ಬಿಗ್ ಬಾಸ್ ಶೋ ಎಂದರೆ ಅದಕ್ಕೆ ಅದರದ್ದೇ ಆದಂತಹ ಕ್ರೇಜ್ ಇದೆ. ಬಿಗ್ ಬಾಸ್ ಹಿಂದಿ ಮಾತ್ರವೇ ಅಲ್ಲದೇ ಪ್ರಾದೇಶಿಕ ಭಾಷೆಗಳಲ್ಲಿ ಕೂಡಾ ಕಿರುತೆರೆಯ ಜನಪ್ರಿಯ, ಯಶಸ್ವಿ ಹಾಗೂ ಅತಿ ದೊಡ್ಡ ರಿಯಾಲಿಟಿ ಶೋ ಎನ್ನುವ ಖ್ಯಾತಿಯನ್ನು ಸಹಾ ಪಡೆದುಕೊಂಡಿವೆ. ಇನ್ನು ಈ ಶೋ ಗಳ ಪ್ರಮುಖ ಆಕರ್ಷಣೆ ಬಿಗ್ ಹೌಸ್ ಪ್ರವೇಶ ಮಾಡುವ ಸೆಲೆಬ್ರಿಟಿ ಸ್ಪರ್ಧಿಗಳು ಒಂದು ಕಡೆ ಆದರೆ, ವಾರಾಂತ್ಯದಲ್ಲಿ ಅವರ ಖಡಕ್ ಕ್ಲಾಸ್ ತೆಗೆದುಕೊಳ್ಳುವ, ಅವರನ್ನು ನಿಭಾಯಿಸಿ, ಸಂಭಾಳಿಸುವ ನಿರೂಪಕರು ದೊಡ್ಡ ಆಕರ್ಷಣೆ ಹಾಗೂ ಶೋ ನ ಅತಿ ಮುಖ್ಯ ಭಾಗವೂ ಆಗಿರುತ್ತಾರೆ.
ಆದ್ದರಿಂದಲೇ ಪ್ರತಿ ಭಾಷೆಯಲ್ಲೂ ಬಿಗ್ ಬಾಸ್ ನಿರೂಪಕರಾಗಿರುವ ಸಿನಿಮಾ ಸ್ಟಾರ್ ಗಳು ಪ್ರತಿ ಹೊಸ ಸೀಸನ್ ನಲ್ಲೂ ನಿರೂಪಕರಾಗಿ ಮಿಂಚುತ್ತಿದ್ದು ಅವರಿಲ್ಲದೇ ವೀಕೆಂಡ್ ಶೋ ವನ್ನು ಊಹಿಸಿಕೊಳ್ಳುವುದು ಸಹಾ ಕಷ್ಟವಾಗಿ ಬಿಡುತ್ತದೆ. ಏಕೆಂದರೆ ಶೋ ಮತ್ತು ಪ್ರೇಕ್ಷಕರು ಕೂಡಾ ಅವರೊಂದಿಗೆ ಅಷ್ಟೊಂದು ಬೆಸೆದುಕೊಂಡಿರುತ್ತಾರೆ. ಕನ್ನಡದಲ್ಲಿ ಈ ಬಾರಿ ಇನ್ನೂ ಬಿಗ್ ಬಾಸ್ ನ ಹೊಸ ಸೀಸನ್ ಆರಂಭವಾಗಿಲ್ಲ. ಆದರೆ ನೆರೆಯ ರಾಜ್ಯಗಳಲ್ಲಿ ತೆಲುಗು, ತಮಿಳು ಬಿಗ್ ಬಾಸ್ ನ ಹೊಸ ಸೀಸನ್ ಆರಂಭವಾಗಿದೆ.
ತಮಿಳಿನಲ್ಲಿ ಈಗ ಬಿಗ್ ಬಾಸ್ ಸೀಸನ್ 5 ನಡೆಯುತ್ತಿದ್ದು ಕಳೆದ ನಾಲ್ಕು ಸೀಸನ್ ಗಳ ನಿರೂಪಣೆ ಮಾಡಿದ ಸ್ಟಾರ್ ನಟ ಕಮಲ ಹಾಸನ್ ಅವರೇ ಈ ಬಾರಿ ಸಹಾ ನಿರೂಪಣೆ ಮಾಡುತ್ತಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ಅಮೆರಿಕಾ ಪ್ರವಾಸ ಮುಗಿಸಿ ಕೊಂಡು ಬಂದ ಕಮಲ ಹಾಸನ್ ಅವರಿಗೆ ಕೊರೊನಾ ಪಾಸಿಟಿವ್ ಆದ ಕಾರಣ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ದರಿಂದಲೇ ಈ ವೀಕೆಂಡ್ ಬಿಗ್ ಬಾಸ್ ಯಾರು ನಿರೂಪಣೆ ಮಾಡಲಿದ್ದಾರೆ ಎನ್ನುವುದು ದೊಡ್ಡ ಪ್ರಶ್ನೆಯಾಗಿತ್ತು.
ಎರಡು ದಿನಗಳ ಹಿಂದೆ ತಮಿಳು ಬಿಗ್ ಬಾಸ್ ನ ವಾರಾಂತ್ಯದ ಎಪಿಸೋಡ್ ಗಳನ್ನು ಕಮಲ ಹಾಸನ್ ಅವರ ಮಗಳು ಶೃತಿ ಹಾಸನ್ ನಡೆಸಿಕೊಡುವರು ಎನ್ನುವ ಸುದ್ದಿ ಹೊರ ಬಂದಿತ್ತು. ಆದರೆ ಕೊನೆಯ ಹಂತದಲ್ಲಿ ಶೃತಿ ಹಾಸನ್ ಅವರು ಶೋ ನಿರೂಪಣೆ ಮಾಡುತ್ತಿಲ್ಲ ಅವರ ಬದಲಾಗಿ ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿಯು ನಿರೂಪಣೆ ಮಾಡುತ್ತಾರೆ ಎನ್ನುವ ಸುದ್ದಿ ಅಧಿಕೃತವಾಗಿದೆ. ಹೌದು ತಮಿಳು ಬಿಗ್ ಬಾಸ್ ವೀಕೆಂಡ್ ಈ ಬಾರಿ ನಟಿ ರಮ್ಯಕೃಷ್ಣ ನಡೆಸಿಕೊಡಲಿದ್ದಾರೆ.
ಕಿರುತೆರೆಯಲ್ಲಿ ಈಗಾಗಲೇ ಹಲವು ಸೀರಿಯಲ್ ಗಳು, ರಿಯಾಲಿಟಿ ಶೋ ಗಳ ಜಡ್ಜ್ ಆಗಿ ಅನುಭವ ಇರುವ ರಮ್ಯಕೃಷ್ಣ ಅವರು ಹಿಂದೊಮ್ಮೆ ತೆಲುಗು ಬಿಗ್ ಬಾಸ್ ನಲ್ಲಿ ನಾಗಾರ್ಜುನ ಅವರ ಅನುಪಸ್ಥಿತಿಯಲ್ಲಿ ಅತಿಥಿ ನಿರೂಪಕಿಯಾಗಿ ಜವಾಬ್ದಾರಿ ನಿರ್ವಹಿಸಿದರು. ಈಗ ಮತ್ತೊಮ್ಮೆ ಅದೇ ರೀತಿಯಲ್ಲಿ ತಮಿಳಿನ ಬಿಗ್ ಬಾಸ್ ನಲ್ಲಿ ಕೂಡಾ ಅತಿಥಿ ನಿರೂಪಕಿಯಾಗಿ ಮಿಂಚಲು ಸಿದ್ಧವಾಗಿದ್ದಾರೆ.