ಇದೇನಾಯ್ತು? ನಿರ್ಮಾಪಕರ ಇಂತಹ ಸಡನ್ ನಿರ್ಧಾರ ಕೇಳಿ ಶಾಕ್ ಆಗ್ತಿದೆ ಬಾಲಿವುಡ್

Entertainment Featured-Articles Movies News

ಬಾಲಿವುಡ್ ಮಂದಿಗೆ ಬಾಯ್ ಕಾಟ್ ಎನ್ನುವ ಪದ ನಿದ್ದೆಗೆಡಿಸಿದೆ. ಈ ಪದ ಅವರಿಗೆ ಭ ಯ, ಆತಂಕವನ್ನು ಹುಟ್ಟಿಸಿದೆ. ಆದ್ದರಿಂದಲೇ ಅಸಮಾಧಾನಗೊಂಡು ಮಾತನಾಡಿದ ಕೆಲವು ಸೆಲೆಬ್ರಿಟಿಗಳು ಸಹಾ ಈಗ ತೀವ್ರ ಟೀಕೆಗೆ ಗುರಿಯಾಗಿದ್ದು ಮಾತ್ರವೇ ಅಲ್ಲದೇ, ಬಾಲಿವುಡ್ ಮಂದಿ ಪರವಾಗಿ ದನಿ ಎತ್ತಿದವರನ್ನೂ ಬಾಯ್ ಕಾಟ್ ಮಾಡಿ ಎಂದು ಸೋಶಿಯಲ್ ಮೀಡಿಯಾ ಗಳಲ್ಲಿ ಈ ಬಹಿಷ್ಕಾರ ಎನ್ನುವುದನ್ನು ಒಂದು ಟ್ರೆಂಡ್ ಆಗಿ ಮಾಡುತ್ತಿದ್ದಾರೆ ನೆಟ್ಟಿಗರು. ಆದ್ದರಿಂದಲೇ ಈಗ ದಿಗ್ಗಜ ನಟರು ಸಹಾ ಈ ಬಾಯ್ ಕಾಟ್ ಬಗ್ಗೆ ಅಡ್ಡ ಗೋಡೆ ಮೇಲೆ ದೀಪ ಇಟ್ಟ ಹಾಗೆ ಮಾತನಾಡಿ, ಜನರ ಕೆಂಗಣ್ಣಿಗೆ ಗುರಿಯಾಗೋದು ಬೇಡ ಎಂದು ನಾಜೂಕಾಗಿ ಜಾರಿಕೊಳ್ಳುತ್ತಿದ್ದಾರೆ.

ಬಾಯ್ ಕಾಟ್ ಟ್ರೆಂಡ್ ನ ಅಬ್ಬರಕ್ಕೆ ಬಾಲಿವುಡ್ ನಲುಗಿದೆ‌. ಸ್ಟಾರ್ ನಟರ ವೃತ್ತಿ ಜೀವನದಲ್ಲೇ ಕಾಣದ ಸೋಲಿನ ಕಹಿ ಈಗ ಅವರ ವೃತ್ತಿ ಜೀವನವನ್ನು ನೀರಸವನ್ನಾಗಿ ಮಾಡಿದೆ. ಬಾರಿ ನಿರೀಕ್ಷೆಗಳೊಂದಿಗೆ ಬಂದ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ, ಅಕ್ಷಯ್ ಕುಮಾರ್ ಅಭಿನಯದ ರಕ್ಷಾ ಬಂಧನ್ ಹೀನಾಯ ಸೋಲು ಕಂಡಾಗಿದೆ. ಇನ್ನು ನಮ್ಮ ಸಿನಿಮಾ ನೋಡಬೇಡಿ ಎಂದು ತಾಪ್ಸಿ ಮತ್ತು ನಿರ್ದೇಶಕ ಅನುರಾಗ್ ಕಶ್ಯಪ್ ಮಾಡಿದ ವ್ಯಂಗ್ಯಕ್ಕೆ ಜನ ಸರಿಯಾದ ಉತ್ತರ ಕೊಟ್ಟ ಪರಿಣಾಮ, ತಾಪ್ಸಿ ಪನ್ನು ಅಭಿನಯದ ದೊಬಾರ ಸಿನಿಮಾ ಅತಿ ಕೆಟ್ಟ ಮಟ್ಟದಲ್ಲಿ ಸೋಲು ಕಂಡ ಚಿತ್ರವಾಗಿ ದಾಖಲೆ ಬರೆದಿದೆ.

ಇವಲ್ಲವುಗಳ ನಡುವೆ ಈಗ ಬಾಲಿವುಡ್ ನಲ್ಲಿ ಒಂದು ಹೊಸ ವಿಷಯ ಹರಿದಾಡಿದೆ. ಇತ್ತೀಚಿಗೆ ಬಾಲಿವುಡ್ ನಲ್ಲಿ ಸೋಲುಂಡ ಸಿನಿಮಾಗಳ ಸಾಲಲ್ಲಿ ದೊಡ್ಡ ಸೋಲು ಎಂದರೆ ಅದು ಅಮೀರ್ ಖಾನ್ ಸಿನಿಮಾ ಎನ್ನಲಾಗಿದೆ‌. ಈ ಸೋಲಿನ ನಂತರ ನಟ ಅಮೀರ್ ಖಾನ್ ಅವರ ಹೊಸ ಸಿನಿಮಾಗಳ ನಿರ್ಮಾಣದಿಂದ ನಿರ್ಮಾಪಕರು ಹಿಂದಕ್ಕೆ ಸರಿಯುತ್ತಿದ್ದಾರೆ ಎನ್ನಲಾಗುತ್ತಿದೆ. ಲಾಲ್ ಸಿಂಗ್ ಚಡ್ಡಾ ಸಿನಿಮಾ ನಂತರ ಅಮೀರ್ ಖಾನ್ ಅವರ ಹೊಸ ಸಿನಿಮಾ ಘೋಷಣೆಯಾಗಬೇಕಿತ್ತು. ಆದರೆ ಈಗ ಅದು ಸಹಾ ಮುಂದಕ್ಕೆ ಹೋಗಿದೆ ಎನ್ನಲಾಗಿದೆ. ಅಮೀರ್ ಖಾನ್ ಅವರಿಗಾಗಿ ಸಿದ್ಧವಿದ್ದ ನಾಲ್ಕು ಸಿನಿಮಾಗಳ ನಿರ್ಮಾಪಕರು ಈಗ ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.

Leave a Reply

Your email address will not be published.