಲಿಂಗದ ಮೇಲ್ಭಾಗದಲ್ಲಿ ತಮ್ಮ ಕೈಯಿಂದ ಸವರುತ್ತಾ ಪರೀಕ್ಷೆ ಮಾಡಿದ್ದಾರೆ.

ಇದ್ದಕ್ಕಿದ್ದಂತೆ ಲಿಂಗವು ಮಂಜಿನ ರೀತಿ ಬದಲಾಗಿದ್ದು, ಅದರ ಮೇಲ್ಭಾಗವು ತಣ್ಣಗೆ, ಬೆಳ್ಳಗೆ ಬದಲಾಗಿರುವುದನ್ನು ಕಂಡು ಭಕ್ತರು ಇದನ್ನು ದೇವರ ಮಹಿಮೆಯೆಂದೇ ಹೇಳುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮರನಾಥ ಯಾತ್ರೆಯ ಬೆನ್ನಲ್ಲೇ ಇಂತಹುದೊಂದು ವಿದ್ಯಮಾನ ನಡೆದಿರುವುದು ಅದ್ಭುತ ಎಂದು ಭಕ್ತರು ನಂಬಿದ್ದಾರೆ. ವೈರಲ್ ವೀಡಿಯೋ ನೋಡಿ ನೆಟ್ಟಿಗರು ಸಹಾ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಮಂಜಿನ ಲಿಂಗ ದರ್ಶನಕ್ಕೆ ಜನರು ಆಲಯದ ಕಡೆಗೆ ಸಾಗಿದ್ದಾರೆ.

Leave a Reply

Your email address will not be published.