ಆ ರೀತಿ ಆಗೋದು ನನಗೆ ಇಷ್ಟವಿಲ್ಲ: ರಿಲೇಶನ್ ಶಿಪ್ ಬಗ್ಗೆ ರಕುಲ್ ಪ್ರೀತ್ ಸಿಂಗ್ ಮುಕ್ತವಾದ ಮಾತು

Entertainment Featured-Articles Movies News

ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿಯರ ಹೆಸರು ಬಂದಾಗ ಅಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಅವರ ಹೆಸರು ಕೇಳಿ ಬರುವುದು ನಿಜ. ತೆಲುಗು ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಈ ನಟಿ ತನ್ನ ಅಂದ ಹಾಗೂ ನಟನೆಯಿಂದ ಅಪಾರವಾದ ಅಭಿಮಾನಿಗಳನ್ನು ಗಳಿಸಿದ್ದಾರೆ. ರಕುಲ್ ತೆಲುಗು ಮಾತ್ರವೇ ಅಲ್ಲದೇ ತಮಿಳು ಸಿನಿಮಾಗಳಲ್ಲಿ ಸಹಾ ನಟಿಸಿದ್ದು, ಬಾಲಿವುಡ್ ನಲ್ಲೂ ಅವರು ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದುಂಟು. ಇನ್ನು ಇತ್ತೀಚಿನ ದಿನಗಳಲ್ಲಿ ನಟಿ ರಕುಲ್ ವೇಗ ತಗ್ಗಿದೆ ಎನ್ನವುದು ಸಹಾ ನಿಜವಾದ ವಿಷಯವಾಗಿದೆ.

ರಕುಲ್ ಕೈಯಲ್ಲಿ ಪ್ರಸ್ತುತ ತಮಿಳಿನ ಸ್ಟಾರ್ ನಿರ್ದೇಶಕ ಶಂಕರ್ ಅವರ ನಿರ್ದೇಶನದ ಇಂಡಿಯನ್ ಟು ಸಿನಿಮಾ ಬಿಟ್ಟು ಬೇರೆ ಯಾವ ಸಿನಿಮಾ ಕೂಡಾ ಇಲ್ಲ. ಸಿನಿಮಾ ವಿಷಯಗಳು ಹೀಗಿರುವಾಗಲೇ ಕೆಲವು ಕಾಲದಿಂದಲೂ ಸಹಾ ರಕುಲ್ ಪ್ರೇಮ ವಿಚಾರವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಜಾಕಿ ಭಗ್ನಾನಿ ಜೊತೆಗೆ ರಕುಲ್ ಪ್ರೇಮದಲ್ಲಿ ತೇಲುತ್ತಿದ್ದಾರೆ ಎನ್ನುವ ಸುದ್ದಿಗಳು ಸದ್ದು ಮಾಡಿದ್ದವು. ಕೆಲವು ದಿನಗಳ ಹಿಂದೆಯಷ್ಟೇ ನಟಿ ಸಹಾ ಜಾಕಿ ಭಗ್ನಾನಿ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದುಂಟು.

ಸಂದರ್ಶನವೊಂದರಲ್ಲಿ ರಕುಲ್ ಮಾತನಾಡುತ್ತಾ, ತನ್ನ ಮತ್ತು ಜಾಕಿ ಭಗ್ನಾನಿ ಅವರ ಅಭಿರುಚಿಗಳು ಒಂದೇ ರೀತಿಯಲ್ಲಿದ್ದ ಕಾರಣದಿಂದಲೇ ತಾವು ಪ್ರೀತಿಯಲ್ಲಿ ಬಿದ್ದುದ್ದಾಗಿ ಹೇಳಿದ್ದಾರೆ. ತಮ್ಮಿಬ್ಬರ ನಡುವೆ ಒಂದು ರಿಲೇಶನ್ ಶಿಪ್ ಏರ್ಪಟ್ಟ ಕೂಡಲೇ ನಾವು ಅದನ್ನು ಬಹಿರಂಗ ಪಡಿಸುವ ನಿರ್ಧಾರವನ್ನು ಮಾಡಿದೆವು. ಏಕೆಂದರೆ ತಡವಾದರೆ ಮನಸ್ಸಿಗೆ ಬಂದ ಹಾಗೆ ನಮ್ಮ‌ ಬಗ್ಗೆ ವಾಸ್ತವಕ್ಕೆ ದೂರವಾದ ವಿಚಾರಗಳನ್ನು ಪ್ರಚಾರ ಮಾಡಿ ಬಿಡುತ್ತಾರೆ. ಅಂತಹ ವಿಷಯಗಳು ನಮ್ಮ ನೆಮ್ಮದಿಯನ್ನು ಹಾಳು ಮಾಡಿ ಬಿಡುತ್ತವೆ.

ಎಲ್ಲರ ಕಣ್ಣುಗಳು ಸಹಜವಾಗಿಯೇ ಸೆಲೆಬ್ರಿಟಿಗಳ ಮೇಲೆ ಇರುತ್ತದೆ. ಅದಕ್ಕೆ ನಮ್ಮ ವಿಷಯವನ್ನು ನಾವೇ ಹೇಳಿ ಬಿಡಬೇಕು ಎಂದು ನಾವು ನಿರ್ಧಾರವನ್ನು ಮಾಡಿದೆವು. ಎಲ್ಲರೂ ನಮ್ಮ‌‌ ಕೆಲಸದ ಬಗ್ಗೆ ಮಾತನಾಡಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಅವರದ್ದೇ ಆದ ಕುಟುಂಬ, ತಂದೆ, ತಾಯಿ, ಅಣ್ಣ ತಂಗಿ, ಹಾಗೂ ಪ್ರೇಮಿಸುವ ವ್ಯಕ್ತಿ ಇರುತ್ತಾರೆ ಎಂದು ರಕುಲ್ ಹೇಳಿದ್ದಾರೆ.

Leave a Reply

Your email address will not be published. Required fields are marked *