ಸಿನಿಮಾ ಇಂಡಸ್ಟ್ರಿಯ ಸೆಲೆಬ್ರಿಟಿಗಳ ಬಗ್ಗೆ, ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಇರುತ್ತದೆ. ಅಭಿಮಾನಿಗಳು ತಮ್ಮ ನೆಚ್ಚಿನ ಸೆಲೆಬ್ರಿಟಿಗಳ ಪ್ರತಿ ವಿಷಯವನ್ನು ತಿಳಿಯುವ ಕುತೂಹಲವನ್ನು ಹೊಂದಿರುತ್ತಾರೆ. ಅದರಲ್ಲೂ ವಿಶೇಷವಾಗಿ ಸೆಲೆಬ್ರಿಟಿಗಳ ಪ್ರೇಮ ವ್ಯವಹಾರಗಳು, ಮದುವೆ, ಲಿವ್ ಇನ್ ರಿಲೇಶಿನ್ ಶಿಪ್ , ಬ್ರೇಕಪ್ ಗಳ ವಿಚಾರಗಳು ಮಾದ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಾಗಿ ಹರಿದಾಡಿ, ದೊಡ್ಡ ಸದ್ದನ್ನು ಮಾಡುತ್ತವೆ. ಈ ವಿಷಯಗಳು ವೈರಲ್ ಆಗಿ ಚರ್ಚೆಯನ್ನು ಹುಟ್ಟು ಹಾಕುತ್ತವೆ. ಸೆಲೆಬ್ರಿಟಿಗಳ ಇಂತಹ ವಿಚಾರಗಳು ಬಹು ಬೇಗ ಎಲ್ಲೆಡೆ ಹರಿದಾಡುತ್ತದೆ.
ದಕ್ಷಿಣ ಸಿನಿಮಾ ಇಂಡಸ್ಟ್ರಿಯಲ್ಲಿ ಕಳೆದ ಕೆಲವು ಸಮಯದಿಂದಲೂ ಡೈನಾಮಿಕ್ ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್ ಮತ್ತು ಹಿರಿಯ ನಟಿ ಚಾರ್ಮಿ ನಡುವಿನ ಸಂಬಂಧದ ಬಗ್ಗೆ ಗುಸು ಗುಸು ಮಾತುಗಳು ಕೇಳಿ ಬರುತ್ತಲೇ ಇದೆ. ಇಬ್ಬರು ಮಕ್ಕಳ ತಂದೆಯಾಗಿರುವ ಪೂರಿ ಜಗನ್ನಾಥ್ ನಟಿ ಚಾರ್ಮಿಯ ಪ್ರೇಮದಲ್ಲಿ ಮುಳುಗಿದ್ದಾರೆ ಎಂದು, ಅದೇ ಕಾರಣದಿಂದ ಪತ್ನಿಗೆ ವಿಚ್ಛೇದನ ನೀಡಲಿದ್ದಾರೆ ಎಂದು ಸಹಾ ಸುದ್ದಿಗಳು ಹರಿದಾಡಿದ್ದವು. ಇಷ್ಟೆಲ್ಲಾ ಸುದ್ದಿಗಳಾದರೂ ಸಹಾ ನಟಿ ಚಾರ್ಮಿ ಮತ್ತು ಪೂರಿ ಜಗನ್ನಾಥ್ ಮಾತ್ರ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡಿಲ್ಲ, ತಮ್ಮ ಅಫೇರ್ ಬಗ್ಗೆ ಹರಡಿರುವ ಸುದ್ದಿಗಳ ಬಗ್ಗೆ ತುಟಿ ಬಿಚ್ಚಿಲ್ಲ.
ಪೂರಿ ಜಗನ್ನಾಥ್ ನಿರ್ದೇಶನದ, ವಿಜಯ ದೇವರಕೊಂಡ ನಾಯಕನಾಗಿ, ಅನನ್ಯಾ ಪಾಂಡೆ ನಾಯಕಿಯಾಗಿ ಕಾಣಿಸಿಕೊಂಡಿರುವ ಲೈಗರ್ ಸಿನಿಮಾ ಆಗಸ್ಟ್ 25 ರಂದು ತೆರೆಗೆ ಬರಲು ಸಜ್ಜಾಗಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಸಿನಿಮಾದ ಪ್ರಚಾರ ಕಾರ್ಯವು ಬಹಳ ಜೋರಾಗಿ ನಡೆದಿದೆ. ಈ ವೇಳೆ ಸಂದರ್ಶನವೊಂದರಲ್ಲಿ ನಿರ್ದೇಶಕ ಪೂರಿ ಜಗನ್ನಾಥ್ ಅವರು ಮಾತನಾಡುತ್ತಾ, ತನ್ನ ಹಾಗೂ ಚಾರ್ಮಿ ನಡುವೆ ಇರುವ ಅನುಬಂಧ ಹಾಗೂ ಆತ್ಮೀಯತೆಯ ಬಗ್ಗೆ ತನ್ನದೇ ಆದ ಶೈಲಿಯಲ್ಲಿ ಪ್ರತಿಕ್ರಿಯೆಯನ್ನು ನೀಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ ಪೂರಿ ಜಗನ್ನಾಥ್.
13 ವರ್ಷ ವಯಸ್ಸಿನಿಂದ ನನಗೆ ಚಾರ್ಮಿ ಗೊತ್ತು. ಎರಡು ದಶಕಗಳಿಂದ ಆಕೆ ಎಷ್ಟು ಕಷ್ಟ ಪಟ್ಟು ಕೆಲಸ ಮಾಡುತ್ತಾಳೆ ಅನ್ನೋದನ್ನು ನಾನು ನೋಡುತ್ತಿದ್ದೇನೆ. ಆಕೆ 50 ವರ್ಷದ ಮಹಿಳೆಯಾಗಿದ್ದರೆ ಆಕೆಯ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆಕೆ ದಪ್ಪಗಿದ್ದರೂ, ಇನ್ಯಾರನ್ನೋ ಮದುವೆಯಾದರೂ ಯಾರಿಗೂ ತೊಂದರೆಯಾಗುವುದಿಲ್ಲ. ಆದರೆ ಚಾರ್ಮಿ ಇನ್ನೂ ವಯಸ್ಸಿನಲ್ಲಿ ಇರುವುದರಿಂದ, ನಮ್ಮ ನಡುವೆ ಏನೋ ಸಂಬಂಧ ಇದೆ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದಾರೆ. ಪ್ರತಿ ಜೋಡಿ ಮಧ್ಯೆ ಇರುವ ರೋಮ್ಯಾಂಟಿಕ್ ಆ್ಯಂಗಲ್ ಇರುತ್ತದೆ ಎನ್ನುವುದನ್ನು ನಾನು ಸಹಾ ಒಪ್ಪುತ್ತೇನೆ.
ನಮ್ಮೆಲ್ಲರಿಗೂ ಸಹಾ ಮದುವೆಯಾಗಿದೆ. ಆ ರೀತಿಯ ಕಾಮೆನಗಳು ಸ್ವಲ್ಪ ದಿನ ಕಾಲವಿದ್ದು, ಅದು ಹೊರಟು ಹೋಗುತ್ತದೆ. ಆದರೆ ಸ್ನೇಹ ಮಾತ್ರ ಚಿರಕಾಲ ಉಳಿಯುತ್ತದೆ ಹೀಗೆ ನಿರ್ದೇಶಕ ಪೂರಿ ಜಗನ್ನಾಥ್ ತಮ್ಮ ಹಾಗೂ ನಟಿ ಚಾರ್ಮಿ ನಡುವಿನ ಸ್ನೇಹ ಸಂಬಂಧದ ಕುರಿತಾಗಿ ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ. ಸದ್ಯಕ್ಕೆ ನಿರ್ದೇಶಕ ತಮ್ಮ ಹೊಸ ಸಿನಿಮಾ ಲೈಗರ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಲೈಗರ್ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ ಹಾಗೂ ಅಭಿಮಾನಿಗಳ ಕುತೂಹಲ ಕೆರಳಿಸಿದೆ.