ಇದೆಂತ ಬೆತ್ತಲೆ ಸ್ಪರ್ಧೆ? ರಣ್ವೀರ್ ನಂತರ ಈಗ ಬೆತ್ತಲಾದ ತಮಿಳು ನಟ! ಪತ್ನಿಯೇ ಫೋಟೋಗ್ರಾಫರ್

Entertainment Featured-Articles Movies News
62 Views

ಮೊನ್ನೆ ಮೊನ್ನೆಯಷ್ಟೇ ಬಾಲಿವುಡ್ ನಟ ರಣ್ವೀರ್ ಸಿಂಗ್ ಬೆತ್ತಲೆ ಫೋಟೋ ಬೆಂಕಿಯಂತೆ ಸೋಶಿಯಲ್ ಮೀಡಿಯಾಗಳಲ್ಲಿ ಕಿಚ್ಚನ್ನು ಹಚ್ಚಿತ್ತು. ನಟನ ಹೊಸ ನಗ್ನ ಫೋಟೋ ಶೂಟ್ ನೋಡಿ ಅಭಿಮಾನಿಗಳು, ನೆಟ್ಟಿಗರು ಎಲ್ಲರೂ ಶಾ ಕ್ ಆಗಿದ್ದರು. ತರಹೇವಾರಿ ಕಾಮೆಂಟ್ ಗಳು ಹರಿದು ಬಂದಿದ್ದವು. ಜನ ಇನ್ನೂ ರಣ್ವೀರ್ ಅವರ ಆ ಬೆ ತ್ತ ಲೆ ಅವತಾರದ ಕುರಿತಾಗಿ ಚರ್ಚೆ ಮಾಡುವಾಗಲೇ, ಅದರ ಬಗ್ಗೆಯೇ ಇನ್ನೂ ಟ್ರೋಲ್ ಗಳನ್ನು ಮಾಡುವಾಗಲೇ ಬೆ ತ್ತ ಲೆ ಸ್ಪರ್ಧೆಗೆ ಈಗ ದಕ್ಷಿಣದ ನಟನೊಬ್ಬರು ಎಂಟ್ರಿ ನೀಡುವ ಮೂಲಕ ಮತ್ತೊಂದು ಶಾಕ್ ನೀಡಲು ಮುಂದಾಗಿದ್ದಾರೆ.

ತಮಿಳು ಸಿನಿಮಾ ರಂಗದ ಪ್ರಖ್ಯಾತ ನಟ ವಿಷ್ಣು ವಿಶಾಲ್ ಬೆತ್ತಲಾಗಿ ಹಾಸಿಗೆಯ ಮೇಲೆ ಮಲಗಿರುವ, ವಿವಿಧ ಪೋಸ್ ಗಳನ್ನು ನೀಡಿರುವ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡು ಎಲ್ಲರ ಹುಬ್ಬೇರಿಸಿದ್ದಾರೆ. ರಣ್ವೀರ್ ಹಾದಿಯಲ್ಲೇ ಈ ನಟ ಸಹಾ ಸಾಗಿದ್ದು, ಸೋಷಿಯಲ್ ಮೀಡಿಯಾ ದಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡು, ನಾನು ಸಹಾ ಟ್ರೆಂಡ್ ಗೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಅವರು ಹೇಳಿರುವುದು ಇನ್ನಷ್ಟು ಗಮನವನ್ನು ಸೆಳೆದಿದ್ದು, ಅವರ ಫೋಟೋಗಳು ವೈರಲ್ ಆಗುತ್ತಿವೆ.

ಫೋಟೋಗಳನ್ನು ಶೇರ್ ಮಾಡಿಕೊಂಡ ನಟ ವಿಷ್ಣು ವಿಶಾಲ್ ಅವರು ತಮ್ಮ ಪತ್ನಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಈ ಫೋಟೋಗಳನ್ನು ತೆಗೆದಿರುವುದಾಗಿ ಹೇಳಿದ್ದಾರೆ. ಜ್ವಾಲಾ ಗುಟ್ಟಾ ಅವರು ಬೆತ್ತಲೆ ಅವತಾರದಲ್ಲಿರುವ ತಮ್ಮ ಪತಿಯು ಹಾಸಿಗೆ ಮೇಲೆ ವಿವಿಧ ಭಂಗಿಗಳಲ್ಲಿ ಬಹಳ ಚೆನ್ನಾಗಿ ಫೋಟೋಗಳನ್ನು ತೆಗೆದಿದ್ದಾರೆ. ಈ ಫೋಟೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ವೈವಿದ್ಯಮಯ ವಾದ ಪ್ರತಿಕ್ರಿಯೆಗಳು ಹರಿದು ಬರುತ್ತಿರುವುದು ವಿಶೇಷವಾಗಿದೆ.

ವಿಷ್ಣು ವಿಶಾಲ್ ಅವರು ಫೋಟೋಗಳ ಜೊತೆಯಲ್ಲಿ
‘ಸರಿ…ಟ್ರೆಂಡ್‌ಗೆ ಸೇರ್ಪಡೆಯಾಗುತ್ತಿದ್ದೇನೆ. ನನ್ನ ಪತ್ನಿ ಜ್ವಾಲಾಗುಟ್ಟ ಛಾಯಾಗ್ರಾಹಕರಾಗಿ ಬದಲಾಗಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ವಿಷ್ಣು ತಮ್ಮ ಗುಪ್ತಾಂಗವನ್ನು ಬೆಡ್ ಶೀಟ್ ನಿಂದ ಮುಚ್ಚಿಕೊಂಡು ವಿವಿಧ ರೀತಿಯಲ್ಲಿ ಪೋಸ್ ನೀಡಿದ್ದಾರೆ. ಒಟ್ಟಾರೆ ರಣ್ವೀರ್ ನಂತರ ವಿಷ್ಣು ವಿಶಾಲ್ ಅದೇ ಹಾದಿ ತುಳಿದಿದ್ದು ಇನ್ನೂ ಯಾರೆಲ್ಲಾ ನಟರು ಈ ಸ್ಪರ್ಧೆಗೆ ಇಳಿಯಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *