ಆ ವಿಚಾರದಲ್ಲಿ ಈಗಲೂ ನನಗೆ ಸಮಂತಾ ಬೆಸ್ಟ್: ಆಸಕ್ತಿಕರ ಹೇಳಿಕೆ ನೀಡಿದ ನಾಗಚೈತನ್ಯ

Written by Soma Shekar

Published on:

---Join Our Channel---

ನಾಗಚೈತನ್ಯ ಮತ್ತು ಸಮಂತ ನಡುವಿನ ವಿವಾಹ ವಿಚ್ಛೇದನ ಎಷ್ಟು ಚರ್ಚೆಗಳಿಗೆ ಕಾರಣವಾಯಿತು ಎನ್ನುವ ವಿಚಾರವನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಈ ಮುದ್ದಾದ ಜೋಡಿಯು ಬೇರೆಯಾಗಿದ್ದನ್ನು ಇನ್ನೂ ಕೂಡಾ ಅವರ ಅಭಿಮಾನಿಗಳಿಗೆ ಜೀರ್ಣಿಸಿಕೊಳ್ಳುವುದು ಸಾಧ್ಯವಾಗಿಲ್ಲ. ಆದರೆ ಈ ಜೋಡಿ ತಾವು ಇಬ್ಬರೂ ಇಷ್ಟಪಟ್ಟೇ ದೂರಾಗುತ್ತಿದ್ದೇವೆ ಎನ್ನುವ ಮಾತನ್ನು ಅಕ್ಟೋಬರ್ ಎರಡರಂದು ಸಾಮಾಜಿಕ ಜಾಲತಾಣಗಳ ಮೂಲಕ ಅಧಿಕೃತವಾಗಿ ಘೋಷಣೆಯನ್ನು ಮಾಡಿದಾಗ ಅಭಿಮಾನಿಗಳು ಶಾ ಕ್ ಆಗಿದ್ದರು.

ಇದಾದ ನಂತರ ಈ ಜೋಡಿಯು ನೇರವಾಗಿ ತಮ್ಮ ವಿಚ್ಛೇದನದ ವಿಚಾರವಾಗಿ ಯಾವುದೇ ವೇದಿಕೆಯಲ್ಲೂ ಕೂಡಾ ಮುಕ್ತವಾಗಿ ಮಾತನಾಡಲಿಲ್ಲ. ಸಮಂತಾ ಆಗಾಗ ಸೋಶಿಯಲ್ ಮೀಡಿಯಾ ಮೂಲಕ ಕೆಲವು ಪೋಸ್ಟ್ ಗಳನ್ನು ಮಾಡಿದರಾದರೂ ನಾಗಚೈತನ್ಯ ಮಾತ್ರ ತಮ್ಮ ವಿಚ್ಛೇದನದ ಬಗ್ಗೆ ಒಂದು ಮಾತನ್ನು ಆಡಲಿಲ್ಲ, ಯಾವುದೇ ಪ್ರತಿಕ್ರಿಯೆಯನ್ನು ಸಹಾ ನೀಡಲಿಲ್ಲ. ಆದರೆ ಇತ್ತೀಚಿಗೆ ನಾಗಚೈತನ್ಯ ತಮ್ಮ ಹೊಸ ಸಿನಿಮಾ ಬಂಗರ್ರಾಜು ಪ್ರಮೋಷನ್ ವೇಳೆ ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ನಾಗಚೈತನ್ಯ ಸಮಂತಾ ಬಗ್ಗೆ ಮಾತನಾಡಿದ ಪ್ರತಿಯೊಂದು ವಿಷಯವೂ ಈಗ ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಾ ಸಾಗಿದೆ. ಇವೆಲ್ಲವುಗಳ ಬೆನ್ನಲ್ಲೇ ನಾಗಚೈತನ್ಯ ಸಮಂತಾ ಬಗ್ಗೆ ಮತ್ತೊಮ್ಮೆ ಮಾತನಾಡಿ ಎಲ್ಲರ ಗಮನವನ್ನು ತನ್ನ ಕಡೆಗೆ ಸೆಳೆದಿದ್ದಾರೆ. ಇತ್ತೀಚಿಗೆ ಒಂದು ಸಂದರ್ಶನದಲ್ಲಿ ನಾಗಚೈತನ್ಯ ಅವರನ್ನು, “ನೀವು ನಟಿಸಿದ ಸಿನಿಮಾಗಳಲ್ಲಿನ ಹೀರೋಯಿನ್ ಗಳಲ್ಲಿ ಬೆಸ್ಟ್ ಆನ್ ಸ್ಕ್ತೀನ್ ಕೆಮಿಸ್ಟ್ರಿ ಯಾರ ಜೊತೆ ಇದೆ?” ಎನ್ನುವ ಪ್ರಶ್ನೆ ಕೇಳಲಾಯಿತು.

ಈ ಪ್ರಶ್ನೆಗೆ ಉತ್ತರ ನೀಡಿದ ನಟ ನಾಗಚೈತನ್ಯ ಅವರು ಹೇಳಿದ ಮಾತು ಕೇಳಿ ಅಭಿಮಾನಿಗಳು ಶಾ ಕ್ ಆಗಿದ್ದಾರೆ. ಏಕೆಂದರೆ ನಾಗಚೈತನ್ಯ ತನಗೆ ಆನ್ ಸ್ಕ್ರೀನ್ ಕೆಮಿಸ್ಟ್ರಿ ಸಮಂತಾ ಜೊತೆಗೆ ಚೆನ್ನಾಗಿದೆ ಎನ್ನುವ ಮಾತನ್ನು ಹೇಳಿದ್ದಾರೆ. ಈ ಮಾತು ಕೇಳಿದ ಅಭಿಮಾನಿಗಳು ಎಮೋಷನಲ್ ಆಗಿದ್ದಾರೆ. ಸಮಂತಾ ಹಾಗೂ ನಾಗಚೈತನ್ಯ ಏಂ‌ ಮಾಯ ಚೇಸಾವೇ, ಆಟೋನಗರ್ ಸೂರ್ಯ, ಮನಂ, ಮಜಲಿ ಹೀಗೆ ಕೆಲವು ಸಿನಿಮಾಗಳಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

Leave a Comment