“ಆ ಸಿನಿಮಾವನ್ನು ಒಂದು ನಾಯಿ ಕೂಡಾ ನೋಡಿಲ್ಲ”- ಸಲ್ಮಾನ್ ಖಾನ್ ಅಂದು ಹೃತಿಕ್ ಸಿನಿಮಾಕ್ಕೆ ಮಾಡಿದ್ರು ಅವಮಾನ

Entertainment Featured-Articles News

ಹೊಳೆಯುವ ಗ್ಲಾಮರ್ ನಿಂದ ಕಂಗೊಳಿಸುವ ಸಿನಿಮಾ ಜಗತ್ತಿನಲ್ಲಿ ವಿ ವಾ ದಗಳು ಕೂಡಾ ಕಡಿಮೆಯೇನಿಲ್ಲ. ಸೆಲೆಬ್ರಿಟಿಗಳು ಒಬ್ಬರು ಇನ್ನೊಬ್ಬರ ಅ ಪ ಮಾ ನ ಮಾಡುವುದು ಇಲ್ಲಿ ಬಹಳ ಸಾಮಾನ್ಯವೆನಿಸಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಅಪರೂಪವಾಗುತ್ತಿವೆ ಅಥವಾ ಕುಗ್ಗುತ್ತಿದೆ ಎಂದು ಹೇಳಬಹುದು. ಆದರೆ ಹಿಂದೊಮ್ಮೆ ಸಿನಿಮಾ ಸೆಲೆಬ್ರಿಟಿಗಳು, ಮತ್ತೊಬ್ಬ ನಟ ಅಥವಾ ನಟಿಯ ಬಗ್ಗೆ ಸಂದರ್ಶನಗಳಲ್ಲಿ ಬಹಳ ಪ್ರಾಮಾಣಿಕತೆಯಿಂದ ಟೀಕೆ ಮಾಡುವುದು, ಮತ್ತೊಬ್ಬರ ಬಗ್ಗೆ ಅ ಪ ಮಾನಕರ ಹೇಳಿಕೆಗಳನ್ನು ನೀಡುವ ಕೆಲಸವನ್ನು ಮಾಡುತ್ತಿದ್ದರು.

ದಶಕದ ಹಿಂದಿನ ವಿಚಾರವನ್ನು ಹೇಳುವುದಾದರೆ ಇಂದು ಬಾಲಿವುಡ್‌ ನ ದಿಗ್ಗಜರು ಎನಿಸಿಕೊಂಡಿರುವ ನಟ ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಶನ್ ನಡುವೆ ಅಂದು ಒಂದು ಮಾತಿನ ಚಕಮಕಿಯೂ ನಡೆದಿತ್ತು. ಆದರೆ ಈ ಮಾತಿನ ಭರಾಟೆಯಲ್ಲಿ ನಟ ಸಲ್ಮಾನ್ ಖಾನ್ ಅವರ ಮಾತುಗಳು ತೀರಾ ಅ ಪ ಮಾನಕರವಾಗಿತ್ತು. ಆದರೆ ಹೃತಿಕ್ ರೋಷನ್ ಅವರು ಈ ವಿಚಾರವನ್ನು ಸೂಕ್ಷ್ಮವಾಗಿ ನಿಭಾಯಿಸುವ ಪ್ರಯತ್ನವನ್ನು ಮಾಡಿದ್ದರು ಮಾತ್ರವೇ ಅಲ್ಲದೇ ಈ ವಿಚಾರಕ್ಕೆ ಒಂದು ಕೊನೆಯನ್ನು ಹಾಡಲು ಉತ್ತಮ ರೀತಿಯಲ್ಲಿ ಪ್ರಯತ್ನ ಮಾಡಿದ್ದರು.

2010 ರಲ್ಲಿ ನಟ ಸಲ್ಮಾನ್ ಖಾನ್ ಅವರು ವಿಶೇಷ ಚೇತನ ಮಕ್ಕಳಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಅವರು ಮಾತನಾಡುತ್ತಾ ಹೃತಿಕ್ ರೋಷನ್ ಅವರ ಗುಜಾರಿಷ್ ಸಿನಿಮಾದ ಕುರಿತಾಗಿ ವ್ಯಂಗ್ಯದ ಮಾತುಗಳನ್ನು ಆಡಿದ್ದರು. ಆ ಸಿ‌ನಿಮಾದಲ್ಲಿ ನೊಣಗಳು ಹಾರುತ್ತಿದ್ದವು. ಒಂದು ನೊಣವೂ ಅದನ್ನು ನೋಡಲು ಹೋಗಿರಲಿಲ್ಲ, ಅಷ್ಟೇ ಏಕೆ ಒಂದು ನಾಯಿ ಕೂಡಾ ಹೋಗಿರಲಿಲ್ಲ ಎನ್ನುವ ಮಾತನ್ನು ಹೇಳಿದರು. ಸಲ್ಮಾನ್ ಖಾನ್ ಆಡಿದ ಮಾತುಗಳು ರೋಷನ್ ಅವರಿಗೆ ಬೇಸರವನ್ನು ಉಂಟುಮಾಡಿತು.

ನಂತರ ಒಂದು ರಾಷ್ಟ್ರೀಯ ಮಾಧ್ಯಮದ ಸಂದರ್ಶನದಲ್ಲಿ ಮಾತನಾಡುತ್ತಾ, ಹೃತಿಕ್ ರೋಷನ್ ಅವರು, ನಾನು ಸದಾ ಸಲ್ಮಾನ್ ಖಾನ್ ಅವರನ್ನು ಗೌರವಿಸುತ್ತೇನೆ, ಅವರ ಒಳ್ಳೆಯ ಕೆಲಸವನ್ನು ಮೆಚ್ಚಿದ್ದೇನೆ, ಹೊಗಳಿದ್ದೇನೆ, ಈಗಲೂ ಸಹ ಅದನ್ನೇ ಮಾಡುತ್ತೇನೆ. ಅವರು ಇಂದು ಹೀರೋ, ಮುಂದೆಯೂ ಹೀರೋ ಆಗಿರುತ್ತಾರೆ. ಆದರೆ ಒಬ್ಬ ಸಿನಿಮಾ ನಿರ್ಮಾಪಕನ ಕುರಿತಾಗಿ, ತನ್ನ ಸಿನಿಮಾದ ಕಲೆಕ್ಷನ್ ನಷ್ಟು ಅವರ ಸಿನಿಮಾ ಮಾಡುವುದಿಲ್ಲ ಎನ್ನುವ ಕಾರಣಕ್ಕೆ ಅಪಹಾಸ್ಯ ಮಾಡುವುದು ಸರಿಯಲ್ಲ ಎಂದಿದ್ದರು.

ಗುಜಾರಿಷ್ ಸಿನಿಮಾ ತನ್ನದೇ ಆದಂತಹ ಹೆಸರನ್ನು ಪಡೆದುಕೊಂಡಿದೆ. ಸಂಜಯ್ ಲೀಲಾ ಬನ್ಸಾಲಿ ಅವರ ಕುರಿತಾಗಿ ಹೀಗೆ ಮಾತನಾಡಿದರೆ ನನಗೆ ದುಃಖವಾಗುತ್ತದೆ ಎಂದು ಹೇಳಿದ್ದರು. ನನ್ನ ಅಭಿಪ್ರಾಯದಲ್ಲಿ ಒಬ್ಬ ಹೀರೋ ಗರ್ವ ಪಡುವುದಿಲ್ಲ. ವಾಸ್ತವದಲ್ಲಿ ನೀವು ಸೂಪರ್ ಸಕ್ಸಸ್ ಆದಿರಿ ಎಂದರೆ ನೀವು ಬೇರೆಯವರ ಜೊತೆ ಇನ್ನಷ್ಟು ಪ್ರೀತಿಯಿಂದ ವರ್ತಿಸಬೇಕಾಗುತ್ತದೆ. ಬೇರೆಯವರನ್ನು ಅಪಹಾಸ್ಯ ಮಾಡಬಾರದು. ಅವರು ಆಡಿದ ಮಾತುಗಳಿಗೆ ನಾನು ಅಂದೇ ಕ್ಷಮಿಸಿ ಬಿಟ್ಟಿದ್ದೇನೆ. ನಾನು ಯಾವುದೇ ವಿಚಾರವನ್ನು ಆಳವಾಗಿ ತೆಗೆದುಕೊಳ್ಳಲು ಬಯಸುವುದಿಲ್ಲ.

ಅವರ ಬಗ್ಗೆ ನನ್ನ ಮನಸ್ಸಿನಲ್ಲಿ ಪ್ರೀತಿ ಮಾತ್ರ ಇದೆ. ಆ ಪ್ರೀತಿಯೂ ಮುಂದೆಯೂ ಇರುತ್ತದೆ. ನಾನು ಈ ವಿಚಾರವನ್ನು ಇಲ್ಲೇ ಕೊನೆ ಮಾಡುತ್ತೇನೆ. ಅಲ್ಲದೇ ಈ ಬಾರಿ ಅವರನ್ನು ಭೇಟಿಯಾದಾಗ ಅವರೊಂದಿಗೆ ಹೃದಯಪೂರ್ವಕವಾಗಿ ಅಪ್ಪುಗೆಯನ್ನು ಪಡೆದುಕೊಳ್ಳುತ್ತೇನೆ ಎನ್ನುವ ಮಾತನ್ನು ಹೇಳಿದ್ದರು. ದಶಕದ ನಂತರ ಇಂದು ಸಿನಿಮಾ ರಂಗದಲ್ಲಿ ಇಂತಹ ಹೇಳಿಕೆಗಳು ಸಾಕಷ್ಟು ಕಡಿಮೆಯಾಗಿದೆ ಎನ್ನಬಹುದು. ಆಗೊಮ್ಮೆ, ಈಗೊಮ್ಮೆ ಇಂತಹ ಸುದ್ದಿಗಳು ಕೇಳಿ ಬರುತ್ತವೆ.

Leave a Reply

Your email address will not be published.