ಇದುವರೆಗೆ ಯಾವ ನಟಿಯೂ ಇಂತ ಪಾತ್ರ ಮಾಡಿಲ್ಲ: ಹೊಸ ಅವತಾರದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ!!

Entertainment Featured-Articles News

ಮಿಲ್ಕಿ ಬ್ಯೂಟಿ ಎಂದು ಜನಪ್ರಿಯತೆಯನ್ನು ಪಡೆದುಕೊಂಡಿರುವ ದಕ್ಷಿಣ ಸಿನಿಮಾರಂಗದ ಸ್ಟಾರ್ ನಟಿ ತಮನ್ನಾ ಭಾಟಿಯಾ ತೆಲುಗು, ತಮಿಳು ಭಾಷೆಗಳ ಸಿನಿಮಾಗಳ ಜೊತೆಗೆ ಬಾಲಿವುಡ್ ಸಿನಿಮಾಗಳಲ್ಲೂ ಕೂಡಾ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಹಿಂದೆಯೂ ನಟಿ ತಮನ್ನಾ ಬಾಲಿವುಡ್ ನ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವರಿಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ತಂದು ಕೊಡುವಂತಹ ಅಥವಾ ಬಾಲಿವುಡ್ ನಲ್ಲಿ ನೆಲೆ ನಿಲ್ಲುವಂತಹ ಯಶಸ್ಸು ಆ ಸಿನಿಮಾಗಳಿಗೆ ದಕ್ಕಿರಲಿಲ್ಲ. ತಮನ್ನಾ ಸ್ಟಾರ್ ನಟಿಯಾಗಿ ಬೆಳೆದಿದ್ದು ದಕ್ಷಿಣ ಸಿನಿಮಾರಂಗದಲ್ಲಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ.

ಈಗ ಮತ್ತೊಮ್ಮೆ ನಟಿ ತಮನ್ನಾ ಭಾಟಿಯಾ ಬಾಲಿವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಬಾಲಿವುಡ್ ನಲ್ಲಿ ಫ್ಯಾಷನ್, ಹೀರೋಯಿನ್ ಗಳಂತಹ ಉತ್ತಮ ಚಿತ್ರಗಳ ನಿರ್ದೇಶನದ ಮೂಲಕ ಹೆಸರಾಗಿರುವ ಜನಪ್ರಿಯ ನಿರ್ದೇಶಕ ಮಧುರ್ ಭಂಡಾರ್ಕರ್ ತಮ್ಮ ಹೊಸ ಸಿನಿಮಾವನ್ನು ಪ್ರಕಟಣೆ ಮಾಡಿದ್ದು, ಈ ಹೊಸ ಸಿನಿಮಾಕ್ಕೆ ಬಬ್ಲಿ ಬೌನ್ಸರ್ ಎನ್ನುವ ಶೀರ್ಷಿಕೆಯನ್ನು ಇಡಲಾಗಿದ್ದು, ಈ ಸಿನಿಮಾದಲ್ಲಿ ತಮನ್ನಾ ನಾಯಕಿಯಾಗಿದ್ದಾರೆ. ಬಾಕ್ಸಿಂಗ್ ಕಥಾಹಂದರವನ್ನು ಹೊಂದಿರುವ ಈ ಸಿನಿಮಾದಲ್ಲಿ ತಮನ್ನಾ ಪಾತ್ರ ಬಹಳ ವಿಶೇಷವಾಗಿ ಇರಲಿದೆ ಎಂದು ಹೇಳಲಾಗುತ್ತಿದೆ.

ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ಮತ್ತು ಜಂಗ್ಲಿ ಪಿಕ್ಚರ್ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಲಿದ್ದು, ಸಿನಿಮಾದ ಮುಹೂರ್ತ ನಡೆದಿದ್ದು, ಚಿತ್ರೀಕರಣವು ಪ್ರಾರಂಭವಾಗಿದ್ದ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿರುವ ನಿರ್ದೇಶಕ ಮಧುರ್ ಭಂಡಾರ್ಕರ್ ಅವರು ತಾನು ಈ ಹಿಂದೆ ನಿರ್ದೇಶನ ಮಾಡಿದ ಎಲ್ಲಾ ಸಿನಿಮಾಗಳಿಗಿಂತ ಬಬ್ಲಿ ಬೌನ್ಸರ್ ವಿಭಿನ್ನವಾಗಿರಲಿದೆ ಎಂದು ಹೇಳಿದ್ದಾರೆ. ಬಾಕ್ಸಿಂಗ್ ಕಥಾಹಂದರವನ್ನು ಹೊಂದಿರುವ ಈ ಸಿನಿಮಾದಲ್ಲಿ ತಮನ್ನಾ ಮಹಿಳಾ ಬೌನ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಭಾರತ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಒಬ್ಬ ಮಹಿಳಾ ಬೌನ್ಸರ್ ಕಥೆಯನ್ನು ಆಧರಿಸಿ ಸಿನಿಮಾವನ್ನು ಮಾಡಲಾಗುತ್ತಿದೆ ಎಂದು ತಿಳಿಸಿರುವ ಮಧುರ್ ಭಂಡಾರ್ಕರ್ ಅವರು, ಈ ಸಿನಿಮಾದ ಹೆಚ್ಚಿನ ಮಾಹಿತಿಯನ್ನು ಅಧಿಕೃತವಾಗಿ ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಹೇಳಿದ್ದಾರೆ. ತಮನ್ನಾ ಭಾಟಿಯಾ ಮೊದಲ ಬಾರಿಗೆ ಒಂದು ಹೊಸ ಅವತಾರದಲ್ಲಿ ತಮ್ಮ ಅಭಿಮಾನಿಗಳನ್ನು ಈ ಸಿನಿಮಾದ ಮೂಲಕ ರಂಜಿಸಲಿದ್ದಾರೆ. ಬಾಲಿವುಡ್ ನಲ್ಲಿ ಈ ಸಿನಿಮಾದ ಮೂಲಕ ತಮನ್ನಾ ಭಾಟಿಯಾ ಜಾದು ಮಾಡಲಿದ್ದಾರಾ? ಎನ್ನುವುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *