ಇಂದೇ ಕಲಿಯಿರಿ ಬೆಂಡೆಕಾಯಿ ನೀರು ತಯಾರಿಸುವ ವಿಧಾನ: ಈ ಐದು ರೋಗಗಳು ಹತ್ತಿರ ಕೂಡಾ ಸುಳಿಯದು

Entertainment Featured-Articles Health News

ಬೆಂಡೆಕಾಯಿಯನ್ನು ತರಕಾರಿಯಾಗಿ ಭಾರತದಲ್ಲಿ ಬಹಳಷ್ಟು ಜನರು ಇಷ್ಟಪಡುತ್ತಾರೆ. ಬೆಂಡೆಕಾಯಿ ಬಳಸಿಕೊಂಡು ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಸಿದ್ಧಮಾಡಿಕೊಂಡು ಸೇವನೆ ಮಾಡುತ್ತಾರೆ. ಬೆಂಡೆಕಾಯಿಗೆ ವಿಶೇಷವಾದ ಮಾರುಕಟ್ಟೆ ಮೌಲ್ಯ ಸಹಾ ಇದೆ. ಆದರೆ ನಾವಿಂದು ಬಹುಶಃ ನೀವು ಹಿಂದೆಂದೂ ಕೇಳಿರದಂತಹ ಬೆಂಡೆಕಾಯಿ ಗೆ ಸಂಬಂಧಪಟ್ಟಂತಹ ಒಂದು ಬಹಳ ಒಳ್ಳೆಯ ವಿಷಯವನ್ನು ಹೇಳಲು ಹೊರಟಿದ್ದೇವೆ. ಹೌದು, ಬೆಂಡೆಕಾಯಿ ನೀರಿನ ಪ್ರಯೋಜನಗಳ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ?? ಇಲ್ಲವೆನ್ನುವುದಾದರೆ ಈಗ ನಾವು ಅದೇ ವಿಚಾರವನ್ನು ಹೇಳುತ್ತಿದ್ದೇವೆ.

ಬೆಂಡೆಕಾಯಿ ನೀರನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆಯೆನ್ನುವ ವಿಚಾರವನ್ನು ತಿಳಿದುಕೊಂಡ ಮೇಲೆ ನೀವು ಕೂಡಾ ಅದನ್ನು ನಿಮ್ಮ ದೈನಂದಿನ ಜೀವನದ ಆಹಾರ ಕ್ರಮದಲ್ಲಿ ತಪ್ಪದೇ ಬಂದು ಭಾಗವನ್ನಾಗಿ ಮಾಡಿಕೊಳ್ಳುವಿರಿ. ಬೆಂಡೆಕಾಯಿ ನೀರು ಸಿದ್ಧಪಡಿಸುವ ವಿಧಾನಕ್ಕೂ ಮೊದಲು ಅದರ ಉಪಯೋಗಗಳ ಕಡೆಗೆ ಒಂದು ಬಾರಿ ಗಮನ ಹರಿಸೋಣ. ಬೆಂಡೆಕಾಯಿ ಸೇವನೆಯಿಂದ ನಮಗೆ ಅನೇಕ ಪೋಷಕಾಂಶಗಳು ದೊರೆಯುತ್ತದೆ.

ಬೆಂಡೆಕಾಯಿಯು ತನ್ನಲ್ಲಿ ಪ್ರೋಟೀನ್, ಫ್ಯಾಟ್, ಫೈಬರ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ಪಾಸ್ಪರಸ್, ಐರನ್, ಮೆಗ್ನೀಷಿಯಂ, ಪೊಟಾಷಿಯಂ, ಸೋಡಿಯಂ ಮತ್ತು ಕಾಪರ್ ನಂತಹ ಅಂಶಗಳನ್ನು ಒಳಗೊಂಡಿರುತ್ತದೆ. ಆದ್ದರಿಂದಲೇ ಬೆಂಡೆಕಾಯಿ ನೀರಿನಲ್ಲಿ ಕೂಡಾ ಈ ಎಲ್ಲಾ ಅಂಶಗಳು ಸೇರುವುದರಿಂದ ಅದನ್ನು ಸೇವನೆ ಮಾಡುವುದರಿಂದ ಎಲ್ಲಾ ಪೋಷಕಾಂಶಗಳು ನಮ್ಮ ದೇಹವನ್ನು ಸೇರುತ್ತವೆ. ಬೆಂಡೆಕಾಯಿ ನೀರಿನ ಪ್ರಮುಖ 5 ಪ್ರಯೋಜನಗಳು ಈ ರೀತಿಯಾಗಿದೆ

ಆಯಾಸವನ್ನು ದೂರ ಮಾಡುತ್ತದೆ: ಒಂದು ವೇಳೆ ನಿಮಗೆ ಪ್ರತಿದಿನ ಹೆಚ್ಚು ಆಯಾಸವಾಗುತ್ತಿದ್ದರೆ ನೀವು ನಿಯಮಿತವಾಗಿ ಬೆಂಡೆಕಾಯಿ ನೀರನ್ನು ಸೇವನೆ ಮಾಡುವುದನ್ನು ನಿಮ್ಮ ಆಹಾರ ಕ್ರಮದ ಒಂದು ಭಾಗವನ್ನಾಗಿ ಮಾಡಿಕೊಳ್ಳಿ. ಕೆಲವೇ ದಿನಗಳಲ್ಲಿ ಇದರ ಫಲಿತಾಂಶ ನಿಮಗೆ ಅನುಭವವಾಗುತ್ತದೆ. ಬೆಂಡೆಕಾಯಿಯಲ್ಲಿರುವ ಅನೇಕ ಪೋಷಕ ತತ್ವಗಳು ನಿಮ್ಮ ದೇಹವನ್ನು ಸೇರಿ ನಿಮ್ಮನ್ನು ಚುರುಕಾಗಿ ಇಡುವುದರ ಜೊತೆಗೆ ಆಯಾಸ ನಿವಾರಣೆಗೆ ನೆರವು ನೀಡುತ್ತದೆ.

ಡಯಾಬಿಟಿಸ್ ಮತ್ತು ಹೃದಯದ ಆರೋಗ್ಯಕ್ಕಾಗಿ : ಬೆಂಡೆಕಾಯಿ ನೀರಿನಲ್ಲಿ ಆ್ಯಂಟಿಆಕ್ಸಿಡೆಂಟ್ ಗಳು ಇರುವುದರಿಂದ ಅದರಲ್ಲಿ ರೋಗನಿರೋಧಕ ಶಕ್ತಿಯು ಇದೆ. ಆದ್ದರಿಂದಲೇ ಈ ನೀರನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಡಯಾಬಿಟಿಸ್ ಹಾಗೂ ಹೃದಯ ಸಂಬಂಧಿತ ಸಮಸ್ಯೆಗಳು ದೂರವಾಗುತ್ತದೆ. ಕ್ಯಾನ್ಸರ್ ರೋಗಿಗಳಿಗೆ ಇದರ ಸಹಾಯ ಪರಿಣಾಮಕಾರಿ ಎನ್ನಲಾಗಿದ್ದು, ಕ್ಯಾನ್ಸರ್ ಸೆಲ್ ಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ ಎಂದು ಹೇಳಲಾಗಿದೆ.

ಚರ್ಮದ ಆರೋಗ್ಯಕ್ಕಾಗಿ: ಬೆಂಡೆಕಾಯಿ ನೀರಿನ ಸೇವನೆಯನ್ನು ನಿಯಮಿತವಾಗಿ ಮಾಡಿಕೊಂಡು ಬಂದರೆ ಚರ್ಮವು ಕಾಂತಿಯುತವಾಗುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್ ಗಳು ಚರ್ಮದ ಆರೋಗ್ಯಕ್ಕೆ ಕೂಡಾ ಬಹಳ ಉಪಯೋಗ ಪ್ರಯೋಜನಕಾರಿಯಾಗಿದ್ದು ಮುಖದ ಮೇಲೆ ಮೂಡುವ ನೆರಿಗೆಗಳನ್ನು ನಿಯಂತ್ರಿಸಿ, ಅವುಗಳನ್ನು ಕಡಿಮೆ ಮಾಡಿ ಮುಖಕ್ಕೆ ಬಂದು ಹೊಸ ಕಾಂತಿಯನ್ನು ನೀಡುತ್ತದೆ.

ಹಿಮೋಗ್ಲೋಬಿನ್ ನನ್ನು ಉತ್ತಮಪಡಿಸುತ್ತದೆ : ಇತ್ತೀಚಿನ ದಿನಗಳಲ್ಲಿ ಅನೇಕರ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆ ಆಗಿರುವುದರಿಂದ, ಅಂತಹವರು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇಂತಹವರು ತಪ್ಪದೇ ಬೆಂಡೆಕಾಯಿ ನೀರನ್ನು ಕುಡಿಯುವುದರಿಂದ ಅವರ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುವುದರ ಜೊತೆಗೆ ರೋಗನಿರೋಧಕ ಶಕ್ತಿಯು ಕೂಡ ಹೆಚ್ಚಾಗುತ್ತದೆ.

ಕಣ್ಣಿನ ನೋಟದಲ್ಲಿ ಸುಧಾರಣೆ: ಬೆಂಡೆಕಾಯಿಯಲ್ಲಿ ವಿಟಮಿನ್ ಎ ಹೇರಳವಾಗಿ ಲಭ್ಯವಿರುವ ಕಾರಣ ನಿಮ್ಮ ಕಣ್ಣಿನ ದೃಷ್ಟಿಯನ್ನು ಸುಧಾರಿಸಲು ಇದು ನೆರವಾಗುತ್ತದೆ. ನಿಮ್ಮ ಕಣ್ಣಿನಲ್ಲಿ ದೃಷ್ಟಿದೋಷ ಕಾಣಿಸಿಕೊಂಡಿದ್ದರೆ ಬೆಂಡೆಕಾಯಿ ನೀರನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ದೃಷ್ಟಿಯಲ್ಲಿ ಸುಧಾರಣೆಗಳು ಕಂಡುಬರುತ್ತದೆ.

ಬೆಂಡೆಕಾಯಿ ನೀರನ್ನು ಸಿದ್ಧಪಡಿಸುವ ವಿಧಾನ: ನಾಲ್ಕು ಐದು ಬೆಂಡೆಕಾಯಿಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಅವುಗಳನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿ, ಒಂದು ಜಾರ್ ನಲ್ಲಿ ಹಾಕಿ. ನಂತರ ಅದೇ ಜಾರ್ ಗೆ ಸುಮಾರು ಒಂದೂವರೆ ಲೀಟರ್ ನೀರನ್ನು ಹಾಕಿ ಮುಚ್ಚಳ ಮುಚ್ಚಿ ಎಂಟು ಗಂಟೆಗಳ ಕಾಲ ಹಾಗೆ ಬಿಡಿ. ಎಂಟು ಗಂಟೆಗಳ ನಂತರ ಬೆಂಡೆಕಾಯಿಯನ್ನು ಚೆನ್ನಾಗಿ ಹಿಂಡಿ, ನೀರಿನಿಂದ ಹೊರಗೆ ಹಾಕಿ ಆ ನೀರನ್ನು ಸೇವನೆ ಮಾಡಿ.

Leave a Reply

Your email address will not be published.