ಆ ನಟಿಯೊಂದಿಗೆ ನಾಗಚೈತನ್ಯ ಮದುವೆ ಫಿಕ್ಸ್ ಅಂತಿದೆ ಸುದ್ದಿಗಳು: ಆ ನಟಿ ಇದಕ್ಕೆ ಒಪ್ಪಿಕೊಂಡ್ರಾ??

Entertainment Featured-Articles Movies News

ಕಳೆದ ವರ್ಷ ಮಾದ್ಯಮಗಳಲ್ಲಿ ಸಿ‌ನಿಮಾಕ್ಕೆ ಸಂಬಂಧಿಸಿದಂತೆ ಸಖತ್ ಸುದ್ದಿಯಾದ ವಿಚಾರ ಯಾವುದು ಎಂದರೆ ಅದು ಟಾಲಿವುಡ್ ನ ಕ್ಯೂಟ್ ಕಪಲ್ ಖ್ಯಾತಿಯ ಸಮಂತಾ ಮತ್ತು ನಾಗಚೈತನ್ಯ ನಡುವಿನ ವಿಚ್ಚೇದನ. ಈ ಜೋಡಿಯ ವಿಚ್ಚೇದನದ ನಂತರ ಇವರ ಕುರಿತಾಗಿ ಸಾಕಷ್ಟು ಸುದ್ದಿಗಳು ಹರಿದಾಡಿದವು. ಅದರಲ್ಲೂ ನಟಿ ಸಮಂತಾ ಸಿಕ್ಕಾಪಟ್ಟೆ ಟ್ರೋಲ್ ಆದರು. ಅವರ ಬಗ್ಗೆ ಟೀಕೆಗಳು ಹರಿದು ಬಂದವು. ನಟಿ ಸುಳ್ಳು ಸುದ್ದಿಗಳನ್ನು ಹರಡಿದವರ ವಿ ರು ದ್ಧ ಕೋರ್ಟ್ ಮೆಟ್ಟಿಲನ್ನು ಸಹಾ ಏರುವ ಮಟ್ಟಕ್ಕೆ ತಲುಪಿದ್ದರು. ಅನಂತರ ನಟಿ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾದರು.

ವಿಚ್ಚೇದನ ಆದಾಗ ನಟಿ ಸಮಂತಾ ಜೀವನದಲ್ಲಿ ಮತ್ತೊಬ್ಬರು ಇದ್ದಾರೆ ಎನ್ನುವ ಗಾಳಿ ಸುದ್ದಿಯೊಂದು ಹರಡಿತ್ತು. ಆದರೆ ಅದಕ್ಕೆ ಯಾವುದೇ ಅಧಿಕೃತ ಪುರಾವೆ ಸಿಗದೇ ಆ ವಿಚಾರ ಸಮಯದ ಜೊತೆಗೆ ಮಾಯವಾಯಿತು. ಈಗ ಸರದಿ ನಾಗಚೈತನ್ಯ ಅವರದ್ದು. ಇತ್ತೀಚಿಗೆ ಟಾಲಿವುಡ್ ಅಂಗಳದಲ್ಲಿ ಹರಡಿರುವ ಸುದ್ದಿಗಳ ಪ್ರಕಾರ ನಟ ನಾಗಚೈತನ್ಯ ಅವರ ಜೀವನದಲ್ಲಿ ಬೇರೊಬ್ಬ ನಟಿಯ ಆಗಮನವಾಗಿದ್ದು, ನಾಗಚೈತನ್ಯ ಆಕೆಯನ್ನು ಪ್ರೀತಿಸುತ್ತಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ಸುದ್ದಿಗಳ ಪ್ರಕಾರ ನಟ ನಾಗಚೈತನ್ಯ ಮತ್ತು ತೆಲುಗು ಹುಡುಗಿ ಶೋಭಿತಾ ದೂಲಿಪಾಲ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ವಿಚಾರವೊಂದು ಹರಿದಾಡುತ್ತಿದೆ. ಈ ಇಬ್ಬರು ಈಗಾಗಲೇ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದಾರೆ ಎನ್ನಲಾಗಿದೆ. ಆದರೆ ನಾಗಚೈತನ್ಯ ಅಭಿಮಾನಿಗಳು ಮಾತ್ರ ಇದೆಲ್ಲಾ ಕೇವಲ ಗಾಳಿಸುದ್ದಿಗಳು ಮಾತ್ರವೇ ಅಂತಹ ಯಾವುದೇ ರಿಲೇಶನ್ ಶಿಪ್ ನಲ್ಲಿ ನಾಗಚೈತನ್ಯ ಇಲ್ಲ ಎಂದು ತಮ್ಮ ಅಭಿಮಾನ ನಟನ ಪರ ಬ್ಯಾಟಿಂಗ್ ಮಾಡುತ್ತಿದ್ದರೆ, ನೆಟ್ಟಿಗರು ಬೆಂಕಿಯಿಲ್ಲದೇ ಹೊಗೆಯಾಡದು ಎನ್ನುತ್ತಿದ್ದಾರೆ.

ಇನ್ನು ನಾಗಚೈತನ್ಯ ಮತ್ತು ಶೋಭಿತಾ ಇಬ್ಬರೂ ಒಬ್ಬ ಕಾಮನ್ ಫ್ರೆಂಡ್ ಮೂಲಕ ಜನ್ಮದಿನದ ಪಾರ್ಟಿಯೊಂದರಲ್ಲಿ ಭೇಟಿಯಾಗಿದ್ದರು ಎನ್ನಲಾಗಿದ್ದು, ಆಗಿನಿಂದಲೂ ಇಬ್ಬರ ನಡುವೆ ಸ್ನೇಹ ಇದೆ ಎನ್ನಲಾಗಿದೆ. ಅಲ್ಲದೇ ಕಳೆದ ಕೆಲವು ವರ್ಷಗಳಿಂದಲೂ ಸ್ನೇಹಿತರಾಗಿರುವ ಅವರು ಭೇಟಿಯಾದಾಗ ಬಹಳ ಹೊತ್ತು ಮಾತನಾಡುತ್ತಿದ್ದರು, ಈ ವೇಳೆ ಅವರು ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನದ ಬಗ್ಗೆ ಹತ್ತು ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು ಎನ್ನಲಾಗಿದೆ.

Leave a Reply

Your email address will not be published.