ಆ ರೀತಿ ಇದ್ರೆ ನಾವು ಬಯಸಿದ್ದೆಲ್ಲಾ ಸಿಗುತ್ತೆ: ಸಮಂತಾ ಹೇಳಿದ ಶಿಸ್ತಿನ ಪಾಠಕ್ಕೆ ಥ್ರಿಲ್ಲಾದ ಅಭಿಮಾನಿಗಳು!!
ಹೀರೋಯಿನ್ ಸಮಂತಾ ಈಗ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿದ್ದಾರೆ. ಹಿಂದೊಮ್ಮೆ ಸಾಮಾನ್ಯ ಹೀರೋಯಿನ್ ಗಳ ಹಾಗೆಯೇ ನಾಯಕ ನಟರ ಜೊತೆಗೆ ಹಾಡಿ, ಕುಣಿಯುವ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಪ್ರಸ್ತುತ ನಟಿ ಸಮಂತಾ ಬಹಳ ಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ. ಅಲ್ಲದೇ ಪಾತ್ರಕ್ಕೆ ಪ್ರಾಧಾನ್ಯತೆಯಿರುವ ಸಿನಿಮಾಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಮೂಲಕ ತಮ್ಮ ತಾರಾ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದಾರೆ. ಅಲ್ಲದೇ ಸಿನಿಮಾವೊಂದರ ಕೆಲವೇ ನಿಮಿಷಗಳ ವಿಶೇಷ ಹಾಡಿಗೆ ಹೆಜ್ಜೆ ಹಾಕಲು ಕೋಟಿ ಕೋಟಿ ರೂಪಾಯಿಗಳ ಸಂಭಾವನೆ ಪಡೆಯುವಷ್ಟು ಮಟ್ಟಿಗೆ ಬೇಡಿಕೆಯನ್ನು ಸೃಷ್ಟಿಸಿಕೊಂಡಿದ್ದಾರೆ.
ನಟ ನಾಗಚೈತನ್ಯ ರಿಂದ ವಿಚ್ಚೇದನದ ಪಡೆದಕೊಂಡು ಅವರಿಂದ ದೂರವಾದ ಮೇಲೆ ನಟಿ ಸಮಂತಾ, ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಸಕ್ರಿಯರಾಗಿದ್ದಾರೆ. ಫೋಟೋ, ವೀಡಿಯೋ ಶೇರ್ ಮಾಡುತ್ತಲಿರುತ್ತಾರೆ. ಅದರಲ್ಲೂ ವಿಶೇಷವಾಗಿ ಸ್ಪೂರ್ತಿದಾಯಕ ಸಾಲುಗಳು ಅಥವಾ ಮೋಟಿವೇಷನಲ್ ಕೊಟೇಶನ್ ಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ನೆಟ್ಟಿಗರನ್ನು ಸೆಳೆಯುತ್ತಾರೆ. ಸಮಂತಾ ಏನಾದರೂ ವಿಷಯವನ್ನು ಶೇರ್ ಮಾಡಿಕೊಂಡರೆ ಅಭಿಮಾನಿಗಳು ಅದನ್ನು ಕೂಡಲೇ ವೈರಲ್ ಮಾಡುತ್ತಿದ್ದಾರೆ.
ಪ್ರಸ್ತುತ ನಟಿ ಸಮಂತಾ ಫ್ಯಾಕ್ಟ್ಸ್ ಎಂದು ಹೇಳುತ್ತಾ, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡ ಕೊಟೇಶನ್ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಜೀವನದಲ್ಲಿ ಬೆಳವಣಿಗೆ ಅಥವಾ ಅಭಿವೃದ್ಧಿಗೆ ಶಿಸ್ತು ಎಂತಹ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ ಎಂಬುದನ್ನು ಈ ಉಲ್ಲೇಖವು ನಮಗೆ ತಿಳಿಸುತ್ತದೆ. ಸಮಂತಾ ತಮ್ಮ ಪೋಸ್ಟ್ ನಲ್ಲಿ ಶಿಸ್ತಿನ ಕುರಿತಾಗಿ ಮಾತನಾಡಿದ್ದಾರೆ. ಅಲ್ಲದೇ ಶಿಸ್ತಿನ ಪ್ರಾಮುಖ್ಯತೆ ಏನು ಎಂಬುದನ್ನು ಎಲ್ಲರಿಗೂ ತಿಳಿಸುವ ಪ್ರಯತ್ನ ಮಾಡಿದ್ದಾರೆ.
ತಮ್ಮ ಪೋಸ್ಟ್ ನಲ್ಲಿ ಸಮಂತಾ, “ಶಿಸ್ತಿನಿಂದ ಇರಬೇಕು ಎನ್ನುವುದನ್ನು ಒಬ್ಬರಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಶಿಸ್ತು ನಮ್ಮನ್ನು ಸದೃಢರನ್ನಾಗಿ ಮಾಡುತ್ತದೆ. ಶಿಸ್ತಿನಿಂದ ತಾತ್ಕಾಲಿಕ ಆನಂದಗಳು ನಮಗೆ ದೊರೆಯದೇ ಹೋದರೂ, ಅದನ್ನು ಮೀರಿದ ಫಲಿತಾಂಶವು ಭವಿಷ್ಯದಲ್ಲಿ ನಮಗೆ ಸಿಗುತ್ತದೆ. ಜೀವನದಲ್ಲಿ ಉನ್ನತ ಶಿಖರಗಳನ್ನು ಏರಬೇಕಾದರೆ ಇದೇ ಭದ್ರ ಬುನಾದಿ ಆಗಿರುತ್ತದೆ. ನೀವು ಬಯಸಿದ್ದನ್ನು ನಿಮಗೆ ನೀಡುವ ಮಟ್ಟಕ್ಕೆ ನಿಮ್ಮನ್ನು ನೀವು ಪ್ರೀತಿಸುವುದು ಅನಿವಾರ್ಯ” ಎಂದು ಬರೆದುಕೊಂಡಿದ್ದಾರೆ
ಇತ್ತೀಚೆಗಷ್ಟೇ ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾದ ಐಟಂ ಹಾಡಿನಲ್ಲಿ ಧೂಳೆಬ್ಬಿಸಿರುವ ಸಮಂತಾ ಗುಣಶೇಖರ್ ನಿರ್ದೇಶನದ ಶಾಕುಂತಲಂ ಸಿನಿಮಾವನ್ನು ಪೂರ್ತಿ ಮಾಡಿದ್ದಾರೆ. ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದೆ. ಪ್ರಸ್ತುತ ಸಮಂತಾ ಮಹಿಳಾ ಪ್ರಧಾನ ಕಥೆಯನ್ನು ಆಧರಿಸಿದ ಯಶೋದಾ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಇದಲ್ಲದೇ ಅವರು ನಟಿಸಿರುವ ತಮಿಳಿನ ಸಿನಿಮಾವೊಂದು ಬಿಡುಗಡೆಯಾಗಬೇಕಿದೆ. ಇನ್ನೊಂದಷ್ಟು ಪ್ರಾಜೆಕ್ಟ್ ಗಳಲ್ಲಿ ಕೂಡ ಸಮಂತಾ ಬ್ಯುಸಿಯಾಗಿದ್ದಾರೆ.