ಇಂಥಾ ಕಷ್ಟದ ಸಮಯದಲ್ಲೂ ಆ ವಿಷಯ ಸ್ಮರಿಸಿದ ಪುನೀತ್ ಕುಟುಂಬ: ದೊಡ್ಮನೆ ಅವರ ದೊಡ್ಡತನ ಇದೇ ಅಲ್ವಾ

Written by Soma Shekar

Published on:

---Join Our Channel---

ಕನ್ನಡ ನಾಡಿನ ಜನತೆಯ ಪಾಲಿಗೆ ಪವರ್ ಸ್ಟಾರ್ ಆಗಿ, ಅಪ್ಪು ಆಗಿ ಜನ ಮನದಲ್ಲಿ ದೊಡ್ಡ ಹೆಸರನ್ನು ಮಾಡಿರುವ ಪುನೀತ್ ರಾಜ್‍ಕುಮಾರ್ ಅವರು ಇಂದು ಒಂದು ನೆನಪು ಎಂದರೆ ಇದನ್ನು ನಂಬುವುದಕ್ಕೆ ಇನ್ನೂ ಸಾಧ್ಯವಿಲ್ಲ. ಪುನೀತ್ ರಾಜ್‍ಕುಮಾರ್ ಅವರ ಅಂತಿಮ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿ ಅಭಿಮಾನ ನಟನನ್ನು ಕೊನೆಯ ಬಾರಿ ತಮ್ಮ ಕಣ್ತುಂಬಿಕೊಳ್ಳುತ್ತಿದ್ದಾರೆ. ಇನ್ನು ಪುನೀತ್ ರಾಜ್‍ಕುಮಾರ್ ಅವರು ಸಾವಿನಲ್ಲೂ ತಮ್ಮ ತಂದೆ ವರನಟ ಡಾ.ರಾಜ್‍ಕುಮಾರ್ ಅವರ ಹಾದಿಯಲ್ಲೇ ನಡೆದಿದ್ದಾರೆ.

ಹೌದು, ಪುನೀತ್ ಅವರು ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದು ಹೋಗಿದ್ದಾರೆ. ತಂದೆಯಂತೆ ಪುನೀತ್ ಅವರ ಕಣ್ಣುಗಳನ್ನು ಸಹಾ ದಾನ ಮಾಡಲಾಗಿದೆ. ಈ ವಿಷಯದ ಬಗ್ಗೆ ನಾರಾಯಣ ನೇತ್ರಾಲಯದ ಡಾ.ಭುಜಂಗ ಶೆಟ್ಟಿ ಅವರು ಮಾದ್ಯಮವೊಂದರ ಜೊತೆಗೆ ಮಾತನಾಡಿದ್ದಾರೆ. ನೇತ್ರದಾನದ ವಿಷಯ ಹೇಳುತ್ತಾ ಅವರು, ಇಂತಹ ಕಷ್ಟದ ಸಂದರ್ಭದಲ್ಲಿಯೂ ಸಹಾ ಆ ಕುಟುಂಬ ಇದನ್ನು ನೆನಪಿಸಿಕೊಂಡಿರುವುದು ನಿಜಕ್ಕೂ ದೊಡ್ಡ ವಿಷಯ. ಕುಟುಂಬದ ಸದಸ್ಯರೇ ನನಗೆ ಕರೆ ಮಾಡಿದ್ರು.

ಕರೆ ಮಾಡಿದವರು ಪುನೀತ್ ಇನ್ನಿಲ್ಲ, ಅವರ ಕಣ್ಣುಗಳನ್ನು ದಾನ ಮಾಡಬೇಕು ಎಂದು ಹೇಳಿದರು. ಅದಾದ ನಂತರ ಸೂಕ್ತ ಸಮಯದಲ್ಲಿ ಅವರ ನೇತ್ರ ಗಳನ್ನು ಪಡೆಯಲಾಗಿದೆ. ಇನ್ನೆರಡು ದಿನಗಳಲ್ಲಿ ಅಗತ್ಯ ಇರುವವರಿಗೆ, ದೃಷ್ಟಿ ಸಮಸ್ಯೆ ಉಳ್ಳವರಿಗೆ ಅವರ ಕಣ್ಣುಗಳನ್ನು ಕಸಿ ಮಾಡಲಾಗುವುದು. ಪುನೀತ್ ಅವರ ಸಹಾ ಅವರ ತಂದೆಯಂತೆಯೇ ಇಬ್ಬರ ಬದುಕಿಗೆ ಬೆಳಕಾಗಲಿದ್ದಾರೆ ಎನ್ನುವ ಮಾತನ್ನು ಹೇಳಿದ್ದಾರೆ. ಎನ್ನೆರಡು ದಿನಗಳಲ್ಲಿ ಪುನೀತ್ ಅವರ ಕಣ್ಣಿಂದ ಇಬ್ಬರು ಜಗತ್ತನ್ನು ನೋಡಲಿದ್ದಾರೆ.

Leave a Comment