ಇದುವರೆಗೂ ನೋಡದ ಅದ್ಭುತ ಲೊಕೇಶನ್ ಗಳಲ್ಲಿ ಹಾಡಿನ ಚಿತ್ರೀಕರಣ: ದೃಶ್ಯ ವೈಭವಕ್ಕೆ ಸಾಕ್ಷಿ ಎಂದ ನಿರ್ಮಾಪಕರು

Written by Soma Shekar

Published on:

---Join Our Channel---

ಬಾಲಿವುಡ್ ಸೂಪರ್ ಸ್ಟಾರ್ ಗಳು ಎನಿಸಿಕೊಂಡಿರುವ ನಟ ಶಾರುಖ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ಜೊತೆಯಾಗಿ ಪಠಾಣ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ‌. ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ ನಿರ್ದೇಶಕ ಸಿದ್ದಾರ್ಥ್ ಆನಂದ್. ಚಿತ್ರತಂಡವು ಸಿನಿಮಾದ ಕೆಲವು ಪ್ರಮುಖ ದೃಶ್ಯಗಳ ಚಿತ್ರೀಕರಣಕ್ಕಾಗಿ ಹಾಗೂ ಒಂದು ಅದ್ಭುತವಾದ ಹಾಡಿನ ಚಿತ್ರೀಕರಣಕ್ಕಾಗಿ ಸ್ಪೈನ್ ಗೆ ಹಾರಲು ಸಜ್ಜಾಗಿದೆ. ನಿರ್ದೇಶಕ ಸಿದ್ಧಾರ್ಥ ಆನಂದ್ ಅವರು ಈ ವಿಚಾರವಾಗಿ ಮಾದ್ಯಮವೊಂದರ ಜೊತೆ ಮಾತನಾಡಿ, ಪಠಾಣ್ ಸಿನಿಮಾದ ಬಹಳ ಪ್ರಮುಖವಾದ ದೃಶ್ಯಗಳನ್ನು ಸ್ಪೈನ್ ನಲ್ಲಿ ಚಿತ್ರೀಕರಣ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ ಅವರು ಅಲ್ಲಿ ಚಿತ್ರೀಕರಣ ಮಾಡಲಿರುವ ವಿಶೇಷ ಹಾಡಿನ ಕುರಿತಾಗಿ ಕೂಡಾ ಕೆಲವು ಮಾತುಗಳನ್ನು ಆಡಿದ್ದಾರೆ.

ಸಿದ್ದಾರ್ಥ್ ಆನಂದ್ ಅವರು ಸಿನಿಮಾದ ಒಂದು ಬಹಳ ಮುಖ್ಯವಾದ ಹಾಡಿನ ಚಿತ್ರೀಕರಣ ಮಾಡಲಾಗುತ್ತಿದ್ದು, ಇದುವರೆಗೂ ಯಾವುದೇ ಸಿನಿಮಾ ಹಾಡುಗಳು ಕೂಡಾ ಚಿತ್ರೀಕರಣ ಮಾಡಿರದಂತಹ ವಿಶೇಷವಾದ, ಅದ್ಭುತವಾದ ಸ್ಥಳಗಳನ್ನು ಆಯ್ಕೆ ಮಾಡಿಕೊಂಡಿದ್ದು, ಹಾಡಿನ ಚಿತ್ರೀಕರಣವನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ. ಹಾಡಿನ ಚಿತ್ರೀಕರಣಕ್ಕಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡುತ್ತಿದ್ದು ಅದ್ದೂರಿಯಾದ ಹಾಡು ಇದಾಗಲಿದೆ ಎಂದಿರುವ ಅವರು, ಈ ಹಾಡಿನ ವಿಷಯದಲ್ಲಿ ಯಾವುದೇ ಕಾರಣಕ್ಕೂ ಹಾಡಿನ ದೃಶ್ಯಗಳ ಫೋಟೋಗಳು ಅಥವಾ ವಿಡಿಯೋಗಳು ಹೊರಗೆ ಬರದ ಹಾಗೆ ಎಚ್ಚರವನ್ನು ವಹಿಸಲಾಗುತ್ತದೆ ಎಂದು, ಅದಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಸಿನಿಮಾದ ಚಿತ್ರೀಕರಣ ಯಾವುದೇ ಅಡ್ಡಿ ಆತಂಕವಿಲ್ಲದೆ ನಡೆಯುವುದಕ್ಕಾಗಿ ಈಗಾಗಲೇ ಅಗತ್ಯವಿರುವಂತಹ ಹೆಂದ ಅನುಮತಿಗಳನ್ನು ಸಹಾ ಸ್ಪೈನ್ ನಲ್ಲಿ ಪಡೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ ಸಿದ್ಧಾರ್ಥ್ ಆನಂದ್. ವಿಶ್ವ ಸಿನಿಮಾರಂಗದಲ್ಲಿ ಭಾರತದೀ ಸಿನಿಮಾ ಎಲ್ಲರ ಗಮನವನ್ನು ಸೆಳೆಯಬೇಕು ಎನ್ನುವ ಕಾರಣದಿಂದ ಪ್ರತಿಯೊಂದು ದೃಶ್ಯಕ್ಕೂ ಹೆಚ್ಚಿನ ಒತ್ತನ್ನು ನೀಡುತ್ತಿದ್ದೇವೆ, ಸಿನಿಮಾ ದೃಶ್ಯ ವೈಭವದಲ್ಲಿ ಒಂದು ಹೊಸ ಮೈಲಿಗಲ್ಲನ್ನು ನಿರ್ಮಾಣ ಮಾಡಲಿದೆ ಎಂದು ಸಿನಿಮಾದ ನಿರ್ಮಾಪಕರಾದ ಸಿದ್ದ್ ಆನಂದ್ ಮತ್ತು ಆದಿತ್ಯ ಚೋಪ್ರ ತಿಳಿಸಿದ್ದಾರೆ. ಈ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಬಾಲಿವುಡ್ ನ ಮತ್ತೊಬ್ಬ ಜನಪ್ರಿಯ ನಟ ಜಾನ್ ಅಬ್ರಹಂ ಕೂಡಾ ನಟಿಸುತ್ತಿದ್ದಾರೆ.

Leave a Comment