ಇದೇನಿದು, ಕೊನೆಗೆ ಇಂತದ್ದು ಮಾಡಬೇಕಾ? ನಟಿ ಸಮಂತಾ ಬಗ್ಗೆ ನೆಟ್ಟಿಗರ ಅಸಮಾಧಾನ!!

Entertainment Featured-Articles News Viral Video

ಇತ್ತೀಚಿನ ದಿನಗಳಲ್ಲಿ ಸಿನಿಮಾ ಸೆಲೆಬ್ರಿಟಿಗಳು ಬಹು ಬೇಗ ಟ್ರೋಲ್ ಗೆ ಆಹಾರವಾಗುತ್ತಿದ್ದಾರೆ. ಯಾವುದೇ ವಿಷಯದಲ್ಲೇ ಆಗಲಿ ಟ್ರೋಲ್ ಮಾಡುವವರು ಸ್ಟಾರ್ ಗಳನ್ನು ಟ್ರೋಲ್ ಮಾಡಲು ಸದಾ ಮುಂದೆ ಇರುತ್ತಾರೆ. ಅವರ ಡ್ರೆಸ್ ಗಳು, ಮಾತುಗಳು ಎಲ್ಲವೂ ಟ್ರೋಲ್ ಆಗುತ್ತದೆ. ಅದರಲ್ಲೂ ಜನಪ್ರಿಯತೆ ಪಡೆದಿರುವ, ಸಾಕಷ್ಟು ಸುದ್ದಿಗಳಾಗುವ ಸ್ಟಾರ್ ಗಳಾದರೆ ಎಲ್ಲಾ ವಿಚಾರದಲ್ಲೂ ಮೈ ಎಲ್ಲಾ ಕಣ್ಣಾಗಿರಬೇಕು. ಸ್ವಲ್ಪ ಹೆಚ್ಚು, ಕಮ್ಮಿಯಾದರೂ ಸಹಾ ಇವರುಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗುವುದನ್ನು ತಪ್ಪಿಸಲು ಸಾಧ್ಯವೇ ಇಲ್ಲ ಎನ್ನಬಹುದಾಗಿದೆ.

ಪ್ರಸ್ತುತ ಸದಾ ಒಂದಲ್ಲಾ ಒಂದು ವಿಷಯಕ್ಕೆ ಭಾರೀ ಸುದ್ದಿಯಾಗುತ್ತಿರುವ ನಟಿ ಸಮಂತಾ ಈಗ ತಮ್ಮ ಹೊಸ ಜಾಹೀರಾತಿನ ವಿಷಯವಾಗಿ ದೊಡ್ಡ ಮಟ್ಟದಲ್ಲಿ ಟ್ರೋಲ್ ಗೆ ಗುರಿಯಾಗಿದ್ದಾರೆ. ಸಮಂತಾ ಪ್ರಸ್ತುತ ಅವರ ಹೊಸ ಸಿನಿಮಾ ಶಾಕುಂತಲಂ ವಿಷಯದಲ್ಲಿ ಸುದ್ದಿಗಳಾಗಿ ಭಾರೀ ಸದ್ದು ಮಾಡುವಾಗಲೇ, ಹೊಸ ವಾಣಿಜ್ಯ ಜಾಹೀರಾತಿನ ವಿಷಯವಾಗಿ ಸದ್ದು ಮಾಡಿದ್ದು, ಇದೊಂದು ಆಲ್ಕೋಹಾಲ್ ಉತ್ಪನ್ನದ ಜಾಹೀರಾತಾಗಿರುವುದು ವಿಶೇಷವಾಗಿದೆ.

ಸಮಂತಾ ಈ ಹೊಸ ವಾಣಿಜ್ಯ ಜಾಹೀರಾತಿಗಾಗಿ ಒಂದು ಅಲ್ಟ್ರಾ ಮಾಡ್ರನ್ ಔಟ್ ಫಿಟ್ ( ಡ್ರೆಸ್ ) ತೊಟ್ಟಿದ್ದಾರೆ. ಒಂದು ವೀಡಿಯೋ ಕ್ಲಿಪ್ ಮೂಲಕ ತನ್ನ ಹಾಟ್ನೆಸ್ ನ ಪರಿಚಯವನ್ನು ನೀಡಿದ್ದಾರೆ‌ ಸಮಂತಾ. ಇದರಲ್ಲಿ ನಟಿಯು ಒಂದು ಹೊಳೆಯುವ ಮೆರೂನ್ ಸ್ಟ್ರಾಪ್ ಲೆಸ್ ಸೀಕ್ವಿನ್ಡ್ ಕ್ರಾಪ್ ಟಾಪ್ ಮತ್ತು ಮತ್ತು ಹೈ ವೇಸ್ಟ್ ಪ್ಯಾಂಟ್ ಗಳನ್ನು ಮತ್ತು ಜಾಹೀರಾತು ಚಿತ್ತೀಕರಣಕ್ಕಾಗಿ ಬಿಳಿ ಟ್ಯೂಬ್ ಜಂಪ್ ಸೂಟ್ ಅನ್ನು ಸಮಂತಾ ಆರಿಸಿಕೊಂಡಿದ್ದಾರೆ. ಜಾಹೀರಾತು ಒಂದು ಲೈಟ್ ಹಾರ್ಟೆಡ್ ಕ್ಲಿಪ್ ಎನ್ನಲಾಗಿದೆಯಾದರೂ, ಸಮಂತಾ ಬಗ್ಗೆ ನೆಟ್ಟಿಗರು ಮಾತ್ರ ಆಕ್ಷೇಪಣೆ ಮಾಡಿದ್ದಾರೆ.

ಜಾಹೀರಾತನ್ನು ಗಮನಿಸಿದ ಕೆಲವೇ ಸೆಕೆಂಡ್ ಗಳಲ್ಲಿ ನೆಟ್ಟಿಗರು ಟ್ರೋಲ್ ಮಾಡಲು ಆರಂಭಿಸಿದ್ದಾರೆ.‌ ಸಮಂತಾ ಬಗ್ಗೆ ಅಭಿಮಾನಿಗಳು ಹಾಡಿ ಹೊಗಳಿದರೆ, ಕೆಲವರು ಮಾತ್ರ ಸಮಂತಾ ಹಾಕಿರುವ ಡ್ರೆಸ್ ಗಳನ್ನು ನೋಡಿ ಅಸಮಾಧಾನವನ್ನು ಹೊರ ಹಾಕುತ್ತಾ ಕಾಮೆಂಟ್ ಗಳನ್ನು ಮಾಡಿದ್ದಾರೆ. ವೀಡಿಯೋ ಕ್ಲಿಪ್ ಮಾತ್ರ ಭರ್ಜರಿಯಾಗಿ ವೈರಲ್ ಆಗುತ್ತಾ ಸಾಗಿದೆ. ಪ್ರಸ್ತುತ ಸಮಂತಾ ಶಾಕುಂತಲಂ, ಯಶೋಧ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದಲ್ಲದೇ ಬೇರೆ ಬೇರೆ ಹೊಸ ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಂಡಿದ್ದಾರೆ.

Leave a Reply

Your email address will not be published.