ಇದು ವಿಶೇಷ ಅನುಭವ ಎಂದ ರಶ್ಮಿಕಾ: ನಮ್ಮ‌ ಮನೆಗೂ ಬರಬಾರದಿತ್ತಾ ಎಂದು ಬೇಸರ ಪಟ್ಟ ಅಭಿಮಾನಿಗಳು

Written by Soma Shekar

Published on:

---Join Our Channel---

ಪ್ರಸ್ತುತ ಸಿನಿಮಾ ರಂಗದಲ್ಲಿ ವಿಶೇಷವಾಗಿ ದಕ್ಷಿಣ ಸಿನಿಮಾ ರಂಗದಲ್ಲಿ ರಶ್ಮಿಕಾ ಮಂದಣ್ಣ ದೊಡ್ಡ ಹೆಸರು ಎನ್ನುವುದರಲ್ಲಿ ಅನುಮಾನವೇ ಇಲ್ಲ. ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಬ್ಯುಸಿಯಾಗಿರುವ ಈ ನಟಿ ಕನ್ನಡದಿಂದ ಚಿತ್ರರಂಗಕ್ಕೆ ಅಡಿಯಿಟ್ಟವರೆಂದು ಪ್ರತ್ಯೇಕವಾಗಿ ಹೇಳುವ ಅಗತ್ಯ ಇಲ್ಲ. ಸಾಲು ಸಾಲು ಸಿನಿಮಾಗಳ ಮೂಲಕ ಸ್ಟಾರ್ ನಟರ ಜೊತೆಗೆ ನಾಯಕಿಯಾಗಿ ಮಿಂಚುತ್ತಿರುವ ರಶ್ಮಿಕಾ ಜಾಹೀರಾತುಗಳಲ್ಲಿ ಸಹಾ ಕಾಣಿಸಿಕೊಳ್ಳುವ ಮೂಲಕ ಇನ್ನಷ್ಟು ಜನಪ್ರಿಯತೆ ಪಡೆದಿದ್ದಾರೆ. ಸದ್ಯಕ್ಕೆ ರಶ್ಮಿಕಾ ಕುರಿತಾದ ಪ್ರತಿಯೊಂದು ವಿಚಾರವೂ ದೊಡ್ಡ ಸದ್ದನ್ನು ಮಾಡುತ್ತದೆ.

ರಶ್ಮಿಕಾ ಜನಪ್ರಿಯತೆ ಹೆಚ್ಚಿದಂತೆ ಅನೇಕ ಜನಪ್ರಿಯ ಬ್ರಾಂಡ್ ಗಳು ತಮ್ಮ ಜಾಹೀರಾತುಗಳಲ್ಲಿ ರಶ್ಮಿಕಾ ರನ್ನು ರಾಯಭಾರಿಯನ್ನಾಗಿ ಮಾಡಿಕೊಳ್ಳಲು ಆಸಕ್ತಿ ತೋರಿಸಿವೆ. ಮೆಕ್ ಡೊನಾಲ್ಡ್ ಆದರೆ ಈಗಾಗಲೇ ರಶ್ಮಿಕಾ ಹೆಸರಿನಲ್ಲಿ ರಶ್ಮಿಕಾ ಮೀಲ್ ಎನ್ನುವ ಫುಡ್ ಪ್ಯಾಕೇಜ್ ಅನ್ನೇ ಸಿದ್ಧಪಡಿಸಿದ್ದು, ಅದರ ಜಾಹೀರಾತಿನಲ್ಲಿ ನಟಿ ರಶ್ಮಿಕಾ, ತಮ್ಮ ಹೆಸರಿನ ಫುಡ್ ಅನ್ನು ತಿನ್ನುವುದು ಹೇಗೆ ಎನ್ನುವ ವಿಚಾರವನ್ನು ಹಂಚಿಕೊಳ್ಳುವುದನ್ನು ನಾವು ನೋಡಬಹುದಾಗಿದೆ. ಈ ಮೆಕ್ ಡೊನಾಲ್ಡ್ಸ್ ಇನ್ನೊಂದು ಹೊಸ ಪ್ರಚಾರ ತಂತ್ರವನ್ನು ಬಳಸಿದೆ.

ಹೌದು, ರಶ್ಮಿಕಾ ಮೀಲ್ ಅನ್ನು ಆರ್ಡರ್ ಮಾಡಿದವರಿಗೆ ರಶ್ಮಿಕಾ ತಾವೇ ಖುದ್ದು ಡಿಲೆವರಿ ನೀಡುವ ಮೂಲಕ ಗ್ರಾಹಕರಿಗೆ ಸರ್ಪ್ರೈಸ್ ನೀಡಿದ್ದಾರೆ. ಹೌದು ರಶ್ಮಿಕಾ ಮೆಕ್ ಡೊನಾಲ್ಡ್ಸ್ ಫುಡ್ ಡಿಲೆವರಿ ಗರ್ಲ್ ರೀತಿಯಲ್ಲಿ ಡ್ರೆಸ್ ಮಾಡಿಕೊಂಡು ಮೆಕ್ ಡೊನಾಲ್ಡ್ ಕಂಪನಿಯ ಬೈಕ್ ಏರಿ, ಮುಖಕ್ಕೆ ಮಾಸ್ಕ್ ಹಾಕಿಕೊಂಡು ರಶ್ಮಿಕಾ ಮೀಲ್ ಆರ್ಡರ್ ನೀಡಿದ್ದವರ ಮನೆಗಳಿಗೆ ಅದರ ಡಿಲೆವರಿ ಯನ್ನು ನೀಡಲು ಹೋಗಿದ್ದಾರೆ. ರಶ್ಮಿಕಾ ಅವರನ್ನು ನೋಡಿ ಗ್ರಾಹಕರು ಕೂಡಾ ಖುಷಿ ಪಟ್ಟಿದ್ದಾರೆ.

ರಶ್ಮಿಕಾ ಫುಡ್ ಡಿಲೆವರಿ ಮಾಡಲು ಹೋಗುವ ಸನ್ನಿವೇಶ, ಗ್ರಾಹಕರ ಪ್ರತಿಕ್ರಿಯೆ ಎಲ್ಲವನ್ನೂ ಸಹಾ ಹಿಡನ್ ಕ್ಯಾಮೆರಾದಲ್ಲಿ ಚಿತ್ರೀಕರಣ ಮಾಡಲಾಗಿದೆ. ಮೆಕ್ ಡೊನಾಲ್ಡ್ ಕಂಪನಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ರಶ್ಮಿಕಾ ಕೂಡಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡು ಖುಷಿ ಪಟ್ಟಿದ್ದಾರೆ. ಗ್ರಾಹಕರು ರಶ್ಮಿಕಾ ರನ್ನು ಗುರುತು ಹಿಡಿದು ಖುಷಿಯಿಂದ ಫೋಟೋ ತೆಗೆಸಿಕೊಂಡಿದ್ದಾರೆ.

ರಶ್ಮಿಕಾ ಕೂಡಾ ಇದೊಂದು ವಿಶೇಷ ಅನುಭವವಾಗಿದೆಯೆಂದೂ, ಒಂದು ರೀತಿ ಫನ್ ಆಗಿತ್ತು, ಗ್ರಾಹಕರ ಇಂತಹ ಪ್ರತಿಕ್ರಿಯೆ ನಾನು ಎದುರು ನೋಡಿರಲಿಲ್ಲ ಎಂದಿದ್ದಾರೆ. ಕೆಲವು ಅಭಿಮಾನಿಗಳು ನಮ್ಮ ಮನೆಗಳಿಗೆ ಕೂಡಾ ಈ ರೀತಿ ರಶ್ಮಿಕಾ ಬಂದರೆ ಎಷ್ಟು ಚೆನ್ನಾಗಿರುತ್ತದೆ ಎನ್ನುವ ಮಾತನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಬೇಸರ ಹೊರ ಹಾಕಿದ್ದಾರೆ.

Leave a Comment