ಇಂತಹ ದೃಶ್ಯದಲ್ಲಿ ಮಾಡೋದ್ಯಾಕೆ? ಆಮೇಲೆ ಹೀಗೆಲ್ಲಾ ಹೇಳೋದ್ಯಾಕೆ? ನಟಿ ರಚಿತಾ ರಾಮ್ ಗೆ ನೆಟ್ಟಿಗರ ಪ್ರಶ್ನೆ

Entertainment Featured-Articles News

ಸ್ಯಾಂಡಲ್ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ, ಈ ಬಾರಿ ಅವರು ಸುದ್ದಿಯಾಗಿರುವುದು ತಮ್ಮ ಬೇಸರದ ಕಾರಣದಿಂದೆಯೇ ಆದರೂ ಈ ಬೇಸರವು ಮಾತ್ರ ಇದೇ ಮೊದಲಲ್ಲ ಎನ್ನುವುದು ಕೂಡಾ ವಾಸ್ತವ. ಪ್ರತಿ ಬಾರಿ ಯಾವುದಾದರೂ ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಂಡ ನಂತರ ನಟಿ ರಚಿತಾ ರಾಮ್ ಅವರು ಆ ವಿಷಯವಾಗಿ ಬೇಸರ ಪಡುವುದು, ಅದು ಸುದ್ದಿಯಾಗುವುದು ಸಾಮಾನ್ಯ ಎನಿಸಿದ್ದು, ಈಗ ಮತ್ತೊಮ್ಮೆ ತಮ್ಮ ಹೊಸ ಪಾತ್ರದ ಬಗ್ಗೆ ರಚಿತಾ ರಾಮ್ ಇಂತಹುದೊಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಹಾಟ್ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಂಡ ಮೇಲೆ ಈ ವಿಷಯದಲ್ಲಿ ರಚಿತಾ ರಾಮ್ ಅವರು ಅನಂತರ ಬೇಸರ ವ್ಯಕ್ತಪಡಿಸುತ್ತಾರೆ. ಈ ಹಿಂದೆ ಅವರು ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆಗೆ ಐ ಲವ್ ಯೂ ಚಿತ್ರದಲ್ಲಿ ಕೆಲವು ಹಾಟ್ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಆ ದೃಶ್ಯಗಳು ಸಹಾ ಸಿಕ್ಕಾಪಟ್ಟೆ ಸದ್ದು ಮಾಡಿದವು. ಆಗ ನಟಿ ರಚಿತಾ ರಾಮ್ ಅವರು ತಾನು ಅಂತಹ ದೃಶ್ಯಗಳಲ್ಲಿ ನಟಿಸಬಾರದಿತ್ತು, ತಮ್ಮ ತಂದೆಗೂ ಅದು ಹಿಡಿಸಲಿಲ್ಲ, ಇನ್ಮುಂದೆ ಅಂತಹ ದೃಶ್ಯಗಳಲ್ಲಿ ತಾನು ನಟಿಸುವುದಿಲ್ಲ ಎಂದರು.

ಹೀಗೆ ಹೇಳಿದ ನಂತರ ಅಜಯ್ ರಾವ್ ನಾಯಕನಾಗಿದ್ದ ಲವ್ ಯೂ ರಚ್ಚು ಸಿನಿಮಾ ಬಂತು. ಇಲ್ಲಿ ಮತ್ತೊಮ್ಮೆ ಅಂತಹುದೇ ಹಾಟ್ ಹಾಟ್ ದೃಶ್ಯಗಳು ಕಾಣಿಸಿಕೊಂಡವು, ಆಗ ಸಂದರ್ಶನದಲ್ಲಿ ಅವರಿಗೆ ನೇರ ಪ್ರಶ್ನೆ ಸಹಾ ಎದುರಾಯಿತು. ಏಕೆಂದರೆ ತಾನು ಇನ್ನು ಅಂತಹ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದ ರಚಿತಾ ರಾಮ್ ಅವರು ಮತ್ತೆ ಹಸಿ ಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಪ್ರಶ್ನೆಗಳು ಅವರಿಗೆ ಸಿಟ್ಟು ತರಿಸಿತ್ತು, ನಟಿ ಆಗ ಫಸ್ಟ್ ನೈಟ್ ನಲ್ಲಿ ಏನು ಮಾಡ್ತೀರಾ? ಎಂದು ಪ್ರಶ್ನೆ ಮಾಡಿ ಸಿಕ್ಕಾಪಟ್ಟೆ ಟ್ರೋಲ್ ಆದರು.

ಸರಿ ಅಷ್ಟೇ ಇನ್ನು ಮುಗಿಯಿತು ಎನ್ನುವಷ್ಟರಲ್ಲಿ ಇದೀಗ ರಚಿತಾ ಅವರ ಹೊಸ ಸಿನಿಮಾ ಏಕ್ ಲವ್ ಯಾ ಸಿದ್ಧವಾಗಿದೆ. ಇದರಲ್ಲಿ ನಟಿ ಸಖತ್ ಬೋಲ್ಡಾಗಿ ನಟಿಸಿದ್ದಾರೆ. ಆದರೆ ಈ ಬಾರಿ ನಟಿ ಸಿಟ್ಟಾಗಿದ್ದಾರೆ. ತಾನು ಮಾಡುವ ಬೋಲ್ಡ್ ಪಾತ್ರಗಳು ಮಾತ್ರ ಕಾಣ್ತಾ ಇದೆಯಾ ಎನ್ನುವ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಒಬ್ಬ ನಟಿಗೆ ಎಂತಹ ಪಾತ್ರ ಮಾಡಬೇಕು ಎನ್ನುವ ಅರಿವು ಇರುತ್ತದೆ ಎಂದಿದ್ದಾರೆ. ಕಥೆ ಹೇಳುವಾಗಲೇ ಅವರು ಅಂತಹ ಪಾತ್ರಗಳನ್ನು ಒಪ್ಪಿರುತ್ತಾರೆ.

ಇಂತಹ ಪಾತ್ರ ಆಯ್ಕೆ ಮಾಡಿಕೊಳ್ಳುವುದು ನಟಿಯರ ಆಯ್ಕೆಯಾಗಿರುತ್ತದೆ ಎಂದು ತಮ್ಮ ಅಸಮಾಧಾನವನ್ನು ಅವರು ಹೊರ ಹಾಕಿದ್ದಾರೆ. ಅಲ್ಲದೇ ತಾನು ಇಂತಹ ಪಾತ್ರಗಳನ್ನು ಮಾಡಲೇಬಾರದಾ? ಎನ್ನುವ ಪ್ರಶ್ನೆಯನ್ನು ಮಾಡಿದ್ದಾರೆ. ಒಟ್ಟಾರೆ ನಟಿ ತಾವೇ ಇನ್ನು ಅಂತಹ ಪಾತ್ರಗಳನ್ನು ಮಾಡಲ್ಲ ಎಂದಿದ್ದು, ಈಗ ಅವರೇ ನಟಿಸುತ್ತಿದ್ದು, ಅದರ ಬಗ್ಗೆ ಪ್ರಶ್ನೆಗಳು ಬಂದಾಗ ಮಾತ್ರ ಅವರಿಗೆ ಬೇಸರವನ್ನು ಉಂಟು ಮಾಡುತ್ತಿದೆ.

Leave a Reply

Your email address will not be published.