ಆ ನಟ ಲೀಕ್ ಮಾಡಿದ ಒಂದು ಫೋಟೋದಿಂದ ನಯನತಾರಾ ಫಸ್ಟ್ ಲವ್ ಬ್ರೇಕಪ್ ಆಗಿತ್ತು: ಯಾವುದು ಆ ಫೋಟೋ?

0 12

ಸಿನಿಮಾ ಸೆಲೆಬ್ರಿಟಿಗಳ ಜೀವನ ತೆರೆಯ ಮೇಲೆ ಇದ್ದಷ್ಟು ಅಂದವಾಗಿ ವಾಸ್ತವದಲ್ಲಿ ಸಹಾ ಇರುತ್ತದೆ ಎಂದುಕೊಂಡರೆ ಅನೇಕ ಸಂದರ್ಭಗಳಲ್ಲಿ ಅದು ತಪ್ಪಾಗುತ್ತದೆ. ಏಕೆಂದರೆ ಹಲವು ಸೆಲೆಬ್ರಿಟಿಗಳ ಬಣ್ಣದ ಬದುಕು ತೆರೆಯ ಮೇಲೆ ಕಂಡಿದ್ದಕ್ಕೂ, ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸ ಇರುತ್ತದೆ. ಸಿನಿಮಾ ರಂಗದಲ್ಲಿ ಪ್ರೇಮ, ಮದುವೆ ಎಂದು ಒಂದಾದ ಜೋಡಿಗಳಲ್ಲಿ ಸುದೀರ್ಘ ಜೀವನ ಪಯಣ ಜೊತೆಯಾಗಿ ನಡೆಸುವವರ ಸಂಖ್ಯೆ ಬೆರಳೆಣಿಕೆಯಷ್ಟು ಎನ್ನುವಂತಾಗಿದೆ. ಲವ್, ಬ್ರೇಕಪ್ ಮತ್ತು ಮದುವೆ ಹಾಗೂ ವಿಚ್ಚೇದನ ಎನ್ನುವುದು ನೀರು ಕುಡಿದಷ್ಟೇ ಸುಲಭ ಎನ್ನುವಂತಾಗಿದೆ.

ಪ್ರೇಮ ಪಕ್ಷಿಗಳಾಗಿ ಎಲ್ಲೆಲ್ಲೂ ಸುದ್ದಿಯಾಗಿ, ಮೇಡ್ ಫಾರ್ ಈಚ್ ಅದರ್ ಎಂದೆಲ್ಲಾ ಹೇಳಿಕೊಂಡು ಇದ್ದಕ್ಕಿದ್ದ ಹಾಗೆ ಬ್ರೇಕಪ್ ಘೋಷಣೆ ಮಾಡಿ ಜನರಿಗೆ ಶಾ ಕ್ ನೀಡುವ ಸೆಲೆಬ್ರಿಟಿ ಜೋಡಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅಲ್ಲದೇ ಬ್ರೇಕಪ್ ನಂತರ ಮತ್ತೊಬ್ಬರಲ್ಲಿ ತಮ್ಮ ಪ್ರೇಮ ಹುಡುಕುತ್ತಾ ಮುಂದುವರೆಯುವುದು ಸಹಾ ತೀರಾ ಸಹಜ. ಇತ್ತೀಚಿಗಷ್ಟೇ ದಕ್ಷಿಣದ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಟಿ ನಯನತಾರ ಮದುವೆ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಬಹಳ ಅದ್ದೂರಿಯಾಗಿ ನಡೆದಿದೆ. ಹಲವು ವರ್ಷಗಳ ತಮ್ಮ ಪ್ರೇಮಕ್ಕೆ ಈ ಜೋಡಿ ವಿವಾಹದ ಮುದ್ರೆ ಒತ್ತಿದೆ.

ಆದರೆ ನಟಿ ನಯನತಾರಾ ಬದುಕಿನಲ್ಲಿ ಅವರ ಮೊದಲ ಪ್ರೇಮ ಫ್ಲಾಪ್ ಆಗಿದ್ದು ಸಹಾ ನಿಜವಾದ ವಿಷಯ. ಅನಂತರ ಎರಡನೆಯ ಬಾರಿ ನಟಿ ಪ್ರಭುದೇವ ಜೊತೆ ಪ್ರೇಮದಲ್ಲಿ ಬಿದ್ದು, ಅದು ಕೂಡಾ ಕಣ್ಣೀರಿನ ಕಥೆಯಾದ ವಿಚಾರ ಎಲ್ಲರಿಗೂ ತಿಳಿದೇ ಇದೆ. ಆದರೆ ನಟಿ ನಯನತಾರಾ ಮೊದಲ ಪ್ರೇಮ ಕಥೆ ವಿಶಾದ ಅಂತ್ಯ ಕಂಡಿದ್ದು ಏಕೆ ? ಇಷ್ಟಕ್ಕೂ ನಟಿ ಯಾರೊಂದಿಗೆ ಪ್ರೇಮದಲ್ಲಿ ಇದ್ದರು ? ಎನ್ನುವುದು ಅನೇಕರಿಗೆ ತಿಳಿದಿಲ್ಲ. ನಟಿ ನಯನತಾರಾ ತಮಿಳಿನ ಅಂದಿನ ಸ್ಟಾರ್ ನಟ ಸಿಂಬು ಜೊತೆ ಪ್ರೇಮದಲ್ಲಿ ಬಿದ್ದಿದ್ದರು ಎನ್ನುವುದು ತಮಿಳು ಸಿನಿ ರಂಗದಲ್ಲಿ ಸುದ್ದಿಯಾಗಿತ್ತು.

2006 ರಲ್ಲಿ ವಲ್ಲವನ್ ಸಿನಿಮಾದ ವೇಳೆ ಸಿಂಬು ಮತ್ತು ನಯನತಾರಾ ಭೇಟಿಯಾದರು. ಅಲ್ಲಿಂದ ಮೂಡಿದ ಸ್ನೇಹ ಬಹಳ ಬೇಗ ಪ್ರೇಮವಾಗಿತ್ತು.‌ ಕೆಲವು ತಿಂಗಳುಗಳ ಕಾಲ ಇಬ್ಬರ ನಡುವಿನ ಪ್ರೇಮ ವ್ಯವಹಾರದ ವಿಚಾರಗಳು ಸುದ್ದಿಯಾಗಿದ್ದವು. ಹೀಗೆ ಮುಂದುವರೆದ ಅವರ ಪ್ರೇಮ ಇದ್ದಕ್ಕಿದ್ದ ಹಾಗೆ ಅಭಿಮಾನಿಗಳಿಗೆ ಶಾ ಕ್ ನೀಡುವಂತೆ ಬ್ರೇಕಪ್ ಆಗಿ ಪರಿವರ್ತನೆ ಆಯಿತು. ನಯನತಾರಾ ಮತ್ತು ಸಿಂಬು ತಮ್ಮ ದಾರಿ ತಮ್ಮದು ಎನ್ನುವಂತೆ ದೂರ ದೂರವಾದರು.

ಇದ್ದಕ್ಕಿದ್ದ ಹಾಗೆ ಈ ಜೋಡಿಯ ನಡುವೆ ಏನಾಯಿತು? ಎನ್ನುವ ಪ್ರಶ್ನೆಗಳು ಅನೇಕರಲ್ಲಿ ಮೂಡಿತ್ತು. ವರದಿಗಳ ಪ್ರಕಾರ ನಯನತಾರಾ ಮತ್ತು ಸಿಂಬು ನಡುವಿನ ಕೆಲವು ಖಾಸಗಿ ಫೋಟೋಗಳನ್ನು ನಟ ಸಿಂಬು ಹಂಚಿಕೊಂಡ ಕಾರಣ ಸಿಟ್ಟಾದ ನಯನತಾರಾ ಸಿಂಬು ನಿಂದ‌ ದೂರವಾದರು ಎಂದು ಹೇಳಲಾಗಿದೆ. ಹೀಗೆ ನಟಿ ನಯನತಾರಾ ಮೊದಲ ಲವ್ ಕೊನೆಯಾಗಿತ್ತು. ಆದರೆ ಫೋಟೋಗಳು ಲೀಕ್ ಆದ ವಿಚಾರದಲ್ಲಿ ಸಿಂಬು ಯಾವುದೇ ರೀತಿ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ಹೇಳಲಾಗಿದೆ.‌

Leave A Reply

Your email address will not be published.