ಇಂತಾ ಫೋಟೋ ಇದೇ ಮೊದಲು, ಇದೇ ಕೊನೆ: ಐಶ್ವರ್ಯ ರೈ ಪಾಸ್ ಪೋರ್ಟ್ ಫೋಟೋಗೆ ಇದೆ ವಿಶೇಷತೆ!!

0 1

ಬಾಲಿವುಡ್ ನಟಿ ಐಶ್ವರ್ಯ ರೈ ಎಂದರೆ ಅಂದಕ್ಕೆ ಮತ್ತೊಂದು ಹೆಸರು ಎನ್ನುವುದು ಅನೇಕರ ಭಾವನೆಯಾಗಿದ್ದು, ಇದು ಸತ್ಯವೂ ಹೌದು. ದಶಕಗಳು ಕಳೆದರೂ ಸಹಾ ತನ್ನ ಅಂದದಿಂದಾಗಿ ಇಂದಿಗೂ ವಿಶ್ವದ ಸುಂದರ ಮಹಿಳೆಯರ ಸಾಲಿನಲ್ಲಿ ಐಶ್ವರ್ಯ ರೈ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ನಟಿ ಐಶ್ವರ್ಯ ರೈ ಅವರು ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೇ, ಅತಿಯಾದ ಮೇಕಪ್ ಕೂಡಾ ಹಾಕಿಕೊಳ್ಳದೇ ಬಹಳ ಸುಂದರವಾಗಿ ಕಾಣುವಂತಹ ಅಂದಗಾತಿಯಾಗಿದ್ದಾರೆ. ಇಂದಿಗೂ ಸೋಶಿಯಲ್ ಮೀಡಿಯಾಗಳಲ್ಲಿ ಐಶ್ವರ್ಯ ರೈ ಅವರ ಫೋಟೋಗಳನ್ನು ಶೇರ್ ಮಾಡುವ ಅಭಿಮಾನಿಗಳಿಗೆ ಕೊರತೆ ಏನಿಲ್ಲ.

ನಟಿ ಐಶ್ವರ್ಯ ರೈ ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಿಂದ ಅಂತರವನ್ನು ಕಾಯ್ದುಕೊಂಡು ಬಂದಿದ್ದಾರೆ. ಅವರ ಹೊಸ ಸಿನಿಮಾವೊಂದು ದೊಡ್ಡ ಮಟ್ಟದಲ್ಲಿ ದಕ್ಷಿಣ ಭಾರತದ ಪ್ರಖ್ಯಾತ ನಿರ್ದೇಶಕರ ನಿರ್ದೇಶಕನದಲ್ಲಿ ಮೂಡಿ ಬರುತ್ತಿದ್ದು, ಈ ಸಿನಿಮಾದಲ್ಲಿ ದಕ್ಷಿಣದ ಸ್ಟಾರ್ ಕಲಾವಿದರ ದೊಡ್ಡ ದಂಡೇ ಇದೆ ಎನ್ನುವುದು ವಿಶೇಷ. ಇನ್ನು ಇವೆಲ್ಲವುಗಳ ನಡುವೆ ನಟಿ ಐಶ್ವರ್ಯ ರೈ ಅವರು ಪಾಸ್ ಪೋರ್ಟ್ ನ ಚಿತ್ರ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಐಶ್ವರ್ಯ ರೈ ಫೋಟೋ ನೋಡಿ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ.

ಹೌದು, ಸಾಮಾನ್ಯವಾಗಿ ಸರ್ಕಾರಿ ಐಡಿಗಳಿಗಾಗಿ ಜನರು ಫೋಟೋಗಳನ್ನು ತೆಗೆಸಿದಾಗ ಅದರಲ್ಲಿ ಜನರ ಮುಖಗಳು ಸರಿಯಾಗಿ ಕಾಣುವುದಿಲ್ಲ. ಅನೇಕ ಬಾರಿ ಅದು ನಾವೇನಾ ಎಂದು ಅನುಮಾನಿಸುವ ಮಟ್ಟಕ್ಕೆ ಸರ್ಕಾರಿ ಐಡಿಯಳಲ್ಲಿನ ನಮ್ಮ ಫೋಟೋಗಳು ವಿರೂಪವಾಗಿ ಕಾಣುತ್ತವೆ. ಆದರೆ ನಟಿ ಐಶ್ವರ್ಯ ರೈ ಅವರ ಫೋಟೋ ಹಾಗಿಲ್ಲ. ಬದಲಾಗಿ ಬಹಳ ಅಂದವಾಗಿ ಕಂಡಿದ್ದು ಇದನ್ನು ನೋಡಿ ನೆಟ್ಟಿಗರು ಅಚ್ಚರಿ ಯನ್ನು ವ್ಯಕ್ತಪಡಿಸಿ, ಮೆಚ್ಚುಗೆಯನ್ನು ನೀಡುತ್ತಿದ್ದಾರೆ.

ನಟಿ ಐಶ್ವರ್ಯ ರೈ ಅವರ ಪಾಸ್ ಪೋರ್ಟ್ ನಲ್ಲಿನ ಅವರ ಅಂದವಾದ ಚಿತ್ರ ನೋಡಿದಾಗ, ಸಾಮಾನ್ಯವಾಗಿ ಯಾರ ಫೋಟೋಗಳು ಸಹಾ ಇಷ್ಟೊಂದು ಸುಂದರವಾಗಿ ಮೂಡಿ ಬರುವುದಿಲ್ಲ, ಆದರೆ ನಟಿ ಐಶ್ವರ್ಯ ಅವರ ಫೋಟೋ ಬಹಳ ಸುಂದರವಾಗಿ ಹಾಗೂ ಆಕರ್ಷಕವಾಗಿ ಮೂಡಿ ಬಂದಿರುವುದು ನೋಡಿ ಬಹುಶಃ ಇಂತಹ ಫೋಟೋ ಸರ್ಕಾರಿ ಐಡಿ ಗಳಲ್ಲಿ ಇದೇ ಮೊದಲು ಮತ್ತು ಇದೇ ಕೊನೆಯೂ ಆಗಿರಬಹುದು ಎಂದು ನೆಟ್ಟಿಗರು ಹೇಳಿದರೆ, ಅಭಿಮಾನಿಗಳು ಮಾತ್ರ ಸಿಕ್ಕಾಪಟ್ಟೆ ಖುಷಿ ಪಡುತ್ತಿದ್ದಾರೆ.

Leave A Reply

Your email address will not be published.