ಆ ಸ್ಟಾರ್ ಹೀರೋ ಜೊತೆ ಸಿನಿಮಾ ಬೇಡ: ಮಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಸ್ಟಾರ್ ಡೈರಕ್ಟರ್ ಶಂಕರ್! ಯಾರು ಆ ಹೀರೋ?

Entertainment Featured-Articles Movies News

ಸಿನಿಮಾರಂಗದಲ್ಲಿ ಪ್ರಖ್ಯಾತ ನಿರ್ದೇಶಕ ಎನಿಸಿಕೊಂಡಿರುವ ಶಂಕರ್ ಅವರ ಬಗ್ಗೆ ಪ್ರತ್ಯೇಕವಾಗಿ ಪರಿಚಯ ನೀಡುವ ಅಗತ್ಯವಿಲ್ಲ. ಭಾರಿ ಬಜೆಟ್ ಸಿನಿಮಾಗಳನ್ನು ತೆರೆಗೆ ತರುವುದರಲ್ಲಿ ನಿರ್ದೇಶಕ ದಿಟ್ಟ ಹಸ್ತ ಎನಿಸಿಕೊಂಡಿದ್ದಾರೆ. ನಿರ್ದೇಶಕ ಶಂಕರ್ ಅವರ ಸಿನಿಮಾದಲ್ಲಿ ನಟಿಸಲು ದಕ್ಷಿಣ ಸಿನಿಮಾ ರಂಗದಿಂದ ಹಿಡಿದು ಬಾಲಿವುಡ್ ವರೆಗೆ ಹಲವು ನಟ, ನಟಿಯರು ಹಾತೊರೆಯುವುದು ವಾಸ್ತವ. ಪ್ರಸ್ತುತ ಇವರು ತೆಲುಗಿನ ಯುವ ಸ್ಟಾರ್ ನಟ ರಾಮ್ ಚರಣ್ ತೇಜಾ ನಾಯಕನಾಗಿರುವ ಒಂದು ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶಂಕರ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿದ್ದಾರೆ. ಅವರ ಇಬ್ಬರು ಹೆಣ್ಣು ಮಕ್ಕಳು ಸಹಾ ವೈದ್ಯಕೀಯ ಶಿಕ್ಷಣವನ್ನು ಮುಗಿಸಿದ್ದಾರೆ.

ನಿರ್ದೇಶಕ ಶಂಕರ್ ಅವರ ಮೊದಲ ಪುತ್ರಿ ಅದಿತಿ ಶಂಕರ್ ಅವರಿಗೆ ಮೊದಲಿನಿಂದಲೂ ಸಹಾ ನಟನೆಯ ಕಡೆ ಆಸಕ್ತಿಯಿದ್ದು, ಅವರು ವಿರುಮಾನ್ ಸಿನಿಮಾದ ಮೂಲಕ ಸಿನಿಮಾ ಜಗತ್ತಿಗೆ ಕಾಲಿಟ್ಟಿದ್ದಾರೆ. ಆದರೆ ಅವರ ತಂದೆ ನಿರ್ದೇಶಕ ಶಂಕರ್ ಅವರಿಗೆ ಮಾತ್ರ ಮಗಳು ಸಿನಿಮಾ ರಂಗಕ್ಕೆ ಬರುವುದು ಇಷ್ಟ ಇರಲಿಲ್ಲ ಎನ್ನಲಾಗಿದೆ. ಈ ವಿಷಯವನ್ನು ಸ್ವತಃ ಅದಿತಿ ವಿರುಮಾನ್ ಸಿನಿಮಾದ ಆಡಿಯೋ ಬಿಡುಗಡೆಯ ಸಮಾರಂಭದಲ್ಲಿ ಹೇಳಿದ್ದರು. ಅದಿತಿ ಮಾತನಾಡುತ್ತಾ, ನಮ್ಮ ತಂದೆಗೆ ನಾನು ಸಿನಿಮಾಕ್ಕೆ ಬರುವುದು ಇಷ್ಟವಿಲ್ಲ, ಒಂದು ವೇಳೆ ಹೀರೋಯಿನ್ ಆಗಿ ಸಕ್ಸಸ್ ಸಿಗಲಿಲ್ಲ ಎಂದರೆ ಮತ್ತೆ ವೈದ್ಯ ವೃತ್ತಿಗೆ ವಾಪಸಾಗುವ ಮಾತು ಕೊಟ್ಟು ಬಂದಿದ್ದೇನೆ ಎಂದು ಹೇಳಿದ್ದರು.

ಇನ್ನು ಈ ವಿಚಾರ ಹೀಗಿರುವಾಗಲೇ ಮತ್ತೊಂದು ಆಸಕ್ತಿಕರ ವಿಚಾರವೊಂದು ಸಹಾ ಹೊರ ಬಂದಿದೆ. ಅದಿತಿ ಅವರು ನಟಿಸಿರುವ ವಿರುಮಾನ್ ಸಿನಿಮಾದಲ್ಲಿ ನಟ ಕಾರ್ತಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಿನಿಮಾಕ್ಕೂ ಮೊದಲು ಅದಿತಿ ಅವರಿಗೆ ತಮಿಳಿನ ಮತ್ತೊಬ್ಬ ಸ್ಟಾರ್ ನಟ ಸಿಂಬು ನಾಯಕನಾಗಿದ್ದ, ಕುಮಾರ್ ನಿರ್ದೇಶನದ ಸಿನಿಮಾವೊಂದಕ್ಕೆ ನಾಯಕಿಯಾಗಿ ಆಫರ್ ದೊರೆತಿತ್ತು ಎನ್ನಲಾಗಿದೆ. ಆದರೆ ಶಂಕರ್ ಅವರಿಗೆ ಅದು ಇಷ್ಟವಾಗದೇ ಮಗಳಿಗೆ ಆ ಸಿನಿಮಾದಲ್ಲಿ ನಟಿಸಬಾರದು ಎಂದು ಎಚ್ಚರಿಕೆಯನ್ನು ಸಹಾ ನೀಡಿದರಂತೆ.

ಶಂಕರ್ ಈ ರೀತಿ ಹೇಳುವುದಕ್ಕೆ ಪ್ರಮುಖ ಕಾರಣ ನಟ ಸಿಂಬು ಕುರಿತಾಗಿ ಬರುವ ರೂಮರ್ಸ್ ಎನ್ನಲಾಗಿದೆ. ಸಿಂಬು ಈಗಾಗಲೇ ಲವ್ ಅಫೇರ್ ಗಳ ನಾಯಕ ಎಂದೇ ಸುದ್ದಿಯಾಗಿದ್ದಾರೆ. ಅವರ ಸಿನಿಮಾಗಳಲ್ಲಿ ನಟಿಸಿದ ನಟಿಯರ ಹೆಸರು ಸಹಾ ಅವರೊಂದಿಗೆ ತಳಕು ಹಾಕಿಕೊಳ್ಳುತ್ತವೆ. ನಟನ ಬಗ್ಗೆ ಸಾಕಷ್ಟು ಗಾಳಿ ಸುದ್ದಿಗಳು, ವದಂತಿಗಳು ಹರಿದಾಡುತ್ತವೆ. ಇವೆಲ್ಲವನ್ನೂ ಗಮನಿಸಿರುವ ಶಂಕರ್ ಅವರು ತಮ್ಮ ಮಗಳ ಭವಿಷ್ಯದ ದೃಷ್ಟಿಯಿಂದ ಸಿಂಬು ಜೊತೆಗೆ ನಾಯಕಿಯಾಗಿ ನಟಿಸುವುದು ಬೇಡ ಎನ್ನುವ ನಿರ್ಧಾರವನ್ನು ಮಾಡಿದ್ದಾರೆ ಎನ್ನಲಾಗಿದೆ.

Leave a Reply

Your email address will not be published.