ಇಂಗ್ಲೀಷ್ ಗಾಯಕಿಯ ಪುಷ್ಪ ಕ್ರೇಜ್, ಶ್ರೀವಲ್ಲಿ ಸಾಂಗ್ ಈಗ ಇಂಗ್ಲೀಷ್ ನಲ್ಲಿ: ನೆಟ್ಟಿಗರೆಂದರು ಅದ್ಭುತ!!

Written by Soma Shekar

Published on:

---Join Our Channel---

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಕ್ರಿಯೇಟಿವ್ ಡೈರೆಕ್ಟರ್ ಸುಕುಮಾರ್ ಕಾಂಬಿನೇಷನ್ ನಲ್ಲಿ, ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ದೇವೀ ಶ್ರೀಪ್ರಸಾದ್ ಸಂಗೀತ ಸಾರಥ್ಯದಲ್ಲಿ ಮೂಡಿ ಬಂದಿರುವ ಸಿನಿಮಾ ಪುಷ್ಪ, ನಟ ಅಲ್ಲು ಅರ್ಜುನ್ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಕೂಡಾ ಆಗಿರುವ ಪುಷ್ಪ ಮ್ಯೂಸಿಕ್ ನಿಂದಲೂ ಸಹಾ ಗಮನ ಸೆಳೆದಿದೆ. ಪುಷ್ಪ ಸಿನಿಮಾದ ಹಾಡುಗಳು ಎಲ್ಲೆಲ್ಲೂ ಸದ್ದು ಮಾಡುತ್ತಲೇ ಇದೆ. ಇದೊಂದು ರೀತಿಯಲ್ಲಿ ಪುಷ್ಪ ಮೇನಿಯಾ ಎನ್ನುವುದು ಹಾಡುಗಳನ್ನು ಸೆಲೆಬ್ರಿಟಿಗಳು ಹಾಗೂ ಸಿನಿಮಾ ಮಂದಿ ಶೇರ್ ಮಾಡುತ್ತಿರುವ ಪರಿ ನೋಡಿದಾಗಲೇ ತಿಳಿಯುತ್ತಿದೆ.

ರಕ್ತ ಚಂದನದ ಕಳ್ಳ ಸಾಗಣೆಯ ಕಥೆಯೊಂದಿಗೆ ಕಳೆದ ವರ್ಷ ಡಿಸೆಂಬರ್ ನಲ್ಲಿ ತೆರೆಗೆ ಬಂದ ಸಿನಿಮಾ ದೊಡ್ಡ ಯಶಸ್ಸನ್ನು ಪಡೆದುಕೊಂಡಿದೆ. ಈ ಸಿನಿಮಾ ಮೂಲಕ ಅಲ್ಲು ಅರ್ಜುನ್ ಕೇವಲ ಪ್ಯಾನ್ ಇಂಡಿಯಾ ಸ್ಟಾರ್ ಮಾತ್ರವೇ ಅಲ್ಲದೇ, ಪ್ರಪಂಚ ವ್ಯಾಪ್ತಿಯಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಮುಖ್ಯವಾಗಿ ಈ ಸಿನಿಮಾದಲ್ಲಿನ ಪುಷ್ಪ ರಾಜ್ ಪಾತ್ರಕ್ಕೆ ವಿದೇಶಿಯರು ಕೂಡಾ ಮೋಡಿಗೊಳಗಾಗಿದ್ದಾರೆ. ಇನ್ನು ಈ ಸಿನಿಮಾ ಹಾಡುಗಳ ವಿಚಾರಕ್ಕೆ ಬಂದರೆ ಅವು ಅಂತರ್ಜಾಲದಲ್ಲಿ ಸಂಚಲನವನ್ನು ಸೃಷ್ಟಿಸುತ್ತಿದೆ.

ಪುಷ್ಪ ಸಿನಿಮಾದ ಶ್ರೀವಲ್ಲಿ ಹಾಡಿಗೆ ಸಾಮಾನ್ಯ ಜನರು ಮಾತ್ರವೇ ಅಲ್ಲದೇ ಸೆಲೆಬ್ರಿಟಿಗಳು ಸಹಾ ಹೆಜ್ಜೆ ಹಾಕಿ ಗಮನವನ್ನು ಸೆಳೆಯುತ್ತಿದ್ದಾರೆ. ಇವೆಲ್ಲವುಗಳ ನಡುವೆಯೇ ಈಗ ಶ್ರೀವಲ್ಲಿ ಹಾಡಿನ ಇಂಗ್ಲೀಷ್ ವರ್ಷನ್ ನೆಟ್ಟಿಗರಿಗೆ ಶಾ ಕ್ ನೀಡಿದೆ. ಇಂಗ್ಲೀಷ್ ಗಾಯಕಿ ಎಮ್ಮಾ ಹೀಸ್ಟರ್ಸ್ ಶ್ರೀವಲ್ಲಿ ಹಾಡಿನ ಇಂಗ್ಲೀಷ್ ವರ್ಷನ್ ಅನ್ನು ಹಾಡಿ ಯೂಟ್ಯೂಬ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ಸಂಗೀತ ನಿರ್ದೇಶಕ ದೇವೀ ಶ್ರೀ ಪ್ರಸಾದ್ ಅವರು ಶೇರ್ ಮಾಡಿಕೊಂಡಿದ್ದಾರೆ.

ದೇವೀ ಶ್ರೀ ಪ್ರಸಾದ್ ತಮ್ಮ ಟ್ವೀಟ್ ನಲ್ಲಿ, ಇದು ಚೆನ್ನಾಗಿ ಹಿಡಿಸಿತು, “ಹೇ ಸಿದ್ ರಾಮ್ ಬ್ರೋ, ನಾವು ರೆಕಾರ್ಡಿಂಗ್ ಮಾಡಿದಾಗ ತಮಾಷೆಯಾಗಿ ಇಂಗ್ಲೀಷ್ ವರ್ಷನ್ ನಲ್ಲೂ ಮಾಡೋಣ ಅಂದಿದ್ದೆ, ಆದರೆ ಎಮ್ಮಾ ಹೀಸ್ಟರ್ ಬಹಳ ಸುಂದರವಾಗಿ ಮಾಡಿದ್ದಾರೆ. ನಾವು ಕೂಡಾ ನಮ್ಮ ವರ್ಷನ್ ನಲ್ಲಿ ಮಾಡಬೇಕಾಗಬಹುದು” ಎಂದು ಬರೆದುಕೊಂಡಿದ್ದಾರೆ. ಇನ್ನು ಶ್ರೀವಲ್ಲಿ ಹಾಡನ್ನು ಇಂಗ್ಲೀಷ್ ನಲ್ಲಿ ಕೇಳಿದ ನೆಟ್ಟಿಗರು ಬಹಳ ಅದ್ಭುತವಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Leave a Comment