ಇದು ಖಂಡಿತ ಅಚ್ಚರಿಯ ಬೆಳವಣಿಗೆ: ಪ್ರೇಕ್ಷಕರಿಗೆ ಶಾಕ್ ಕೊಡುತ್ತಾ ಜೊತೆ ಜೊತೆಯಲಿ ಸೀರಿಯಲ್ ತಂಡ!!

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡಿರುವ ಸೀರಿಯಲ್ ಯಾವುದು ಎನ್ನುವುದಾದರೆ ಅದು ಜೊತೆ ಜೊತೆಯಲಿ ಸೀರಿಯಲ್. ಮೊದಲು ಸೀರಿಯಲ್ ತನ್ನ ಕಥೆ, ಕಥಾನಕ ಹಾಗೂ ಟಿ ಆರ್ ಪಿ ಯಲ್ಲಿ ಬರೆದ ಹೊಸ ದಾಖಲೆಗಳ ವಿಚಾರವಾಗಿ ಸದ್ದು ಮಾಡಿದರೆ, ಇತ್ತೀಚಿಗೆ ಸೀರಿಯಲ್ ನ ನಾಯಕ ನಟ ಹಾಗೂ ಸೀರಿಯಲ್ ತಂಡದ ನಡುವೆ ಉಂಟಾದ ವೈಮನಸ್ಸಿನ ವಿಚಾರವಾಗಿ ಸುದ್ದಿಯಾಗಿದೆ. ಧಾರಾವಾಹಿ ತಂಡದಲ್ಲಿ ಮೂಡಿದ ಸಮಸ್ಯೆಯ ಕಾರಣದಿಂದಾಗಿ ಜೊತೆ ಜೊತೆಯಲಿ ಸೀರಿಯಲ್ ನ ನಾಯಕನಾಗಿ ಆರ್ಯವರ್ಧನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟ ಅನಿರುದ್ಧ್ ಅವರು ಸೀರಿಯಲ್ ನ ತಮ್ಮ ಪಾತ್ರದಿಂದ ಹೊರ ಬಂದಾಗಿದೆ. ಇದನ್ನು ವಾಹಿನಿ ಮತ್ತು ಸೀರಿಯಲ್ ತಂಡವು ಸಹಾ ಅಧಿಕೃತವಾಗಿ ಘೊಷಣೆ ಮಾಡಿದೆ.

ನಟ ಅನಿರುದ್ಧ್ ಅವರು ಹೊರ ಬಂದ ನಂತರ, ಆರ್ಯವರ್ಧನ್ ಪಾತ್ರದಲ್ಲಿ ಅವರೇ ಇರಬೇಕೆಂದು ಅಭಿಮಾನಿಗಳು ಮಾದ್ಯಮಗಳ ಮುಂದೆ ಹೇಳಿದರು. ಒಂದಷ್ಟು ಚರ್ಚೆಗಳು ನಡೆದವು. ಇವೆಲ್ಲವುಗಳ ನಡುವೆಯೇ ಆರ್ಯವರ್ಧನ್ ಪಾತ್ರಕ್ಕೆ ಬರುವ ಹೊಸ ನಟ ಯಾರು ? ಎಂದು ಪ್ರಶ್ನೆ ಮೂಡಿತು. ಜನಪ್ರಿಯ ನಟರ ಹೆಸರುಗಳು ಹರಿದಾಡಿದವು. ಹೀಗೆ ಬಹಳಷ್ಟು ಬೆಳವಣಿಗೆಗಳ ನಡುವೆಯೇ ಮಾದ್ಯಮವೊಂದು ಮಾಡಿರುವ ವರದಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಹೌದು, ಇನ್ಮುಂದೆ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಆರ್ಯವರ್ಧನ್ ಪಾತ್ರ ವ್ಯಕ್ತಿಯ ರೂಪದಲ್ಲಿ ಎದುರಿಗೆ ಬರುವುದಿಲ್ಲ ಎನ್ನುವುದು.

ಅಂದರೆ ಆರ್ಯವರ್ಧನ್ ಹೆಸರು ಇರುತ್ತದೆ ಆದರೆ ಆ ಪಾತ್ರ ಇರುವುದಿಲ್ಲ ಎನ್ನುವುದು. ಇದರರ್ಥ ನಾಯಕನೇ ಇಲ್ಲದೇ ಸೀರಿಯಲ್ ಅನ್ನು ಮುಂದುವರೆಸುವುದು ಎನ್ನಲಾಗಿದೆ. ಹಾಗಾದರೆ ಇಷ್ಟು ದಿನ ಆರ್ಯವರ್ಧನ್ ಪಾತ್ರಕ್ಕೆ ಬೇರೆ ನಟರ ಹೆಸರುಗಳು ಹರಿದಾಡಿದ್ದು ಏಕೆ? ಎನ್ನುವುದಾದರೆ, ಬೇರೆ ನಟನ ಎಂಟ್ರಿ ಖಚಿತ ಆದರೆ ಆರ್ಯವರ್ಧನ್ ಪಾತ್ರಕ್ಕಲ್ಲ ಎನ್ನಲಾಗುತ್ತಿದೆ. ಅಂದರೆ ಕಥೆಯಲ್ಲಿ ಒಂದು ಹೊಸ ಟ್ವಿಸ್ಟ್ ಮೂಡಿ ಬರುವ ನಿರೀಕ್ಷೆ ಇದೆ. ಆರ್ಯವರ್ಧನ್ ಪಾತ್ರದ ಬದಲಾಗಿ ಮತ್ತೊಂದು ಪಾತ್ರವು ಪ್ರಮುಖ ಪಾತ್ರವಾಗಿ ಎಂಟ್ರಿ ನೀಡಲಿದೆ ಎನ್ನುವ ನಿರೀಕ್ಷೆ ಇದೆ.

ಕಿರುತೆರೆಯ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡು, ಅಭಿಮಾನವನ್ನು ತನ್ನದಾಗಿಸಿಕೊಂಡಿದ್ದ ಆರ್ಯವರ್ಧನ್ ಪಾತ್ರವೇ ಇಲ್ಲದೇ ಸೀರಿಯಲ್ ಮಾಡುವುದು ಎಂದಾಗ ಇದು ಒಂದು ಹೊಸ ಪ್ರಯತ್ನ ಎನಿಸಿದರೂ, ಇಂತಹುದೊಂದು ಪ್ರಯೋಗ ಮಾಡಲು ಸಾಕಷ್ಟು ಧೈರ್ಯ ಮತ್ತು ಸಿದ್ಧತೆಗಳು ಸಹಾ ಇರಬೇಕು. ಏಕೆಂದರೆ ಜನರು ತಮ್ಮ ಮನ ಮೆಚ್ಚಿದ ಪಾತ್ರದ ಬದಲಿಗೆ ಬೇರೊಂದು ಪಾತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದೇ ಈಗ ಎಲ್ಲರ ಮುಂದೆ ಇರುವ ದೊಡ್ಡ ಪ್ರಶ್ನೆ. ಇದಕ್ಕೆ ಉತ್ತರ ಕಾದು ನೋಡಬೇಕಾಗಿದೆ.

Leave a Comment