ಆ ಸಿನಿಮಾ ಮಾಡಬಾರದಿತ್ತು:17 ವರ್ಷಗಳ ಕೆರಿಯರ್ ನಲ್ಲಿ ಅನುಷ್ಕಾ ಶೆಟ್ಟಿ ಬೇಸರಕ್ಕೆ ಕಾರಣವಾದ ಸಿನಿಮಾ ಅದು
ಅನುಷ್ಕಾ ಶೆಟ್ಟಿ, ಈ ಹೆಸರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರತ್ಯೇಕ ಪರಿಚಯದ ಅಗತ್ಯ ಖಂಡಿತ ಇಲ್ಲ. ಪ್ರಸ್ತುತ ನಟಿ ಅನುಷ್ಕಾ ಯಾವುದೇ ಹೊಸ ಸಿನಿಮಾ ಮಾಡದೇ ಇದ್ದರೂ ಅಭಿಮಾನಿಗಳಲ್ಲಿ ಅವರ ರೇಂಜ್ ಮತ್ತು ಸ್ಟಾರ್ ಡಂ ಕಡಿಮೆಯಾಗಿಲ್ಲ.
ಇಷ್ಟೊಂದು ಫ್ಯಾನ್ ಫಾಲೋಯಿಂಗ್ ಸಿಗೋದು ಬಹಳ ಅಪರೂಪ. ಆದರೆ ಅನುಷ್ಕಾ ಶೆಟ್ಟಿ ಗೆ ಹೀರೋಗಳನ್ನು ಮೀರಿದ ಫ್ಯಾನ್ ಫಾಲೋಯಿಂಗ್ ಇದೆ ಎಂದರೆ ಸುಳ್ಳಲ್ಲ. ಅನುಷ್ಕಾ ಶೆಟ್ಟಿ ಬಗ್ಗೆ ಮತ್ತೊಂದು ಕುತೂಹಲಕಾರಿ ವಿಷಯ ಏನೆಂದರೆ ಚಿತ್ರದಲ್ಲಿನ ತನ್ನ ಪಾತ್ರಕ್ಕಾಗಿ ಈ ನಟಿ ಯಾವ ರೀತಿಯ ಡ್ರೆಸ್ ಧರಿಸಿದರೂಣ ಹೊರಗೆ ಅವರು ತುಂಬಾ ಫಾರ್ಮಲ್ ರೀತಿಯಲ್ಲಿ ಡ್ರೆಸ್‌ಗಳನ್ನು ಧರಿಸುತ್ತಾರೆ.
ಯಾವುದೇ ಸಂದರ್ಶನಕ್ಕೆ ಹೋಗುವಾಗಲೇ ಆಗಲೀ, ಯಾವುದೇ ಫಂಕ್ಷನ್ ಗೆ ಹೋಗಬೇಕಾಗಲೀ ಅನುಷ್ಕಾ ಅವರು ಸಿಂಪಲ್ ಆಗಿ ಸೀರೆ ಉಟ್ಟು ಅಥವಾ ಚೂಡಿದಾರ್ ಧರಿಸಿ ಹೋಗುತ್ತಾರೆ. ಹಾಗಾಗಿಯೇ ಇಂಡಸ್ಟ್ರಿಯಲ್ಲಿ ಸ್ವೀಟಿ ಎಂದರೆ ಒಂದು ವಿಶೇಷ ಅಭಿಮಾನವಿದೆ. ಸಿನಿಮಾ ಮಾಡದಿದ್ದರೂ ಸ್ಟಾರ್ ಹೀರೋಯಿನ್ ಗಳ ಲಿಸ್ಟ್ ನಲ್ಲಿಯೇ ಇರುತ್ತಾರೆ. ಸೈಲೆನ್ಸ್ ಚಿತ್ರದ ನಂತರ ಸ್ವೀಟಿ ಯಾವುದೇ ಹೊಸ ಸಿನಿಮಾ ಮಾಡಿಲ್ಲ ಅನ್ನೋದು ನಮಗೆ ಗೊತ್ತೇ ಇದೆ. ಇತ್ತೀಚೆಗಷ್ಟೇ ನವೀನ್ ಪೋಲಿಶೆಟ್ಟಿ ಜೊತೆಗಿನ ಚಿತ್ರಕ್ಕೆ ಕಮಿಟ್ ಆಗಿದ್ದಾರೆ ಎನ್ನಲಾಗಿದೆಯಾದರೂ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ.
ಇತ್ತೀಚೆಗಷ್ಟೇ ನಟಿ ಅನುಷ್ಕಾ ಶೆಟ್ಟಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು 17 ವರ್ಷ ಪೂರೈಸಿದ್ದಾರೆ. ಸೂಪರ್ ಸಿನಿಮಾದ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಇವರು, ಚಿತ್ರರಂಗದಲ್ಲಿ ನಾಯಕಿಯಾಗಿ 17 ವರ್ಷಗಳನ್ನು ಪೂರೈಸಿದ್ದಾರೆ. ಆಕೆಯ ವೃತ್ತಿಜೀವನದಲ್ಲಿ ಅನೇಕ ಬ್ಲಾಕ್‌ಬಸ್ಟರ್ ಹಿಟ್‌ಗಳು ಸಿಕ್ಕಿವೆ. ಆದರೆ, ಹಲವು ವರ್ಷಗಳ ತಮ್ಮ ವೃತ್ತಿ ಜೀವನದಲ್ಲಿ ಅನುಷ್ಕಾಗೆ ಸ್ಕ್ರಿಪ್ಟ್ ಇಷ್ಟವಾಗದಿದ್ದರೂ, ಅವರು ಮಾಡಿದ ಚಿತ್ರವೊಂದಿದೆ. ಹೌದು ಅದು ಬಿಲ್ಲಾ ಸಿನಿಮಾ.
ಈ ಸಿನಿಮಾದ ಕಥೆಯನ್ನು ಅನುಷ್ಕಾಗೆ ಹೇಳಿದಾಗ ಅದು ಅವರಿಗೆ ಇಷ್ಟವಾಗಲಿಲ್ಲವಂತೆ. ಆದರೆ ಪ್ರಭಾಸ್ ಅವರ ಒಂದು ಮನವಿ ಗಾಗಿ ಆ ಪಾತ್ರವನ್ನು ತಾನು ಒಪ್ಪಿಕೊಂಡರು. ಆದರೆ ಅದರ ಫಲಿತಾಂಶ ನೋಡಿ ನಟಿಗೆ ಬೇಸರವಾಗಿತ್ತು. ಏಕೆಂದರೆ ಸಿನಿಮಾ ಫ್ಲಾಪ್ ಆದರೂ ಸಹಾ ಅನುಷ್ಕಾ ಮತ್ತು ಪ್ರಭಾಸ್ ಜೋಡಿಗೆ ಒಳ್ಳೆಯ ಹೆಸರು ಬಂದಿತ್ತು. ಇಂದಿಗೂ ಸಹಾ ಈ ಸಿನಿಮಾ ಟಿವಿಯಲ್ಲಿ ಬಂದರೆ ಖಂಡಿತಾ ಮಿಸ್ ಮಾಡದೆ ಸಿನಿಮಾ ನೋಡುವ ಅಭಿಮಾನಿಗಳು ಇದ್ದಾರೆ.