ಆ ನಿರ್ದೇಶಕನನ್ನು ನಂಬಿ ಸರ್ವಸ್ವವನ್ನು ಕಳೆದುಕೊಂಡೆ: ಶೋ ನಲ್ಲಿ ಕಂಗನಾ ಮುಂದೆ ಸತ್ಯ ಹೇಳಿ ಭಾವುಕರಾದ ನಟಿ

0 4

ಬಾಲಿವುಡ್ ನ ಜನಪ್ರಿಯ ನಟಿ ಕಂಗನಾ ರಣಾವತ್ ನಡೆಸಿಕೊಡುತ್ತಿರುವ ರಿಯಾಲಿಟಿ ಶೋ ಲಾಕಪ್ ಈಗಾಗಲೇ ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದೆ.‌ ಲಾಕಪ್ ಶೋ ಆರಂಭದ ಘೋಷಣೆಯಾದಾಗ ಇದೊಂದು ಬಿಗ್ ಬಾಸ್ ನ ನಕಲು ಎಂದು ಟ್ರೋಲ್ ಮಾಡಲಾಗಿತ್ತು. ಕಂಗನಾ ಬಗ್ಗೆ ವ್ಯಂಗ್ಯ ಮಾಡಲಾಗಿತ್ತು. ಆದರೆ ಶೋ ಆರಂಭ ದಲ್ಲೇ ಓಟಿಟಿ ಯಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಪಟ್ಟ ಕಾರ್ಯಕ್ರಮ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದು, ದಿನಗಳು ಕಳೆದಂತೆ ಲಾಕಪ್ ಇನ್ನಷ್ಟು ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿದೆ.

ಈ ರಿಯಾಲಿಟಿ ಶೋನಲ್ಲಿ ವೀಕ್ಷಕರಿಂದ ಕಡಿಮೆ ಮತಗಳನ್ನು ಪಡೆದಂತಹ ಸ್ಪರ್ಧಿಗಳು ಶೋನಿಂದ ಎಲಿಮಿನೇಟ್ ಆಗುತ್ತಾರೆ. ಈ ಹಂತದಲ್ಲಿ ಸ್ಪರ್ಧಿಗಳು ಎಲಿಮಿನೇಷನ್ ನಿಂದ ತಪ್ಪಿಸಿಕೊಳ್ಳಲು ಅವರಿಗೆ ಒಂದು ವಿಶೇಷ ಅವಕಾಶವನ್ನು ನೀಡಲಾಗುತ್ತದೆ. ಅದರ ಅನ್ವಯ ಸ್ಪರ್ಧಿಗಳು ತಾವು ಇದುವರೆಗೂ ಯಾರೊಡನೆಯೂ ಹಂಚಿಕೊಳ್ಳುವಂತಹ ರಹಸ್ಯವೊಂದನ್ನು ಶೋನಲ್ಲಿ ಹಂಚಿಕೊಳ್ಳಬಹುದು ಅಥವಾ ಯಾವುದಾದರೊಂದು ಹೊಸ ಸಾಹಸವನ್ನು ಮಾಡಬೇಕಾಗುವುದು.

ಈಗಾಗಲೇ ಕೆಲವು ಸ್ಪರ್ಧಿಗಳು ಎಲಿಮಿನೇಷನ್ ತಪ್ಪಿಸಿಕೊಳ್ಳುವುದಕ್ಕಾಗಿ ತಮ್ಮ ಜೀವನದ ಕೆಲವು ರಹಸ್ಯ ವಿಚಾರಗಳನ್ನು ಹೇಳುವ ಮೂಲಕ ದೊಡ್ಡ ಸಂಚಲನವನ್ನೇ ಸೃಷ್ಟಿಸಿ, ಆ ವಿಷಯಗಳು ತೀವ್ರವಾದ ಚರ್ಚೆಗಳಿಗೂ ಕಾರಣವಾಗಿದ್ದವು. ಇನ್ನು ಈ ವಾರ ಕೂಡಾ ಅಂತಹದೇ ಒಂದು ರಹಸ್ಯ ಬಯಲಾಗಿದೆ. ಲಾಕಪ್ ಶೋನಲ್ಲಿ ಸ್ಪರ್ಧಿ ಆಗಿರುವ ನಟಿ ಮಂದಾನಾ ಕರೀಮಿ ತಮ್ಮ ಜೀವನದ ಒಂದು ಕಹಿ ಸತ್ಯವನ್ನು ಎಲ್ಲರ ಮುಂದೆ ಬಿಚ್ಚಿಟ್ಟಿದ್ದಾರೆ. ಆ ವಿಚಾರ ಕೇಳಿ ಕಂಗನಾ ಸಹಿತ ಇತರ ಸ್ಪರ್ಧಿಗಳು ಸಹಾ ಭಾವುಕರಾಗಿದ್ದಾರೆ.

ಈ ವಾರ ಕಡಿಮೆ ಮತಗಳನ್ನು ಪಡೆದಿರುವ ಸ್ಪರ್ಧಿಗಳಲ್ಲಿ ಪಾಯಲ್ ರೋಹ್ಟಗಿ ಹಾಗೂ ಸಾಯಿಶಾ ಶಿಂಧೆ ತಾವು ಎಲಿಮಿನೇಷನ್ ನಿಂದ ತಪ್ಪಿಸಿಕೊಳ್ಳಲು ರಹಸ್ಯ ಹೇಳುವ ಅವಕಾಶವನ್ನು ಕೈಬಿಟ್ಟಿದ್ದಾರೆ.‌ ಆದರೆ ಮಂದಾನಾ ಕರೀಮಿ ಈ ಅವಕಾಶವನ್ನು ಬಳಸಿಕೊಂಡು ಬಾಲಿವುಡ್ ನ ಜನಪ್ರಿಯ ನಿರ್ದೇಶಕನೊಂದಿಗೆ ತನಗಿದ್ದ ಅ ಕ್ರ ಮ ಸಂಬಂಧದ ವಿಷಯವನ್ನು ಹಂಚಿಕೊಂಡಿದ್ದಾರೆ. ಲಾಕಪ್ ನ ಈ ಹೊಸ ಪ್ರೊಮೋ ಸಖತ್ ಸದ್ದು ಮಾಡಿದೆ.

ಪತಿಯಿಂದ ದೂರವಾದ ಸಮಯದಲ್ಲಿ ಖ್ಯಾತ ಬಾಲಿವುಡ್ ನಿರ್ದೇಶಕನ ಪರಿಚಯವಾಯಿತು. ಆ ಪರಿಚಯ ಬಹಳ ಆತ್ಮೀಯವಾದ ಮೇಲೆ ತಂದೆ ತಾಯಿ ಆಗಲು ನಿರ್ಧಾರ ಮಾಡಿದೆವು. ನಮ್ಮೊಡನೆ ಒಂದು ಸಂಬಂಧ ಇತ್ತು. ನಾನು ಆತನಿಂದ ಗರ್ಭಿಣಿ ಆದೆ. ಆದರೆ ಅನಂತರ ಆ ವ್ಯಕ್ತಿ ದೂರಾದ ಎಂದೆಲ್ಲಾ ಮಂದಾನಾ ತಮ್ಮ ಜೀವನದಲ್ಲಿ ತಾನು ಹೇಗೆ ಬಾಲಿವುಡ್ ನ ಒಬ್ಬ ಪ್ರಮುಖ ನಿರ್ದೇಶಕನಿಂದ ಮೋಸ ಹೋದೆ ಎನ್ನುವುದನ್ನು ವಿವರಿಸಿದ್ದಾರೆ.

ಅಲ್ಲದೇ ಆತ ಮಹಿಳಾ ಹಕ್ಕುಗಳ ಕುರಿತಾಗಿ ಸಿನಿಮಾ ನಿರ್ದೇಶಿಸುವ ಪ್ರಖ್ಯಾತ ನಿರ್ದೇಶಕನೆಂದು, ಹೇಳಿರುವ ಮಂದಾನಾ ಕರೀಮಿಯ ಮಾತುಗಳು ಈಗ ವೈರಲ್ ಆಗಿದ್ದು, ಆ ನಿರ್ದೇಶಕ ಯಾರು? ಎನ್ನುವುದು ಸದ್ಯಕ್ಕೆ ಎಲ್ಲರ ಕುತೂಹಲದ ವಿಷಯವಾಗಿದೆ. ಪ್ರೋಮೋ ಬಿಡುಗಡೆಯ ನಂತರ ಮಂದಾನಾ ಕರೀಮಿ ಹೇಳಿದ ಮಾತುಗಳು ಈಗ ಕಾಡ್ಗಿಚ್ಚಿನಂತೆ ಹರಿದಾಡಿದ್ದು, ನೆಟ್ಟಿಗರು ಆ ನಿರ್ದೇಶಕ ಯಾರಿರಬಹುದು ಎಂದು ಊಹೆಗಳನ್ನು ಮಾಡುತ್ತಿದ್ದಾರೆ.

Leave A Reply

Your email address will not be published.