ಇದು ಉದ್ಯೋಗಿಗಳದ್ದೇ ಪರಿಶ್ರಮ: ಚೈನ್ನೈನ ಐಟಿ ಕಂಪನಿ ಕೊಡ್ತು 100 ಜನ ಉದ್ಯೋಗಿಗಳಿಗೆ ಭರ್ಜರಿ ಉಡುಗೊರೆ!!

Entertainment Featured-Articles News

ಕಂಪನಿಗಳಲ್ಲಿ ಉದ್ಯೋಗಿಗಳಿಗೆ ವೇತನ ಹಾಗೂ ಬೋನಸ್ ನೀಡುವುದು ಎಲ್ಲರಿಗೂ ತಿಳಿದಂತಹ ವಿಷಯವಾಗಿದೆ. ಬೋನಸ್ ನೀಡುವುದು ಉದ್ಯೋಗಿಗಳಿಗೆ ಒಂದು ರೀತಿಯಲ್ಲಿ ಅವರಿಗೆ ಪ್ರೋತ್ಸಾಹ ಹಾಗೂ ಉತ್ತೇಜನ ನೀಡುವುದೇ ಆಗಿರುತ್ತದೆ. ಅಲ್ಲದೇ ಕಂಪನಿಗಾಗಿ, ಅದರ ಒಳಿತಿಗಾಗಿ ದುಡಿದವರ ಶ್ರಮವನ್ನು ಗುರ್ತಿಸುವುದು ಸಹಾ ಅವಶ್ಯಕವಾಗಿರುತ್ತದೆ. ಎಲ್ಲಿ ಕೆಲಸಕ್ಕೆ ತಕ್ಕಂತಹ ಪ್ರತಿಫಲ ದೊರೆಯುವುದೋ ಅಲ್ಲಿ ಸಹಜವಾಗಿಯೇ ಉದ್ಯೋಗಿಗಳು ಹೆಚ್ಚಿನ ಶ್ರಮ ವಹಿಸಿ ತಮ್ಮ ಉದ್ಯೋಗವನ್ನು ಮಾಡುತ್ತಾರೆ.

ಚೆನ್ನೈ ಮೂಲದ ಒಂದು ಐಟಿ ಕಂಪನಿ ಸೋಮವಾರದಂದು ತನ್ನ ಉದ್ಯೋಗಿಗಳಿಗೆ ಭರ್ಜರಿ ಉಡುಗೊರೆಯನ್ನು ನೀಡುವ ಮೂಲಕ ಮಾದ್ಯಮಗಳ ಸುದ್ದಿಗಳಲ್ಲಿ ಸಖತ್ ಸದ್ದು ಮಾಡಿದೆ. ಹೌದು, ಈ ಐಟಿ ಕಂಪನಿಯು ಉದ್ಯೋಗಿಗಳು ನೀಡಿದ ನಿರಂತರ ಬೆಂಬಲ, ಕಂಪನಿಯ ಯಶಸ್ಸು ಹಾಗೂ ಬೆಳವಣಿಗೆಗೆ ಉದ್ಯೋಗಿಗಳು ನೀಡಿದ ಶ್ರಮಕ್ಕೆ ಪ್ರತಿಯಾಗಿ ಅವರಿಗೆ ಭರ್ಜರಿ ಉಡುಗೊರೆ ಯನ್ನು ನೀಡುವ ಮೂಲಕ ಉದ್ಯೋಗಿಗಳಿಗೆ ಇನ್ನಷ್ಟು ಉತ್ತೇಜನ ನೀಡಿ, ಅವರನ್ನು ಖುಷಿ ಪಡಿಸಿದೆ.

ಐಡಿಯಾಸ್2ಐಟಿ ಹೆಸರಿನ ಐಟಿ ಕಂಪನಿಯೊಂದು ತನ್ನ 100 ಜನ ಉದ್ಯೋಗಿಗಳಿಗೆ ಮಾರುತಿ ಸುಜುಕಿ ಕಂಪನಿಯ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. ಕಂಪನಿಯ ಮಾರ್ಕೆಟಿಂಗ್ ಹೆಡ್ ಆಗಿರುವ ಹರಿ ಸುಬ್ರಮಣಿಯನ್ ಅವರು ಈ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಾ, ಕಂಪನಿಯಲ್ಲಿ ಹತ್ತು ವರ್ಷಕ್ಕೂ ಅಧಿಕ ಅವಧಿಯಿಂದ ಕೆಲಸ ಮಾಡುತ್ತಿರುವ ನೂರು ಜನ ಉದ್ಯೋಗಿಗಳಿಗೆ ನೂರು ಕಾರುಗಳನ್ನು ಉಡುಗೊರೆಯಾಗಿ ನೀಡುತ್ತಿದ್ದೇವೆ. ಕಂಪನಿಯಲ್ಲಿ ಒಟ್ಟು 500 ಉದ್ಯೋಗಿಗಳಿದ್ದಾರೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಅವರು ನಾವು ಪಡೆದಂತಹ ಸಂಪತ್ತನ್ನು ಉದ್ಯೋಗಿಗಳಿಗೆ ಹಿಂತಿರುಗಿಸುವುದೇ ನಮ್ಮ ಪರಿಕಲ್ಪನೆಯಾಗಿದೆ ಎಂದು ಹೇಳಿದ್ದಾರೆ. ಕಂಪನಿಯ ಸಂಸ್ಥಾಪಕ ಮತ್ತು ಅಧ್ಯಕ್ಷ ಮುರಳಿ ವಿವೇಕಾನಂದ ಅವರು, ಕಂಪನಿಯ ಏಳಿಗೆಗಾಗಿ ಉದ್ಯೋಗಿಗಳು ಸಾಕಷ್ಟು ಶ್ರಮವನ್ನು ವಹಿಸಿದ್ದಾರೆ. ಕಂಪನಿಯು ಅವರಿಗೆ ಕಾರುಗಳನ್ನು ನೀಡುತ್ತಿಲ್ಲ ಬದಲಿಗೆ ಉದ್ಯೋಗಿಗಳು ಅವರೇ ತಮ್ಮ ಪರಿಶ್ರಮದಿಂದ ಇದನ್ನು ಗಳಿಸಿದ್ದಾರೆ ಎನ್ನುವ ಮಾತುಗಳನ್ನು ಹೇಳಿದ್ದಾರೆ.

Leave a Reply

Your email address will not be published.