ಇದೇನ್ ಗುರು ಹಗಲು ದರೋಡೆನಾ??ಒಂದು ಟಿಕೆಲ್ ಬೆಲೆ ಇಷ್ಟೊಂದಾ?? ಆಂಧ್ರ,‌ ತೆಲಂಗಾಣದಲ್ಲೇ ಇಲ್ಲದ ದರ ಇಲ್ಲೇಕೆ?

Entertainment Featured-Articles News

ಆರ್ ಆರ್ ಆರ್ ಸಿನಿಮಾ ಪ್ರಸ್ತುತ ದೊಡ್ಡ ಕ್ರೇಜ್ ಹುಟ್ಟು ಹಾಕಿರುವ ಸಿನಿಮಾ. ಎಲ್ಲೆಲ್ಲೂ ಈ ಸಿನಿಮಾದ ಸುದ್ದಿಗಳೇ ತುಂಬಿ ಹೋಗಿದೆ. ಎಸ್ ಎಸ್ ರಾಜಮೌಳಿ ನಿರ್ದೇಶನದ, ಮೊದಲ ಬಾರಿಗೆ ತೆಲುಗಿನ ಇಬ್ಬರು ಸ್ಟಾರ್ ನಟರಾದ ರಾಮ್ ಚರಣ್ ತೇಜಾ ಹಾಗೂ ಜೂನಿಯರ್ ಎನ್ ಟಿ ಆರ್ ಜೊತೆಯಾಗಿ ನಾಯಕರಾಗಿರುವ ಈ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಆಲಿಯಾ ಭಟ್ ನಾಯಕಿಯಾಗಿದ್ದು, ಮತ್ತೋರ್ವ ಬಾಲಿವುಡ್ ನಟ ಅಜಯ್ ದೇವಗನ್ ಸಹಾ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.‌ ಇಡೀ ವಿಶ್ವವೇ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಸಿನಿಮಾ ಕ್ರೇಜ್ ಯಾವ ಮಟ್ಡಕ್ಕಿದೆ ಎಂದರೆ ಮುಂಗಡ ಟಿಕೆಟ್ ಬುಕ್ಕಿಂಗ್ ಗಳು ಭರ್ಜರಿಯಾಗಿ ನಡೆಯುತ್ತಿದೆ.
ಆದರೆ ಇದೀಗ ಇದೇ ವಿಚಾರದಲ್ಲಿ ಅಭಿಮಾನಿಗಳು ಕೋಪ, ಅ ಸ ಹ ನೆ ಹಾಗೂ ಅಸಮಾಧಾನ ಹೊರ ಹಾಕುವಂತ ಬೆಳವಣಿಗೆ ನಡೆದಿದೆ. ಹೌದು, ಹೇಗೂ ಮುಂಗಡ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ ಎಂದು ಟಿಕೆಟ್ ಬುಕ್ ಮಾಡಲು ಹೋದವರಿಗೆ ಟಿಕೆಟ್ ಬೆಲೆಯು ಶಾ ಕ್ ನೀಡಿದೆ. ಏಕೆಂದರೆ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲೇ ಈ ಸಿನಿಮಾ ಟಿಕೆಟ್ ನ ಬೆಲೆ 400, 500 ರೂಪಾಯಿಗಳಾಗಿದ್ದು, ಪ್ರೇಕ್ಷಕನ ಜೇಬಿಗೆ ಕತ್ತರಿ ಹಾಕಲು ಸಜ್ಜಾಗಿರುವ ಹಾಗೆ ಕಂಡಿದೆ.

ಸಿಂಗಲ್ ಸ್ಕ್ರೀನ್ ಗಳಲ್ಲೇ 400,500 ಆದರೆ ಮಲ್ಟಿಪ್ಲೆಕ್ಸ್ ಗಳಲ್ಲಿ ಇಷ್ಟಿರಬಹುದು ನೀವೇ ಊಹಿಸಿ. ಮಾಹಿತಿಗಳ ಪ್ರಕಾರ ಅದು ಸುಮಾರು 800 ರೂ. ನಿಂದ 1000 ರೂ ಎನ್ನಲಾಗಿದೆ. ಇದು ಕರ್ನಾಟಕದ ಪರಿಸ್ಥಿತಿ ಆದರೆ ನೆರೆಯ ತೆಲುಗು ರಾಜ್ಯಗಳಲ್ಲಿ ಅಂದರೆ ಆಂಧ್ರ ಮತ್ತು ತೆಲಂಗಾಣದಲ್ಲಿ ಸರ್ಕಾರ ಟಿಕೆಟ್ ಬೆಲೆಯನ್ನು 100 ರಿಂದ 120 ರೂ. ವರೆಗೆ ಮಾತ್ರ ಇಡಬಹುದು ಎಂದು ಈಗಾಗಲೇ ನಿಯಮವನ್ನು ಜಾರಿ ಮಾಡಿ ಹಲವು ದಿನಗಳೇ ಕಳೆದಿವೆ ಎನ್ನುವುದು ತಿಳಿದಿದೆ. ತೆಲುಗು ರಾಜ್ಯಗಳಲ್ಲಿ ಇರದ ಬೆಲೆಯಲ್ಲಿ ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ಬೆಲೆ ದುಬಾರಿಯಾಗಿದೆ.

ಕರ್ನಾಟಕದಲ್ಲಿ ವಿತರಕರು ಟಿಕೆಟ್ ದರವನ್ನು ಏಕಾಏಕೀ ಮನಸ್ಸಿಗೆ ಬಂದಂತೆ ಏರಿಸಿದ್ದಾರೆ. ಎರಡೇ ದಿನಗಳಲ್ಲಿ ಬಂಡವಾಳವನ್ನು ಅಂದರೆ ತಾವು ಪರಭಾಷಾ ಸಿನಿಮಾಗಳನ್ನು ತರಲು ಖರ್ಚು ಮಾಡಿರುವ ಹಣವನ್ನು ರಿಕವರಿ ಮಾಡುವ ಉದ್ದೇಶದಿಂದ ಇಂತಹ ಕೆಲಸವನ್ನು ಮಾಡಲಾಗಿದೆ. ಇದೊಂದು ರೀತಿಯಲ್ಲಿ ಹಗಲು ದರೋಡೆ ಅಲ್ಲದೇ ಮತ್ತೇನು?? ಸರ್ಕಾರ ಈ ಕೂಡಲೇ ಇಂತಹ ದಬ್ಬಾಳಿಕೆಗೆ ಬ್ರೇಕ್ ಹಾಕಿ, ಟಿಕೆಟ್ ದರ ನಿಗಧಿ ಮಾಡಬೇಕು ಎಂದು ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published.