ಇದು ಅನಿರೀಕ್ಷಿತ!! ಜೊತೆಜೊತೆಯಲಿ ಸೀರಿಯಲ್ ನ ಪ್ರಮುಖ ಪಾತ್ರದಲ್ಲಿ ಮಹತ್ವದ ಬದಲಾವಣೆ!!

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯ ಲೋಕದಲ್ಲಿ ಧಾರಾವಾಹಿಗಳು ಅನೇಕ ಇದ್ದರೂ ಕೂಡಾ ಕೆಲವು ಧಾರಾವಾಹಿಗಳು ಮಾತ್ರವೇ ಜನರ ಅಪಾರವಾದ ಆದರ ಮತ್ತು ಅಭಿಮಾನವನ್ನು ತಮ್ಮದಾಗಿಸಿಕೊಳ್ಳುತ್ತವೆ. ಎಲ್ಲಾ ಸೀರಿಯಲ್ ಗಳು ಸಹಾ ಜನರ ಮನಸ್ಸನ್ನು ಗೆಲ್ಲುವುದು ಕಷ್ಟ. ಹಾಗೆ ಪ್ರಾರಂಭವಾದ ಮೊದಲನೇ ವಾರದಲ್ಲೇ ಅಪಾರ ಜನಾದರಣೆಯನ್ನು ಪಡೆದು ಕಿರುತೆರೆಯಲ್ಲಿ ಒಂದು ಹೊಸ ದಾಖಲೆಯನ್ನು ಬರೆದ ಸೀರಿಯಲ್ ಎಂದರೆ ಅದು ಜೊತೆ ಜೊತೆಯಲಿ, ಈ ಧಾರಾವಾಹಿ ಕಿರುತೆರೆಯ ಪ್ರೇಕ್ಷಕರಿಗೆ ಒಂದು ಹೊಸ ಅನುಭೂತಿಯನ್ನು ನೀಡಿತ್ತು, ಹೊಸತನ ವೊಂದು ಪ್ರೇಕ್ಷಕರಿಗೆ ಇಲ್ಲಿ ಕಂಡಿತ್ತು.

ಆದ್ದರಿಂದಲೇ ಜೊತೆ ಜೊತೆಯಲಿ ಬಹಳ ಬೇಗ ಜನಪ್ರಿಯತೆಯ ಉತ್ತುಂಗವನ್ನು ಏರಿ, ಟಾಪ್ ಒನ್ ಸೀರಿಯಲ್ ಆಗಿ ಕಿರುತೆರೆಯನ್ನು ಆಳಿದ್ದು ಈಗ ಹಳೆಯ ಮಾತು. ಮಹಿಳೆಯರು ಹೆಚ್ಚಾಗಿ ಸೀರಿಯಲ್ ನೋಡುತ್ತಾರೆ ಎನ್ನುವುದಕ್ಕೆ ಅ ಪ ವಾ ದ ಎಂಬಂತೆ ಪುರುಷರು ಕೂಡಾ ಜೊತೆ‌ ಜೊತೆಯಲಿ ನೋಡಲು ಆರಂಭಿಸಿದರು. ಈ ಧಾರಾವಾಹಿಯ ಪ್ರತಿ ಪಾತ್ರವೂ ಸಹಾ ಜನರ ಮೆಚ್ಚುಗೆಗಳನ್ನು ತಮ್ಮದಾಗಿಸಿಕೊಂಡವು, ಜನ ಆ ಕಲಾವಿದರನ್ನು ಅವರ ಪಾತ್ರದ ಮೂಲಕವೇ ಗುರುತಿಸಲು ಪ್ರಾರಂಭಿಸಿದರು.

ಈ ಧಾರಾವಾಹಿಯ ಪ್ರಮುಖ ಆಕರ್ಷಣೆ ಎಂದರೆ ನಾಯಕ ಆರ್ಯವರ್ಧನ್ ಮತ್ತು ನಾಯಕಿ ಅನು ಸಿರಿಮನೆ, 45 ವಯಸ್ಸಿನ ನಾಯಕನಿಗೆ 21 ವಯಸ್ಸಿನ ನಾಯಕಿ ಎಂದಾಗಲೇ ಒಂದು ಕುತೂಹಲ ಖಂಡಿತ ಮೂಡಿತ್ತು. ಆರ್ಯವರ್ಧನ್ ಪಾತ್ರದಲ್ಲಿ ನಟ ಅನಿರುದ್ಧ್ ಜೀವ ತುಂಬಿ ನಟಿಸಿದರು, ದೊಡ್ಡ ಮಟ್ಟದ ಜನಾದರಣೆ ಪಡೆದರು. ಆರ್ಯವರ್ಧನ್ ಎಂದರೆ ಅಲ್ಲೊಂದು ಗಾಂಭೀರ್ಯ, ನಂಬಿಕೆ, ಮಿಸ್ಟರ್ ಪರ್ಫೆಕ್ಟ್, ಒಬ್ಬ ಪರ್ಫೆಕ್ಟ್ ಜಂಟಲ್ ಮ್ಯಾನ್ ಪಾತ್ರ. ಆ ಪಾತ್ರದಲ್ಲಿ ಅನಿರುದ್ದ್ ಅವರು ಅಷ್ಟೇ ಪರ್ಫೆಕ್ಟ್ ಆಗಿದ್ದಾರೆ ಎನ್ನುವುದು ಪ್ರೇಕ್ಷಕರ ಮಾತು ಕೂಡಾ ಹೌದು.

ಆದರೆ ಈಗ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಆರ್ಯವರ್ಧನ್ ಹಾಗೂ ಅನು ಮದುವೆಯ ನಂತರ ಬಹುದೊಡ್ಡ ಟ್ವಿಸ್ಟ್ ಒಂದು ಎದುರಾಗಿದೆ. ಹೌದು ಇಷ್ಟು ದಿನ ಯಾವ ಆರ್ಯವರ್ಧನ್ ಪಾತ್ರವು ಮಾದರಿ ಎನಿಸಿತ್ತೋ, ಆ ಪಾತ್ರದಲ್ಲಿ ಇನ್ನೊಂದು ನೆರಳು ಅಡಗಿದೆ, ಅದು ಖಳನಾಯಕನದ್ದು ಎನ್ನುವಂತೆ ಆರ್ಯವರ್ಧನ್ ನ ಹೊಸ ರೂಪ ಅನಾವರಣಗೊಳ್ಳುತ್ತಿದೆ. ಅನಿರುದ್ಧ್ ಅವರಿಗೆ ಕೂಡಾ ಈಗ ಹೊಸ ರೂಪದಲ್ಲಿ ತಮ್ಮನ್ನು ತಾವು ಪ್ರೇಕ್ಷಕರ ಮುಂದೆ ಪ್ರಸ್ತುತ ಪಡಿಸುವ ಅವಕಾಶವೂ ದೊರೆತಿದೆ.

ಈ ವಿಷಯವಾಗಿ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಕೂಡಾ ಬರೆದುಕೊಂಡಿದ್ದು,
ಜೆಜೆ ಅಂದರೆ ತಿರುವುಗಳು ನಾನು ನಾಯಕ ನ ? ಖಳನಾಯಕ ನ ? ಒಬ್ಬ ಕಲಾವಿದನಾಗಿ ಈ ಹೊಸ ಸವಾಲು ನನಗೆ ಸಂತೋಷ ಕೊಡುತ್ತಿದೆ. ವೀಕ್ಷಿಸುವಾಗ ಖಂಡಿತವಾಗ್ಲೂ ತಾವೂಕೂಡ ಸಂತೋಷ ಪಡುತ್ತಿರ. ಈ ಪ್ರವಾಸ ನ ನಾವೆಲ್ಲರೂ ಸೇರಿ ಆನಂದಿಸೋಣ ಎಂದು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ಜೊತೆ ಜೊತೆಯಲಿ ಇನ್ನಷ್ಟು ರೋಚಕತೆ ಇರಲಿದೆ ಎನ್ನುವ ಸುಳಿವನ್ನು ನೀಡಿದ್ದಾರೆ.

Leave a Comment