ಇಂದು ಬಂದಿದೆ ಶ್ರೀ ಮಹಾಲಕ್ಷ್ಮಿ ಯನ್ನು ಒಲಿಸಿಕೊಳ್ಳುವ ಶುಭ ಯೋಗ:ತಪ್ಪದೇ ಈ ರೀತಿ ಪೂಜೆ ಮಾಡಿ, ಸಂಕಷ್ಟಗಳಿಗೆ ವಿದಾಯ ಹೇಳಿ

Astrology tips Entertainment Featured-Articles News

ಹಿಂದೂ ಧರ್ಮದಲ್ಲಿ, ಮಹಾಲಕ್ಷ್ಮಿ ದೇವಿಯನ್ನು ಸಂಪತ್ತಿನ ಅಧಿ ದೇವತೆ ಎಂದು ಕರೆಯಲಾಗಿದೆ. ಮಹಾ ಲಕ್ಷ್ಮಿಯು ನೆಲೆಸಿರುವ ಮನೆಯಲ್ಲಿ ಹಣ ಮತ್ತು ಆಹಾರದ ಕೊರತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಅಂತಹ ಮನೆಗಳಲ್ಲಿ ಸದಾ ಸುಖ, ಶಾಂತಿ ಮತ್ತು ಸಮೃದ್ಧಿಯು ನೆಲೆಗೊಂಡಿರುತ್ತದೆ ಎನ್ನಲಾಗುತ್ತದೆ.‌ ಲಕ್ಷ್ಮೀ ದೇವಿಯ ಕೃಪಾ ಕಟಾಕ್ಷವನ್ನು ಎಲ್ಲರೂ ಸಹಾ ಪಡೆಯಲು ಬಯಸುತ್ತಾರೆ. ವಾಸ್ತವವಾಗಿ, ಈ ಶುಕ್ರವಾರ, ಜುಲೈ 1 ರಂದು ವಿಶೇಷ ದಿನವಾಗಿದೆ. ಈ ದಿನ ಮಂಗಳಕರ ಯೋಗಗಳಲ್ಲಿ ಲಕ್ಷ್ಮಿಯನ್ನು ಪೂಜಿಸುವುದು ಶುಭ ಎನ್ನಲಾಗಿದೆ‌.

ಇಂದು ಆಷಾಢ ಮಾಸದ ಶುಕ್ಲ ಪಕ್ಷದ ಎರಡನೇ ತಿಥಿ. ಈ ದಿನ ಪುಷ್ಯ ನಕ್ಷತ್ರ ರಚನೆಯಾಗುತ್ತಿದೆ. ಈ ರಾಶಿಯಲ್ಲಿ ಲಕ್ಷ್ಮಿಯನ್ನು ಪೂಜಿಸುವುದು ವಿಶೇಷವಾಗಿ ಫಲ ನೀಡುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಅಲ್ಲದೆ, ಶುಕ್ರವಾರವೂ ಲಕ್ಷ್ಮಿ ದೇವಿಗೆ ಸಮರ್ಪಿತವಾಗಿದೆ. ಮಾತೆ ಲಕ್ಷ್ಮಿಯನ್ನು ಈ ದಿನದಂದು ಯಾವುದೇ ಸಮಯದಲ್ಲಿ ಬೇಕಾದರೂ ಪೂಜಿಸಬಹುದಾಗಿದೆ. ಆದ್ದರಿಂದಲೇ ಈ ವಿಶೇಷ ದಿನದಂದು ಲಕ್ಷ್ಮೀ ಪೂಜೆಯನ್ನು ಈ ರೀತಿ ಮಾಡಿ.

ಇಂದು ಮಹಾಲಕ್ಷ್ಮಿಯನ್ನು ಈ ರೀತಿ ಪೂಜಿಸಿ.
ಈ ದಿನ ಬೆಳಿಗ್ಗೆ ಮತ್ತು ಸಂಜೆ ಲಕ್ಷ್ಮಿ ದೇವಿಯನ್ನು ಪೂಜಿಸಿ.ಈ ದಿನ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಮನೆಯ ಮುಖ್ಯ ಬಾಗಿಲ ಬಳಿ ತುಪ್ಪದ ದೀಪವನ್ನು ಹಚ್ಚಿ. ಯಾರಾದರೂ ಬಡ ಹುಡುಗಿಯ ಮದುವೆಗೆ ನಿಮ್ಮ ಕೈಲಾಗುವ ಸಹಾಯವನ್ನು ಮಾಡಿ.
ಶುಕ್ರವಾರ, ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು, ಮಹಿಳೆಯರಿಗೆ ಬಾಗಿನದ ವಸ್ತುಗಳನ್ನು ನೀಡಿ. ಈ ದಿನ ಬಿಳಿ ಬಟ್ಟೆ ಮತ್ತು ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡುವುದು ವಿಶೇಷವಾಗಿ ಫಲಪ್ರದವಾಗಿದೆ.

ಇದಲ್ಲದೇ ದೇವಿ ಮಹಾಲಕ್ಷ್ಮಿಯ ಪೂಜೆಯ ವೇಳೆ ಆ ದೇವಿಯ ಮಂತ್ರಗಳನ್ನು ಪಠಿಸಿ.

  • ಓಂ ಹ್ರೀಂ ಶ್ರೀ ಲಕ್ಷ್ಮೀಭ್ಯೋ ನಮಃ
  • ಶ್ರೀ ಮಹಾಲಕ್ಷ್ಮ್ಯೈ ಚ ವಿದ್ಮಹೇ ವಿಷ್ಣು ಪತ್ನ್ಯೈ ಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್.
  • ಓಂ ಹ್ರೀಂ ಶ್ರೀ ಕಮಲೇ ಕಮಲಾಲಯೇ ಪ್ರಸೀದ ಪ್ರಸೀದ, ಓಂ ಹ್ರೀಂ ಶ್ರೀ ಮಹಾಲಕ್ಷ್ಮ್ಯೆ ನಮಃ

Leave a Reply

Your email address will not be published.