ಇಂದಿನ ಸ್ಟಾರ್ ನಟಿಯರಿಗೇನೂ ಕಮ್ಮಿ ಇಲ್ಲ ನಟಿ ರಮ್ಯಕೃಷ್ಣ ಸಂಭಾವನೆ: ಎಷ್ಟು ಸಂಭಾವನೆ ಪಡೀತಾರೆ ಗೊತ್ತಾ?

Entertainment Featured-Articles Movies News

ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಎವರ್ ಗ್ರೀನ್ ನಟಿ ಎನಿಸಿಕೊಂಡಿದ್ದಾರೆ ರಮ್ಯ ಕೃಷ್ಣ. ಈ ನಟಿ ದಕ್ಷಿಣದ ನಾಲ್ಕು ಭಾಷೆಗಳ ಸಿನಿಮಾ ಮಾತ್ರವೇ ಅಲ್ಲದೇ ಬಾಲಿವುಡ್ ಸಿನಿಮಾಗಳಲ್ಲಿ ಸಹಾ ನಟಿಸಿ ಸೈ ಎನಿಸಿಕೊಂಡವರು. ನಟಿ ರಮ್ಯಕೃಷ್ಣ ದಕ್ಷಿಣದ ಎಲ್ಲಾ ಸ್ಟಾರ್ ನಟರ ಜೊತೆಗೆ ತೆರೆಯನ್ನು ಹಂಚಿಕೊಂಡ‌ ನಟಿ. ತೊಂಬತ್ತರ ದಶಕದಲ್ಲಿ ತೆಲುಗು ಸಿನಿಮಾ ರಂಗದ ಬಹು ಬೇಡಿಕೆಯ ನಟಿಯಾಗಿದ್ದ ರಮ್ಯ ಕೃಷ್ಣ ಗ್ಲಾಮರ್ ಮತ್ತು ನಟನೆಯಿಂದ ಅಂದಿನ ಯುವಕರ ಎದೆಯಲ್ಲಿ ಕಿಚ್ಚು ಹೊತ್ತಿಸಿದ್ದ ನಟಿ. ಗ್ಲಾಮರ್ ಎಂದರೆ ರಮ್ಯ ಕೃಷ್ಣ ಎನ್ನುವಷ್ಟರ ಮಟ್ಟಕ್ಕೆ ನಟಿಯ ಹೆಸರು ಜನಪ್ರಿಯತೆ ಪಡೆದುಕೊಂಡಿತ್ತು.

ಒಂದು ಕಡೆ ಗ್ಲಾಮರ್ ಪಾತ್ರಗಳಿಗೆ ತನ್ನ ಹಾಟ್ ಲುಕ್ ನಿಂದ ಮೆರುಗು ನೀಡುತ್ತಿದ್ದ ರಮ್ಯಕೃಷ್ಣ ಅವರು ಇನ್ನೊಂದು ಕಡೆ ನಟನೆಗೆ ಪ್ರಾಧಾನ್ಯತೆ ಇರುವ ಪಾತ್ರಗಳು ಮಾತ್ರವೇ ಅಲ್ಲದೇ ದೇವತೆಯ ಪಾತ್ರದಲ್ಲಿ ಮಿಂಚುತ್ತಾ, ಹಿರಿಯ ನಟಿ ಕೆ ಆರ್ ವಿಜಯ ಅವರ ನಂತರ ದೇವಿ ಪಾತ್ರ ಎಂದರೆ ರಮ್ಯ ಕೃಷ್ಣ ಅನೇಕ ನಿರ್ದೇಶಕರ ಮೊದಲ‌ ಆಯ್ಕೆ ಆಗಿದ್ದರು.‌ ಹೀಗೆ ವೈವಿದ್ಯಮಯ ಪಾತ್ರಗಳ ಮೂಲಕ ಯಶಸ್ಸಿನ ಉತ್ತುಂಗವನ್ನು ತಲುಪಿದ್ದ ನಟಿ ರಮ್ಯ ಕೃಷ್ಣ ಅವರಿಗೆ ನಾಯಕಿಯಾಗಿ ಬೇಡಿಕೆ ತಗ್ಗಿದರೂ ನಟಿಯಾಗಿ ಮಾತ್ರ ಇಂದಿಗೂ ಬಹು ಬೇಡಿಕೆ ಪಡೆದುಕೊಂಡಿದ್ದಾರೆ.

ನಾಯಕಿಯ ನಂತರ ಪೋಷಕ ಪಾತ್ರಗಳ ಕಡೆ ಹೊರಳಿದ ನಟಿ ಒಂದಕ್ಕಿಂತ ಮತ್ತೊಂದು ಎನ್ನುವಂತಹ ಪ್ರಮುಖ ಹಾಗೂ ಪವರ್ ಫುಲ್ ಪಾತ್ರಗಳ ಮೂಲಕ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಿದ್ದಾರೆ. ಅದರಲ್ಲೂ ಬಾಹುಬಲಿ ಸಿನಿಮಾದಲ್ಲಿ ರಾಜ ಮಾತೆ ಶಿವಗಾಮಿ ಪಾತ್ರಕ್ಕೆ ಜೀವ ತುಂಬಿದ ನಟಿ ರಮ್ಯ ಕೃಷ್ಣ ಅವರು ಬಾಹುಬಲಿ ಸಿನಿಮಾದ ನಂತರ ತಮ್ಮ ವೃತ್ತಿ ಜೀವನದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿ ಜನರು ಸದಾ ನೆನಪಿನಲ್ಲಿ ಇರಿಸಿಕೊಳ್ಳುವ ಪಾತ್ರವನ್ನು ಮಾಡಿ, ಜನ ಮೆಚ್ಚುಗೆ ಪಡೆದಿದ್ದಾರೆ.

ಹೀಗೆ ಸಿನಿಮಾ ರಂಗದಲ್ಲಿ ತನ್ನದೇ ಆದ ವರ್ಚಸ್ಸನ್ನು ಪಡೆದಿರುವ ನಟಿ ರಮ್ಯ ಕೃಷ್ಣ ಅವರ ಸಂಭಾವನೆ ಎಷ್ಟಿರಬಹುದು ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಹಾಗಾದರೆ ಬನ್ನಿ ನಟಿ ರಮ್ಯ ಅವರು ಪಡೆಯುವ ಸಂಭಾವನೆ ವಿಚಾರವನ್ನು ನಾವೀಗ ತಿಳಿಯೋಣ. ನಟಿ ರಮ್ಯ ಕೃಷ್ಣ ಅವರ ಸಂಭಾವನೆ ಯಾವುದೇ ನಾಯಕಿಗಿಂತ ಕಡಿಮೆಯೇನಿಲ್ಲ ಎಂದರೆ ನಿಮಗೆ ಖಂಡಿತ ಅಚ್ಚರಿ ಆಗಬಹುದು. ಆದರೆ ಇದು ಅಕ್ಷರಶಃ ಸತ್ಯ, ಏಕೆಂದರೆ ರಮ್ಯ ಕೃಷ್ಣ ಅವರು ನಟಿಸುವ ಸಿನಿಮಾದಲ್ಲಿ ಅವರ ಪಾತ್ರ ಬಹಳ ವಿಶೇಷ ಆಗಿರುತ್ತದೆ.

ನಟಿ ರಮ್ಯಕೃಷ್ಣ ಅವರು ಸಿನಿಮಾವೊಂದಕ್ಕೆ ಪ್ರಸ್ತುತ ದಿನದ ಲೆಕ್ಕದಲ್ಲಿ ಸಂಭಾವನೆಯನ್ನು ಪಡೆಯುತ್ತಾರೆ ಎನ್ನುವುದು ಸುದ್ದಿ. ಹೌದು, ನಟಿ ರಮ್ಯಾ ಕೃಷ್ಣ ತಾವು ಒಪ್ಪಿಕೊಂಡ ಸಿನಿಮಾದಲ್ಲಿ ನಟಿಸಲು ದಿನವೊಂದಕ್ಕೆ 10 ಲಕ್ಷ ರೂ.ಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ. ಅಂದರೆ ಹತ್ತು ದಿನಗಳ ಶೂಟಿಂಗ್ ಇದ್ದರೆ ನಟಿಯ ಸಂಭಾವನೆ ಬರೋಬ್ಬರಿ ಒಂದು ಕೋಟಿ ರೂಪಾಯಿಗಳಿಗೆ ತಲುಪುತ್ತದೆ. ಇದು ಇಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ನಾಯಕಿಯರಾಗಿ ನಟಿಸುವ ನಟಿಯರ ಸಂಭಾವನೆಗಿಂತ ಏನೂ ಕಮ್ಮಿಯಿಲ್ಲ ಎನ್ನುವುದು ಸತ್ಯ.

Leave a Reply

Your email address will not be published.