ಇಂಟರ್ನೆಟ್ ಸೆನ್ಸೇಷನ್ ರಾನು ಮಂಡಲ್ ಹೊಸ ಅವತಾರ ಕಂಡು ನೆಟ್ಟಿಗರು ಶಾಕ್!! ರಾನು ಹೊಸ ವೀಡಿಯೋ ವೈರಲ್

Entertainment Featured-Articles News Viral Video

ಒಂದು ಕಾಲದಲ್ಲಿ ಇಂಟರ್ನೆಟ್ ಸೆನ್ಸೇಷನ್ ಆದಂತಹ ಗಾಯಕಿ ರಾನು ಮಂಡಾಲ್. ಒಂದು ಹಾಡಿನಿಂದ ರಾತ್ರೋರಾತ್ರಿ ದೇಶದಲ್ಲೆಲ್ಲಾ ಸದ್ದು ಮಾಡಿದ ಈ ಗಾಯಕಿ, ರೈಲ್ವೆ ನಿಲ್ದಾಣದಲ್ಲಿ ಹಾಡು ಹಾಡುವಾಗ ಅದನ್ನು ರೆಕಾರ್ಡ್ ಮಾಡಿ ಇಂಟರ್ನೆಟ್ ನಲ್ಲಿ ಹರಿ ಬಿಟ್ಟಾಗ, ರಾನು ಹಾಡಿದ ಹಾಡು ದೇಶವ್ಯಾಪಿಯಾಗಿ ಸದ್ದು ಮಾಡಿತು. ರಾತ್ರೋ ರಾತ್ರಿ ರಸ್ತೆ ಬದಿಯಲ್ಲಿ ಹಾಡುವ ಈ ಗಾಯಕಿ ಸೆಲೆಬ್ರಿಟಿ ಆಗಿ ಬಿಟ್ಟರು. ಒಂದು ಸಿನಿಮಾದಲ್ಲಿ ಸಹಾ ಈ ಗಾಯಕಿ ಹಾಡನ್ನು ಹಾಡಿದ್ದುಂಟು. ಆದರೆ ರಾನು ಖ್ಯಾತಿ ಹೆಚ್ಚು ದಿನ ಉಳಿಯಲೇ ಇಲ್ಲ. ಎಷ್ಟು ಬೇಗ ಗಾಯಕಿ ಸದ್ದು ಮಾಡಿದರೋ, ಅದಕ್ಕಿಂತ ಬೇಗ ಅವರ ಹೆಸರು ಸಹಾ ಮರೆಯಾಯಿತು‌.

ಆಗಾಗ ರಾನು ಮಂಡಾಲ್ ಕುರಿತಾಗಿ ಮಾದ್ಯಮಗಳಲ್ಲಿ ಸುದ್ದಿ ಆಗುವುದು ಬಿಟ್ಟರೆ ಬೇರೆ ಯಾವುದೇ ಚಟುವಟಿಕೆಗಳಿಂದ ರಾನು ಅಷ್ಟೊಂದು ಸುದ್ದಿಯಾಗಿಲ್ಲ. ಆಗಾಗ ರಾನು ಹಾಡುವ ಹಾಡುಗಳ ವೀಡಿಯೋ ಗಳ ವಿಷಯವಾಗಿ ಒಂದೊಂದು ಸುದ್ದಿಯಾಗುತ್ತದೆ. ಪ್ರಸ್ತುತ ರಾನು ಮಂಡಾಲ್ ನ ಹೊಸ ವೀಡಿಯೋ ಒಂದು ಎಲ್ಲರ ಗಮನ ಸೆಳೆದಿದೆ. ರಾನು ಮಂಡಾಲ್ ಮದುವೆ ಹೆಣ್ಣಿನ ಹಾಗೆ ಸಿಂಗರಿಸಿಕೊಂಡು ಜನರ ಮುಂದೆ ಬಂದಿದ್ದಾರೆ. ಹಾಡಿನ ವಿಡಿಯೋ ಇದೀಗ ಜನರ ಗಮನವನ್ನು ಸೆಳೆದಿದೆ. ಹಾಗೆಂದು ಆಕೆ ಮದುವೆ ಗೆ ಸಜ್ಜಾದ್ರಾ ಅಂದ್ರೆ ಖಂಡಿತ ಇಲ್ಲ.

ಇತ್ತೀಚಿಗೆ ಎಲ್ಲೆಲ್ಲೂ ಕಚ್ಚಾ ಬಾದಾಮ್ ಹಾಡು ಸದ್ದು ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳ ವರೆಗೆ ಅನೇಕರು ಈ ಹಾಡಿಗೆ ಹೆಜ್ಜೆ ಹಾಕಿ ವೀಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಂ ಹಾಗೂ ಅನ್ಯ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿಕೊಂಡು ಸಂಭ್ರಮಿಸಿದ್ದಾರೆ. ಈಗ ರಾನು ಸಹಾ ಅದೇ ಹಾಡಿಗೆ ಮದುವೆ ಹೆಣ್ಣಿನ ಹಾಗೆ ಅಲಂಕಾರ ಮಾಡಿಕೊಂಡು ಹಾಡನ್ನು ಹಾಡಿರುವ ವೀಡಿಯೋ ಫೇಸ್ ಬುಕ್ ಹಾಗೂ ಅನ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾನು ವಿನ ಈ ಹೊಸ ವೀಡಿಯೋ ಯಾರು ರೆಕಾರ್ಡ್ ಮಾಡಿದರು ಎನ್ನುವುದು ಇನ್ನೂ ಗೊತ್ತಿಲ್ಲವಾದರೂ ಸೋಶಿಯಲ್ ಮೀಡಿಯಾ ಗಳಲ್ಲಿ ನೆಟ್ಟಿಗರ ಗಮನವನ್ನು ಈ ವೀಡಿಯೋ ಸೆಳೆಯುತ್ತಿದೆ. ಈ ಹಿಂದೆ ಒಮ್ಮೆ ರಾನು ಕಚ್ಚಾ ಬಾದಾಮ್ ಹಾಡನ್ನು ಹಾಡಿದ್ದ ವೀಡಿಯೋ ಸಹಾ ಮೀಡಿಯಾಗಳ ಮುಂದೆ ಬಂದಿತ್ತು. ಈಗ ಮತ್ತೊಮ್ಮೆ ಹೊಸ ವೀಡಿಯೋ ಬಂದಿದ್ದು, ಇದರಲ್ಲಿ ರಾನು ಮದುವೆ ಹೆಣ್ಣಿನಿಂದ ಕಂಡಿರುವುದು ನೋಡಿ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ.

2019 ರಲ್ಲಿ ರಾನು ಮಂಡಾಲ್ ಏಕ್ ಪ್ಯಾರ್ ಕಾ ನಗ್ಮಾ ಹೇ ಎನ್ನುವ ಹಾಡಿನ ಮೂಲಕ ಜನಪ್ರಿಯತೆ ಪಡೆದಿದ್ದರು. ವೀಡಿಯೋ ಟ್ವಿಟರ್ ನಲ್ಲಿ ಶೇರ್ ಆದ ಮೇಲೆ ಇದನ್ನು ನೋಡಿದ ನೆಟ್ಟಿಗರು, ಅಯ್ಯೋ ದೇವ್ರೇ ಇದೆಲ್ಲಾ ನೋಡಬೇಕಾ ಎಂದರೆ, ಕೆಲವರು ರಾನು ಗೆ ಹುಚ್ಚು ಹಿಡಿದಿರುವ ಹಾಗಿದೆ ಎಂದಿದ್ದಾರೆ. ಇನ್ನೂ ಕೆಲವರು ತಮಾಷೆಯ, ವ್ಯಂಗ್ಯ ಮಾಡುವ ಇಮೋಜಿಗಳನ್ನು ಹಾಕುತ್ತಾ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಾ ಸಾಗಿದ್ದಾರೆ. ರಾನು ವಿಡಿಯೋ ನೋಡಿ ಅನೇಕರು ವ್ಯಂಗ್ಯ ಮಾಡುತ್ತಾ ಸಾಗಿದ್ದಾರೆ.

Leave a Reply

Your email address will not be published.