ಇದು ಸುಲಭ ಅಲ್ಲ: ಈ ಫೋಟೋದಲ್ಲಿ ಹಾವು ಎಲ್ಲಿದೆ? ತಕ್ಷಣ ಕಂಡರೆ ನಿಮ್ಮ ಕಣ್ಣಿನ ನೋಟ ಅದ್ಭುತ!!

Entertainment Featured-Articles News

ಒಗಟುಗಳನ್ನು ಬಿಡಿಸಿ, ಚಿತ್ರದಲ್ಲಿ ಇರುವ ವ್ಯತ್ಯಾಸ ತಿಳಿಸಿ, ಈ ಚಿತ್ರದಲ್ಲಿ ಇರುವ ವಿಶೇಷತೆ ಗುರುತಿಸಿ, ಈ ಚಿತ್ರದಲ್ಲಿ ಏನು ತಪ್ಪಾಗಿದೆ? ಇಂತಹ ಹತ್ತು ಹಲವು ಪ್ರಶ್ನೆಗಳನ್ನು ಹೊತ್ತು ಜನರ ಮುಂದೆ ಸವಾಲು ಬಿಡಿಸಿ ಎನ್ನುವ ಪ್ರಶ್ನೆಗಳನ್ನು ಇಟ್ಟಾಗ, ಸಹಜವಾಗಿಯೇ ಇವುಗಳ ಕಡೆಗೆ ಅನೇಕರ ಗಮನವು ಹರಿಯುತ್ತದೆ. ಕೆಲವರಿಗೆ ಇಂತಹ ಚಟುವಟಿಕೆಗಳು ಎಂದರೆ ಯಾವ ಮಟ್ಟದ ಇಷ್ಟ ಎಂದರೆ ಅವರು ತಾವು ಮಾಡುವ ಕೆಲಸವನ್ನು ಸಹಾ ಬದಿಗೊತ್ತಿ ಇವುಗಳಿಗೆ ಉತ್ತರ ಕಂಡು ಹಿಡಿಯಲು ಕುಳಿತು ಬಿಡುತ್ತಾರೆ. ಈ ಒಗಟುಗಳು ಅಥವಾ ಪಜಲ್ ಗಳ ಕುತೂಹಲವೇ ಹಾಗೆ ಎಂದರೆ ತಪ್ಪಾಗದು.

ಇನ್ನು ಇಂದಿನ ದಿನಗಳಲ್ಲಿ ಫೋಟೋ ಪಜಲ್ ಗಳದ್ದು ದೊಡ್ಡ ಕಾರುಬಾರು. ಒಂದು ಫೋಟೋ ಪಜಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯ್ತು ಎಂದರೆ ಸಾಕು, ನೆಟ್ಟಿಗರು ಅದರಲ್ಲಿನ ರಹಸ್ಯವೇನು? ಅದರಲ್ಲಿ ಅಡಗಿರುವ ವಿಷಯವಾದರೂ ಏನು? ಚಿತ್ರದಲ್ಲಿ ಕಣ್ಣಿಗೆ ಕಾಣದೇ ಹಾವು, ಹುಲಿ, ಚಿರತೆಯಂತಹ ಪ್ರಾಣಿಯು ಎಲ್ಲಿ ಅಡಗಿದೆ ? ಎಂದು ಹುಡುಕುವ ಕಾರ್ಯದಲ್ಲಿ, ಅಂದರೆ ತಮ್ಮ ಕಣ್ಣಿನ ದೃಷ್ಟಿಗೆ ಹಾಗೂ ಮೆದುಳಿನ ಚುರುಕುತನಕ್ಕೆ ಕೆಲಸವನ್ನು ನೀಡುತ್ತಾರೆ.

ಕೆಲವರು ಫೋಟೋಗಳಲ್ಲಿನ ರಹಸ್ಯವೇನು, ಅಡಗಿರುವ ಪ್ರಾಣಿ ಎಲ್ಲಿದೆ ಎನ್ನುವುದನ್ನು ಕೆಲವೇ ನಿಮಿಷಗಳಲ್ಲಿ ಪತ್ತೆ ಹಚ್ಚುತ್ತಾರೆ. ಆದರೆ ಕೆಲವರಿಗೆ ಅದು ಸಾಧ್ಯವಾಗುವುದಿಲ್ಲ. ಈಗ ಪ್ರಸ್ತುತ ನಿಮ್ಮ ಕಣ್ಣಿಗೆ ಮತ್ತು ಬುದ್ಧಿಗೆ ಕೆಲಸ ನೀಡುವ ಹೊಸ ಫೋಟೋ ಪಜಲ್ ಒಂದು ವೈರಲ್ ಆಗಿದೆ‌. ಈಗ ಇದಕ್ಕೆ ಉತ್ತರ ಹುಡುಕುವುದು ನಿಮ್ಮ ಕೆಲಸ. ನಿಮ್ಮ ಕಣ್ಣಿಗೆ ಮತ್ತು ನಿಮ್ಮ ಬುದ್ಧಿಗೆ ಕೆಲಸವನ್ನು ನೀಡಲು ಸಜ್ಜಾಗಿರಿ.

ಈಗ ಜನರ ಗಮನ ಸೆಳೆದಿರುವ ಈ ಫೋಟೋದಲ್ಲಿ ಒಂದು ಕಡೆ ಹುಲ್ಲು ಹಾಗೂ ಗಿಡಗಳು ಬೆಳೆದಿದ್ದು, ಅದರ ನಡುವೆಯೇ ಒಂದು ಹಾವು ಕೂಡಾ ಇದೆ. ಆದರೆ ಅದು ನೋಡಿದ ಕೂಡಲೇ ಎಲ್ಲಿದೆ ಎನ್ನುವುದು ಕಾಣುವುದಿಲ್ಲ. ಹಾವು ಎಲ್ಲಿಗೆ ಎನ್ನುವುದನ್ನು ಹುಡುಕುವುದೇ ಈಗ ಸವಾಲಾಗಿದೆ. ಹಾಗಿದ್ದರೆ ತಡ ಏಕೆ? ವೈರಲ್ ಫೋಟೋದಲ್ಲಿ ಹಾವು ಎಲ್ಲಿದೆ ನೋಡಿ, ಹಾವು ಕಂಡರೆ ಅದನ್ನು ಗುರುತಿಸಿ. ನಿಮ್ಮ ದೃಷ್ಟಿ ಚುರುಕಾಗಿದೆ ಎಂದು ಖುಷಿ ಪಡಿ.

Leave a Reply

Your email address will not be published.