ಇಂತಹ ಕನಸುಗಳು ನಿಮ್ಮ ನಾಶ ಹಾಗೂ ವೃತ್ತಿ ಜೀವನದ ಅವನತಿಯ ಸಂಕೇತವಾಗಿರುತ್ತದೆ

Entertainment Featured-Articles News
83 Views

ನಿದ್ರೆಯಲ್ಲಿ ಎಲ್ಲರೂ ಕನಸುಗಳನ್ನು ಕಾಣುವುದು ಸಹಜ. ಕೆಲವರು ತಾವು ಕಂಡ ಕನಸುಗಳನ್ನು ಮರೆತು ಹೋಗುತ್ತಾರೆ. ಇನ್ನೂ ಕೆಲವರು ಈ ಕನಸುಗಳನ್ನು ಮರೆತು ಹೋಗುವರು. ಆದರೆ ಒಂದು ಅಧ್ಯಯನದ ಪ್ರಕಾರ ಅಥವಾ ಸ್ವಪ್ನ ಶಾಸ್ತ್ರದ ಪ್ರಕಾರ ನಾವು ಕಾಣುವ ಕನಸುಗಳಿಗೆ ಒಂದು ಅರ್ಥ ಖಂಡಿತ ಇದೆ ಹೇಳಲಾಗುತ್ತದೆ. ‌ಕನಸುಗಳಲ್ಲಿ ಶುಭ ಸ್ವಪ್ನ ಗಳು ಮತ್ತು ಅ ಶುಭ ಸ್ವಪ್ನ ಗಳು ಎಂಬುದಾಗಿ ಎರಡು ರೀತಿಯ ಸ್ವಪ್ನಗಳು ಇರುತ್ತವೆ‌. ಕೆಲವು ಸ್ವಪ್ನಗಳನ್ನು ಕಂಡರೆ ಅದು ಅ ಶುಭ ಎನ್ನಲಾಗುತ್ತದೆ. ಅಲ್ಲದೇ ಇಂತಹ ಸ್ವಪ್ನಗಳು ಮತ್ತೆ ಮತ್ತೆ ಬಂದರೆ ಅದು ಎಚ್ಚರಿಕೆಯ ಸಂದೇಶಗಳು ಎನ್ನಲಾಗಿದೆ.

ಮೊದಲನೆಯದಾಗಿ ಕನಸಿನಲ್ಲಿ ಮಗುವನ್ನು ಕಂಡರೆ ಅದು ವಿವಿಧ ರೀತಿಯ ಸೂಚನೆಗಳನ್ನು ನೀಡುತ್ತದೆ. ಆದರೆ ಒಂದು ವೇಳೆ ನಿಮ್ಮ ಕನಸಿನಲ್ಲಿ ನಿಮಗೇನಾದರೂ ಒಂದು ಅಳುತ್ತಿರುವ ಮಗು ಕಂಡರೆ ಅದು ನಿಮ್ಮ ಜೀವನದಲ್ಲಿ ಎದುರಾಗಲಿರುವ ನಿರಾಶೆ ಗಳನ್ನು ಕುರಿತಾಗಿ ಸೂಚನೆ ನೀಡುತ್ತದೆ. ಪ್ರೇಮ ಜೀವನದಲ್ಲಿ ಎದುರಾಗಲಿರುವ ಸಂ ಘ ರ್ಷವನ್ನು ಕುರಿತಾಗಿಯೂ ಇದು ಎಚ್ಚರಿಕೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

ಎರಡನೆಯದಾಗಿ ನಿಮ್ಮನ್ನು ನೀವು ಅಡಗಿಕೊಂಡಿರುವಂತೆ ಸ್ವಪ್ನ ಕಂಡರೆ ಅದು ಸಹಾ ಅಶುಭ ಎಂದೇ ಹೇಳಲಾಗುತ್ತದೆ. ಕನಸಿನಲ್ಲಿ ನೀವು ಯಾವುದಾದರೂ ವಸ್ತುವಿನ ಹಿಂದೆ ಅಡಗಿಕೊಂಡಂತೆ ಕಂಡರೆ ಅದು ನಿಮ್ಮ ವೃತ್ತಿ ಜೀವನದ ನಕಾರಾತ್ಮಕತೆ ಮತ್ತು ಮುಂದೆ ಎದುರಾಗಲಿರುವ ದೊಡ್ಡ ಆರ್ಥಿಕ ಸಂ ಕ ಷ್ಟ ದ ಕುರಿತಾಗಿ ನಿಮಗೆ ಎಚ್ಚರಿಕೆಯನ್ನು ನೀಡುತ್ತಿದೆ ಎನ್ನಲಾಗಿದೆ.

ಮೂರನೆಯದಾಗಿ ಕನಸಿನಲ್ಲಿ ಬಟ್ಟೆಗಳನ್ನು ಕಂಡರೆ ಅದಕ್ಕೂ ಸಹಾ ನಾನಾ ರೀತಿಯ ಅರ್ಥಗಳು ಇದೆ ಎನ್ನಲಾಗಿದೆ. ಹೌದು ನಿಮ್ಮ ಕನಸಿನಲ್ಲಿ ನೀವು ಬೇರೆ ಬೇರೆ ಪರಿಸ್ಥಿತಿಯಲ್ಲಿರುವ ಬಟ್ಟೆಗಳು ಕಂಡರೆ ಅದು ಬೇರೆ ಬೇರೆ ಅರ್ಥ ನೀಡುತ್ತದೆ. ಬಟ್ಟೆಗಳನ್ನು ಒಣಗಿಸುತ್ತಿರುವ ಹಾಗೆ ಕನಸನ್ನು ಕಂಡರೆ ಅದು ಪರಿವರ್ತನೆಯ ಸಂಕೇತವಾಗಿರುತ್ತದೆ. ಹಾಗಲ್ಲದೇ ಹರಿದಿರುವ ಬಟ್ಟೆಗಳನ್ನು ಕಂಡರೆ ನಿಮ್ಮ ಪ್ರೇಮ ಜೀವನದಲ್ಲಿ ಸಂ ಘ ರ್ಷವು ಎದುರಾಗಲಿದೆ ಎಂದು ಹೇಳಲಾಗುತ್ತದೆ.

ಒಂದು ವೇಳೆ ಕನಸಿನಲ್ಲಿ ನೀವು ಎತ್ತರದಿಂದ ಬೀಳುತ್ತಿರುವ ಹಾಗೆ ಕನಸು ಕಂಡರೆ ಅದು ಹಲವು ಅ ಶುಭ ಘಟನೆಗಳಿಗೆ ಸೂಚನೆಯಾಗಿರುತ್ತದೆ. ಇದು ಆರೋಗ್ಯ ಸಮಸ್ಯೆ, ಧನ ಹಾನಿ, ಮಾನ ಹಾನಿಗಳಿಗೆ ಇದು ಕಾರಣವಾಗುತ್ತದೆ. ಇನ್ನು ಕನಸಿನಲ್ಲಿ ಒಂದು ವೇಳೆ ಮದುವೆಯು ಕಂಡರೆ ಅದು ಕೂಡಾ ಶುಭ ಫಲವನ್ನು ನೀಡುವುದಿಲ್ಲ ಎಂದು ಹೇಳಲಾಗುತ್ತದೆ.

Leave a Reply

Your email address will not be published. Required fields are marked *