ಇದು ಪಕ್ಕಾ ಅರೇಂಜ್ಡ್ ಮದುವೆ: ಶೀಘ್ರದಲ್ಲೇ ಸಪ್ತಪದಿ ತುಳಿಯಲು ಸ್ಯಾಂಡಲ್ವುಡ್ ನಟಿ ಸಜ್ಜು??
ಸ್ಯಾಂಡಲ್ವುಡ್ ನಟಿ ಆಶಿಕಾ ರಂಗನಾಥ್ ಕನ್ನಡ ಸಿನಿ ಪ್ರಿಯರಿಗೆ ಚಿರಪರಿಚಿತ ನಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗಾಗಲೇ 14 ಸಿನಿಮಾಗಳಲ್ಲಿ ನಟಿಸಿರುವ ಇವರು, ತಮ್ಮ ಸಿನಿಮಾ ಜರ್ನಿಯನ್ನು ಆರಂಭಿಸಿದ್ದು 2016 ರಲ್ಲಿ ತೆರೆಗೆ ಬಂದ ಕ್ರೇಜಿ ಬಾಯ್ ಸಿನಿಮಾದ ಮೂಲಕ. ಆಶಿಕಾ ಅವರು ಕನ್ನಡ ಸಿನಿ ಅಭಿಮಾನಿಗಳಿಗೆ ಚುಟು ಚುಟು ಹುಡುಗಿಯಾಗಿಯೇ ಪರಿಚಿತರಾಗಿದ್ದಾರೆ. ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಪಡೆದಿರುವ ನಟಿ ಆಶಿಕಾ ರಂಗನಾಥ್ ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ಸಾಕಷ್ಟು ಸಕ್ರಿಯವಾಗಿದ್ದು, ಸಾಕಷ್ಟು ಹಿಂಬಾಲಕರನ್ನು ಹೊಂದಿದ್ದಾರೆ.
ನಟಿ ಆಶಿಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಅವರ ಅಂದವಾದ ಫೋಟೋಗಳು ಯುವಕರ ಎದೆಯೊಳಗೊಂದು ಕಚಗುಳಿಯನ್ನು ಇಡುತ್ತದೆ. ಫೋಟೋ ಗಳಿಗೆ ಅನೇಕ ಮೆಚ್ಚುಗೆಗಳು ಹರಿದು ಬರುತ್ತವೆ. ಕನ್ನಡ ಸಿನಿಮಾಗಳಲ್ಲಿ ಸಾಕಷ್ಟು ಬೇಡಿಕೆಯನ್ನು ಪಡೆದಿರುವ ಈ ನಟಿಯ ಕೈಯಲ್ಲಿ ಸಾಲು ಸಾಲು ಸಿನಿಮಾಗಳು ಇವೆ ಎನ್ನಲಾಗಿದ್ದು, ಇದರ ನಡುವೆಯೇ ಆಶಿಕಾ ಹೊಸ ಜೀವನದ ಶುಭಾರಂಭಕ್ಕೆ ಅಂದರೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ ಎನ್ನುವ ಸುದ್ದಿಯೊಂದು ಈಗ ಸದ್ದು ಮಾಡಿದೆ.
ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಆಶಿಕಾ ಅವರು ಮದುವೆಯಾಗಬೇಕು, ಮನೆಯಲ್ಲಿ ಅದಕ್ಕಾಗಿ ಹುಡುಗನನ್ನು ನೋಡುತ್ತಿದ್ದಾರೆ, ನಾನಿನ್ನೂ ಸಿಂಗಲ್ ಎನ್ನುವ ಮಾತನ್ನು ಹೇಳಿದ್ದರು. ಅಂದು ಅವರು ಹೇಳಿದ ಹಾಗೆ ಈಗ ಅವರ ತಂದೆ ತಾಯಿ ಮಗಳಿಗೆ ತಕ್ಕನಾದ ವರನನ್ನು ಹುಡುಕಿದ್ದಾರೆನ್ನಲಾಗಿದೆ. ಆಶಿಕಾ ಮದುವೆಗೆ ಸಜ್ಜಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳು ಮಾತನಾಡಿಕೊಳ್ಳುವುದರ ಜೊತೆಗೆ, ನಟಿಯ ಆಪ್ತರ ವಲಯದಿಂದ ಸಹಾ ಹೀಗೊಂದು ಮಾತು ಕೇಳಿ ಬಂದಿದೆ.
ಶೀಘ್ರದಲ್ಲೇ ಅಧಿಕೃತ ಘೋಷಣೆ ಆಗಬಹುದು ಎನ್ನಲಾಗಿದೆ. ಇನ್ನು ವರ ಯಾರು? ಎನ್ನುವುದು ಬಹಿರಂಗವಾಗಿಲ್ಲವಾದರೂ, ಖಾಸಗಿ ವೆಬ್ ಪೋರ್ಟಲ್ ಒಂದರ ಪ್ರಕಾರ ವರ ಉದ್ಯಮಿಯೆಂದು, ಕೋಟ್ಯಾಧಿಪತಿ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ನಡೆಯಲಿದ್ದು, ಈ ವರ್ಷದ ಕೊನೆಯ ವೇಳೆಗೆ ಮದುವೆ ನಡೆಯಲಿದ್ದ ಎಂದು ಹೇಳಲಾಗುತ್ತಿದೆ. ಇನ್ನು ನಟಿ ಆಶಿಕಾ ಈ ಬಗ್ಗೆ ಏನು ಹೇಳುವರು ಎನ್ನುವ ಕಡೆಗೆ ಅವರ ಅಭಿಮಾನಿಗಳ ನಿರೀಕ್ಷೆ ಇದೆ.