6 ನೇ ಪತ್ನಿಗೆ ವಿಚ್ಛೇದನ ನೀಡಿದ ದುಬೈ ಶಾಸಕ: ಆಕೆಗೆ ಪರಿಹಾರವಾಗಿ 5500 ಕೋಟಿ ನೀಡಲು ಕೋರ್ಟ್ ಆದೇಶ

Entertainment Featured-Articles News
45 Views

ಅದ್ದೂರಿ ಅಥವಾ ವಿಜೃಂಭಣೆಯಿಂದ ನಡೆಯುವ ಮದುವೆಗಳ ಕುರಿತಾಗಿ ಆಗಾಗ ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ. ಮದುವೆಗಳನ್ನು ಇಷ್ಟೊಂದು ಅದ್ದೂರಿಯಾಗಿ ಮಾಡಲು ಕೋಟಿ ಕೋಟಿಗಳಷ್ಟು ಹಣವನ್ನು ನೀರಿನಂತೆ ಹರಿಸಲಾಗುತ್ತದೆ. ಇನ್ನು ಇತ್ತೀಚಿನ ವರ್ಷಗಳಲ್ಲಿ ಕೋಟ್ಯಾಧೀಶ್ವರರಿಗೆ ಮದುವೆಯೆನ್ನುವುದು ಸಂಭ್ರಮದ ಜೊತೆಗೆ ಅವರ ಸ್ಥಾನಮಾನದ ಪ್ರಶ್ನೆಯೂ ಆಗಿರುವುದರಿಂದ ವೈಭವದಿಂದ ಮದುವೆಗಳನ್ನು ಮಾಡುತ್ತಾರೆ. ಆದರೆ ಅದೇ ವೇಳೆ ಇತ್ತೀಚಿನ ವರ್ಷಗಳಲ್ಲಿ ಶ್ರೀಮಂತರ ಮದುವೆಗಳು ಮಾತ್ರವೇ ಅಲ್ಲದೆ ಅವರ ವಿಚ್ಚೇದನ ಗಳು ಕೂಡಾ ಬಹಳ ದುಬಾರಿಯಾಗುತ್ತಿದೆ.

ಹೌದು, ದುಬೈನ ಪ್ರಸ್ತುತ ಶಾಸಕ ಶೇಖ್ ಮಹಮದ್ ಬಿನ್ ರಶೀದ್ ಅಲ್ ಮಖ್ತುಮ್ ಅವರು ತಮ್ಮ ಆರನೇ ಪತ್ನಿ ಪ್ರಿನ್ಸೆಸ್ ಹಯಾ ಜೊತೆಗೆ ವಿಚ್ಛೇದನದ ಸೆಟಲ್ಮೆಂಟ್ ಮಾಡಿಕೊಂಡಿದ್ದಾರೆ. ಈ ಸೆಟಲ್ಮೆಂಟ್ ನ ಪ್ರಕಾರ ಶೇಖ್ ಮಹಮದ್ ರಶೀದ್ ದೊಡ್ಡ ಮೊತ್ತದ ಹಣವನ್ನು ಪತ್ನಿಗೆ ನೀಡಬೇಕೆಂದು ಕೋರ್ಟ್ ಆದೇಶ ನೀಡಿದೆ. ಬ್ರಿಟನಿನ ಕೌಟುಂಬಿಕ ನ್ಯಾಯಾಲಯವು ದುಬೈ ಶಾಸಕನಿಗೆ ತನ್ನ ಮಾಜಿ ಪತ್ನಿ ಹಾಗೂ ಮಕ್ಕಳಿಗೆ 554 ಮಿಲಿಯನ್ ಪೌಂಡ್ ಅಂದರೆ ಸುಮಾರು 5500 ಕೋಟಿ ರೂ.ಗಳನ್ನು ಪರಿಹಾರವಾಗಿ ನೀಡಲು ಆದೇಶಿಸಿದೆ.

ಇತಿಹಾಸದಲ್ಲಿ ಇದೊಂದು ಬಹಳ ದುಬಾರಿ ವಿಚ್ಚೇದನ ಆಗಿದೆಯೆಂದೇ ಹೇಳಲಾಗಿದೆ. ಕೋರ್ಟ್ ಇದೇ ವೇಳೆ ಮಕ್ಕಳಿಗೆ ಸಿಗಲಿರುವ 29 ಕೋಟಿ ಪೌಂಡ್ ಗಳಲ್ಲಿ ಹೆಚ್ಚು ಅಥವಾ ಕಡಿಮೆ‌ ಆಗಬಹುದು ಎಂದು ಹೇಳಿದ್ದು, ಇದು ಅವರು ಎಷ್ಟು ವರ್ಷ ಬದುಕಿರುತ್ತಾರೆ ಅವರು ತಮ್ಮ ತಂದೆಯೊಡನೆ ಹೇಗೆ ವರ್ತಿಸುತ್ತಾರೆ ಎನ್ನುವುದನ್ನು ಸಹಾ ಅವಲಂಬಿಸಿರುತ್ತದೆ ಎನ್ನುವ ಮಾತನ್ನು ಹೇಳಿದೆ. ಶೇಖ್ ಮಹಮದ್ ಬಿನ್ ರಶೀಲ್ ಅಲ್ ಮಕ್ತೂಮ್ ಅವರ ವಿವಾಹ 2004 ರಲ್ಲಿ ಆಗಿತ್ತು.

ಅವರಿಗೆ ಅದಕ್ಕೂ ಮೊದಲು ಐದು ಜನ ಪತ್ನಿಯರು ಇದ್ದರು. ಇದು ಆರನೇ ಮದುವೆ ಆಗಿತ್ತು. ರಶೀದ್ ಅಲ್ ಮಕ್ತೂಮ್ ಮತ್ತು ಪ್ರಿನ್ಸೆಸ್ ಹಯಾ ಗೆ ಇಬ್ಬರು ಮಕ್ಕಳಿದ್ದಾರೆ. 2019 ಏಪ್ರಿಲ್ ನಲ್ಲಿ ಹಯಾ ದುಬೈ ನಿಂದ ಇದ್ದಕ್ಕಿದ್ದಂತೆ ತಮ್ಮ ಎರಡು ಮಕ್ಕಳೊಡನೆ ಬ್ರಿಟನ್ ಗೆ ಬಂದು ಬಿಟ್ಟರು. ಪತಿಯ ಮೇಲೆ ಹಲವು ಆ ರೋ ಪಗಳನ್ನು ಮಾಡಿದ್ದರು, ತನ್ನ ಪ್ರಾಣಕ್ಕೆ ಬೆದರಿಕೆ ಇದೆ ಎಂದು ಹೇಳಿದ್ದರು. ಇನ್ನೂ ಕೆಲವು ವರದಿಗಳ ಪ್ರಕಾರ ಹಯಾ ರಶೀದ್ ಅಲ್ ಮಕ್ತೂಮ್ ಅವರ ಬಾಡಿಗಾರ್ಡ್ ಜೊತೆ ಅಫೇರ್ ನಡೆಸಿದ್ದರು ಎನ್ನಲಾಗಿದೆ.

Leave a Reply

Your email address will not be published. Required fields are marked *