ಸ್ಯಾಂಡಲ್ವುಡ್ ನಿಂದ ಸಿನಿಮಾ ರಂಗಕ್ಕೆ ಅಡಿಯಿಟ್ಟು ಟಾಲಿವುಡ್ ನಲ್ಲಿ ಸ್ಟಾರ್ ಪಟ್ಟ ಪಡೆದು ಅನಂತರ ಪುಷ್ಪ ಸಿನಿಮಾ ನಂತರ ಭಾರತೀಯ ಸಿನಿಮಾ ರಂಗವನ್ನು ತನ್ನ ಕಡೆಗೆ ತಿರುಗಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ ಸದ್ಯಕ್ಕಂತೂ ದಕ್ಷಿಣದಲ್ಲಿ ಮಾತ್ರವೇ ಅಲ್ಲದೇ ಬಾಲಿವುಡ್ ನಲ್ಲೂ ಬ್ಯುಸಿಯಾಗಿದ್ದಾರೆ. ಟಾಲಿವುಡ್ ನ ಸ್ಟಾರ್ ನಟರ ಜೊತೆಗೆ ಮಿಂಚುತ್ತಿರುವ ನಟಿಯ ಎರಡು ಬಾಲಿವುಡ್ ಸಿನಿಮಾಗಳು ಬಿಡುಗಡೆ ಆಗಬೇಕಿದೆ. ಅದಕ್ಕಿಂತ ಮೊದಲೇ ಈಗ ಮೂರನೇ ಸಿನಿಮಾದಲ್ಲಿ ರಶ್ಮಿಕಾ ರಣಬೀರ್ ಕಪೂರ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.
ಇನ್ನು ಇತ್ತೀಚಿಗಷ್ಟೇ ಜನಪ್ರಿಯ ಸಿನಿ ಮ್ಯಾಗಜೀನ್ ಫಿಲ್ಮ್ ಫೇರ್ ನ ಮುಖ ಪುಟದಲ್ಲಿ ಹಾಟ್ ಅಂಡ್ ಬೋಲ್ಡ್ ಆಗಿ ಕಾಣಿಸಿಕೊಂಡು ರಶ್ಮಿಕಾ ಮತ್ತೊಮ್ಮೆ ಸಖತ್ ಸುದ್ದಿಯಾಗಿದ್ದಾರೆ. ರಣಬೀರ್ ಕಪೂರ್ ಜೊತೆಗೆ ಅನಿಮಲ್ ಸಿನಿಮಾದಲ್ಲಿ ತೊಡಗಿಕೊಂಡಿರುವ ರಶ್ಮಿಕಾ ಇತ್ತೀಚೆಗೆ ಬಾಲಿವುಡ್ ಮಾದ್ಯಮಗಳ ಮುಂದೆ ಒಂದಷ್ಟು ಮಾತುಕತೆ ನಡೆಸಿದ್ದಾರೆ. ಈ ವೇಳೆ ಒಂದಷ್ಟು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ನಟಿ ಹೇಳಿದ ಮಾತುಗಳೀಗ ಅಭಿಮಾನಿಗಳ ಗಮನ ಸೆಳೆದಿದೆ.
ಅನಿಮಲ್ ಸಿನಿಮಾ ಒಪ್ಪಿಕೊಂಡಾಗ ನಟ ರಣಬೀರ್ ಕಪೂರ್ ಹೇಗಿರುತ್ತಾರೆ, ಅವರ ವರ್ತನೆ ಎಂತದ್ದು ಎನ್ನುವುದು ನನಗೆ ಗೊತ್ತಿರಲಿಲ್ಲ. ಆದ್ದರಿಂದ ಸಹಜವಾಗಿಯೇ ಒಂದು ಹಿಂಜರಿಕೆ ಇತ್ತು. ಆದರೆ ಅವರನ್ನು ಭೇಟಿಯಾದ ಐದು ನಿಮಷಗಳಲ್ಲೇ ಅವರು ಎಂತಹವರು ಎನ್ನುವುದು ಅರ್ಥವಾಯಿತು. ಅವರ ಜೊತೆ ಕೆಲಸ ಮಾಡುವುದು ಬಹಳ ಖುಷಿ ನೀಡಿದೆ. ನನ್ನನ್ನು ಫಿಲ್ಮ್ ಇಂಡಸ್ಟ್ರಿಯಲ್ಲಿ ಮೇಡಂ ಅಂತ ಕರೆಯೋ ಏಕೈಕ ನಟ ಅವರು ಎಂದು ರಶ್ಮಿಕಾ ಬಹಳ ಖುಷಿಯಿಂದ ಹೇಳಿದ್ದಾರೆ.
ಪ್ರಸ್ತುತ ರಶ್ಮಿಕಾ ಅಭಿನಯದ ಮಿಶನ್ ಮಜ್ನು ಮತ್ತು ಗುಡ್ ಬೈ ಸಿನಿಮಾಗಳು ಬಿಡುಗಡೆ ಆಗಬೇಕಿದೆ. ನಟಿ ಪುಷ್ಪ 2 ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅನಿಮಲ್ ಅವರ ಬಾಲಿವುಡ್ ನ ಮೂರನೇ ಸಿನಿಮಾ ಆಗಿದೆ. ಇನ್ನು ದುಲ್ಕರ್ ಸಲ್ಮಾನ್ ಅವರ ಹೊಸ ಸಿನಿಮಾದಲ್ಲಿ ಅತಿಥಿ ಪಾತ್ರವೊಂದರ ಮೂಲಕ ರಶ್ಮಿಕಾ ಮಲೆಯಾಳಂ ಸಿನಿಮಾ ರಂಗ ಪ್ರವೇಶ ಮಾಡಿದ್ದಾರೆ. ತಮಿಳಿನಲ್ಲಿ ನಟ ವಿಜಯ್ ಅವರ ಮುಂದಿನ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿದ್ದಾರೆ.