ಆ ನಟನ ಜೊತೆ ನಟಿಸಲು ಬಹಳ ಆಸೆ ಪಡುತ್ತಿದ್ದಾರೆ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್

Entertainment Featured-Articles Movies News

ನಟಿ ಕೀರ್ತಿ ಸುರೇಶ್ ಈ ಹೆಸರಿಗೆ ತೆಲುಗು, ತಮಿಳು ಮತ್ತು ಮಲಯಾಳಂ ಪ್ರೇಕ್ಷಕರಿಗೆ ಪ್ರತ್ಯೇಕ ವಾದ ಪರಿಚಯಸ ಅಗತ್ಯವಿಲ್ಲ.‌ ಏಕೆಂದರೆ ಈ ಹೆಸರು ಅಷ್ಟೊಂದು ಜನಪ್ರಿಯತೆ ಪಡೆದಿದೆ. ನಟಿ ಕೀರ್ತಿ ಸುರೇಶ್ ಅವರು ತಮ್ಮ ಸಿನಿ ಕೆರಿಯರ್ ಅನ್ನು ಮಲಯಾಳಂನಲ್ಲಿ ಸಿನಿಮಾ ಮೂಲಕ ಮಾಡಿದರು. ಅನಂತರ ಟಾಲಿವುಡ್, ಕಾಲಿವುಡ್ ಇಂಡಸ್ಟ್ರಿಗೆ ಎಂಟ್ರಿಕೊಟ್ಟ ನಟಿಯು ಬಹಳ ಕಡಿಮೆ ಅವಧಿಯಲ್ಲೇ ಒಳ್ಳೆಯ ಹೆಸರು ಗಳಿಸಿದ್ದಾರೆ. ಸ್ಟಾರ್ ಡಂ ಪಡೆದುಕೊಂಡಿದ್ದಾರೆ. ಟಾಲಿವುಡ್ ನ ಪ್ರತಿಭಾವಂತ ನಿರ್ದೇಶಕ ಅಶ್ವಿನ್ ನಿರ್ದೇಶನದ ‘ಮಹಾನಟಿ’ ಚಿತ್ರದ ಮೂಲಕ ಕೀರ್ತಿ ಸುರೇಶ್ ರಾತ್ರೋರಾತ್ರಿ ಸ್ಟಾರ್ ಆದರು. ರಾಷ್ಟ್ರ ಪ್ರಶಸ್ತಿ ಪಡೆದರು.

ಈ ಸಿನಿಮಾ ಅನೇಕ ಅದ್ಭುತ ಪಾತ್ರಗಳ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ ಮಹಾನಟಿ ಸಾವಿತ್ರಿ ಅವರ ಜೀವನಾಧಾರಿತ ಚಿತ್ರವಾಗಿದ್ದು, ನಟಿ ಕೀರ್ತಿ ಸುರೇಶ್ ಸಾವಿತ್ರಿ ಪಾತ್ರದಲ್ಲಿ ಮಿಂಚಿದ್ದರು. ಪಾತ್ರದಲ್ಲಿ ಪರಕಾರ ಪ್ರವೇಶ ಮಾಡಿದವರಂತೆ ನಟಿಸಿದ್ದ ಕೀರ್ತಿ ಸುರೇಶ್ ಅವರನ್ನು ತೆರೆಯ ಮೇಲೆ ಕಂಡು ಜನರು ಸಹಾ ಅಚ್ಚರಿ ಪಟ್ಟಿದ್ದರು. ಈ ಸಿನಿಮಾ ದೊಡ್ಡ ಯಶಸ್ಸನ್ನು ಪಡೆಯಿತು. ಆದರೆ ಅನಂತರ ನಟಿಯ ಸಿನಿಮಾ ಕೆರಿಯರ್ ಅಷ್ಟೇ ಯಶಸ್ವಿಯಾಗಿ ಸಾಗಿಲ್ಲ.

ಮಹಾನಟಿ ನಂತರ ಕೀರ್ತಿ ಸುರೇಶ್ ಅವರಿಗೆ ಮಹಿಳಾ ಪ್ರಧಾನ ಪಾತ್ರಗಳ ಸಿನಿಮಾ ಮತ್ತು ಸ್ಟಾರ್ ನಟರ ಸಿನಿಮಾಗಳಿಂದ ಆಫರ್ ಬಂತು. ಆದರೆ ನಟಿಸಿದ ಸಿನಿಮಾಗಳು ಮಾತ್ರ ನಿರೀಕ್ಷಿತ ಮಟ್ಟದ ಯಶಸ್ಸನ್ನು ಪಡೆಯಲಿಲ್ಲ. ಆಗಲೇ ಮಹೇಶ್ ಬಾಬು ಜೊತೆ ನಟಿಸಿದ ಸರ್ಕಾರುವಾರಿ ಪಾಟ ಸಿನಿಮಾ ನಟಿಯ ಕೈ ಹಿಡಿಯಿತು. ಅಲ್ಲದೇ ಇತ್ತೀಚಿಗೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಆದ ನಟಿ ಕೀರ್ತಿ ಸುರೇಶ್ ಅವರ ಸಾನಿ ಕಾಯುಧಂ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ನಟಿ ಕೀರ್ತಿ ಸುರೇಶ್ ಮತ್ತೆ ಫಾರ್ಮ್ ಗೆ ಹಿಂತಿರುಗಿದ್ದಾರೆ.

ಇತ್ತಿಚಿಗೆ ನಟಿಯು ಒಂದು ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಟಿಯು ಹಲವು ಸ್ವಾರಸ್ಯಕರ ವಿಷಯಗಳನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ‘ಸಾನಿ ಕಾಯಿದಂ’ ಒಟಿಟಿಯಲ್ಲಿ ಸ್ಟ್ರೀಮ್ ಆಗಿದ್ದು, ವಿಶ್ವ ಮಟ್ಟದಲ್ಲಿ ಅದು ಬಿಡುಗಡೆ ಹೊಂದಿರುವುದು ನನಗೆ ಅತೀವ ಖುಷಿಯನ್ನು ನೀಡಿದೆ. ಆದರೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದಿದ್ದಾರೆ.ತನಗೆ ತಮಿಳು, ತೆಲುಗು, ಮಲಯಾಳಂ ಎಂಬ ಯಾವುದೇ ಭಾಷಾ ಭೇದವಿಲ್ಲ, ಅವಕಾಶ ಸಿಕ್ಕಲ್ಲೆಲ್ಲಾ ನಟಿಸುತ್ತೇನೆ ಎಂದು ಹೇಳಿದ್ದಾರೆ.‌

ಅಲ್ಲದೇ ನಟಿ ಕೀರ್ತಿ ಸುರೇಶ್ ಅವರು ತಾನು ನಟಿಸುತ್ತಿರುವ ಎಲ್ಲಾ ಭಾಷೆಗಳಲ್ಲಿ ಒಂದೇ ರೀತಿಯ ಸಂಭಾವನೆಯನ್ನು ತೆಗೆದುಕೊಳ್ಳುತ್ತಿದ್ದೇನೆ ಮತ್ತು ಕೆಲವೊಮ್ಮೆ ಅದನ್ನು ಕಡಿಮೆ ಮಾಡುತ್ತೇನೆ ಎನ್ನುವ ವಿಚಾರ ತಿಳಿಸಿದ್ದಾರೆ. ಈ ಅನುಕ್ರಮದಲ್ಲಿ ಕೀರ್ತಿ ಸುರೇಶ್ ಅವರಿಗೆ, “ಯಾವ ನಾಯಕನ ಜೊತೆ ನಟಿಸಲು ಬಯಸುತ್ತೀರಿ?” ಎಂಬ ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ನಟಿಯು “ನನಗೆ ವಿಜಯ್ ಸೇತುಪತಿ ನಟನೆ ಇಷ್ಟ. ಅವರ ಜೊತೆ ಒಮ್ಮೆಯಾದರೂ ನಟಿಸಬೇಕೆಂಬ ಆಸೆ ಇದೆ” ಎಂದು ಹೇಳಿದ್ದಾರೆ.

ಹಾಗೆಯೇ ತಮಿಳಿನ‌ ನಟರಾದ ಜಯಂ ರವಿ, ಕಾರ್ತಿ ಕೂಡಾ ಒಳ್ಳೆಯ ನಟರು. ಇಂತಹ ಹಲವು ನಟರ ಜೊತೆ ನಟಿಸಬೇಕು.ಅದೇ ರೀತಿ ರಾಜಮೌಳಿ, ಶಂಕರ್ ನಿರ್ದೇಶನದಲ್ಲಿ ನಟಿಸುವ ಆಸೆ ಇದೆ. ಮಣಿರತ್ನಂ ಅವರ ಸಿನಿಮಾದಲ್ಲೂ ನಟಸಬೇಕು ಎಂದಿದ್ದಾರೆ. ಒಟ್ಟಾರೆ ಕೀರ್ತಿ ಸುರೇಶ್ ಅವರ ಆಕಾಂಕ್ಷೆಗಳ ಪಟ್ಟಿ ದೊಡ್ಡದಾಗಿದೆ.‌ ಈ ಪ್ರತಿಭಾವಂತ ಮತ್ತು ಅದ್ಭುತ ನಟಿಗೆ ಆ ಸ್ಟಾರ್ ನಟರು ಮತ್ತು ನಿರ್ದೇಶಕರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗಲೆಂದು ನಾವು ಶುಭ ಹಾರೈಸೋಣ.

Leave a Reply

Your email address will not be published.