ಆ ದಿನ ರಾತ್ರಿ ನಾನು ಕುಡಿದಿದ್ದು ನೀವು ನೋಡಿದ್ರಾ?? ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ ಗರಂ

Written by Soma Shekar

Published on:

---Join Our Channel---

ಬಿಗ್ ಬಾಸ್ ಸೀಸನ್ ಎಂಟರ ಮೂಲಕ ದೊಡ್ಡ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿ ದಿವ್ಯ ಸುರೇಶ್ ಅವರು ಇತ್ತೀಚಿಗೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ನೈಟ್ ಕರ್ಫ್ಯೂ ಜಾರಿಯಾದ ಮೊದಲ ದಿನ ರಾತ್ರಿಯೇ ದಿವ್ಯ ಅವರು ಪಬ್ ಒಂದರ ಮುಂದೆ ರಂಪಾಟ ನಡೆಸಿದ್ದಾರೆನ್ನುವ ವಿಷಯ ದೊಡ್ಡ ಸುದ್ದಿಯಾಗಿತ್ತು. ಈ ವಿಚಾರವಾಗಿ ದಿವ್ಯ ಸುರೇಶ್ ಒಂದು ಮಾದ್ಯಮದ ಮುಂದೆ ಮಾತನಾಡಿದ್ದು, ಈ ವೇಳೆ ಅವರು ತನ್ನ ಕುರಿತಾಗಿ ಬಂದ ಸುದ್ದಿಗಳ ವಿಚಾರವಾಗಿ ಆ ಕ್ರೋ ಶ ವನ್ನು ಹೊರ ಹಾಕಿದ್ದಾರೆ. ತನ್ನ ಬಗ್ಗೆ ಬಂದಿರುವ ಸುದ್ಧಿಗಳ ಕುರಿತಾಗಿ ಕಿಡಿಕಾರಿದ್ದಾರೆ.

ಎಲ್ಲೆಡೆ ಅಂದು ರಾತ್ರಿ ದಿವ್ಯ ಸುರೇಶ್ ಅವರು ಕುಡಿದ ಮತ್ತಿನಲ್ಲಿ ಕೂಗಾಡಿದ್ದರು ಎನ್ನುವ ಸುದ್ದಿಗಳಾಗಿದ್ದು ಮಾತ್ರವೇ ಅಲ್ಲದೇ, ಕೆಲವು ಮಾದ್ಯಮಗಳಲ್ಲಿ ವೀಡಿಯೋ ಕೂಡಾ ಪ್ರಸಾರವಾಗಿದ್ದು, ಅದು ವೈರಲ್ ಆಗಿತ್ತು. ತರಹೇವಾರಿ ಕಾಮೆಂಟ್ ಗಳು ಸಹಾ ಹರಿದು ಬಂದಿತ್ತು. ಆದರೆ ಈ ಎಲ್ಲಾ ಸುದ್ದಿಗಳಿಗೆ ದಿವ್ಯ ಸುರೇಶ್ ಅವರು ಪ್ರತಿಕ್ರಿಯೆ ನೀಡುವ ಮೂಲಕ ಅಸಲಿಗೆ ನಡೆದಿದ್ದು ಏನು?? ಎಂದು ಮಾತನಾಡಿ ಸ್ಪಷ್ಟನೆ ಯನ್ನು ನೀಡಿದ್ದಾರೆ ದಿವ್ಯ ಸುರೇಶ್ ಅವರು. ಹಾಗಾದರೆ ದಿವ್ಯ ಸುರೇಶ್ ಹೇಳಿದ್ದೇನು?? ತಿಳಿಯೋಣ ನೋಡಿ.

ದಿವ್ಯ ಸುರೇಶ್ ಅವರು ಈ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಾ ಅಂದು ರಾತ್ರಿ ನಾನು ನಾನು ಕರ್ಫ್ಯೂ ಟೈಮ್ ಆರಂಭ ಆಗೋಕೆ ಮೊದಲೇ ಅಲ್ಲಿಂದ ಹೊರಡಲು ಬಂದಿದ್ದೆ. ನಾನು ಕ್ಯಾಬ್ ಬುಕ್ ಮಾಡಿದ ಟೈಮ್, ಬಿಲ್ ಕಟ್ಟಿದ ಟೈಮ್ ಎಲ್ಲಾ ಇದೆ. ಆಗ ಇನ್ನೂ 9:10 ರ ಸಮಯವಾಗಿತ್ತು. ನಾನು ಕುಡಿದಿರಲಿಲ್ಲ, ನಾನು ಕುಡಿದ್ದಿದ್ದು ನೀವೇನಾದ್ರೂ ನೋಡಿದ್ರಾ?? ಎಂದು ಪ್ರಶ್ನೆಯನ್ನು ಮಾಡಿದ್ದಾರೆ. ಅಲ್ಲದೇ ಮಾದ್ಯಮಗಳಲ್ಲಿ ತೋರಿಸುತ್ತಾ ರಾಸ್ತಾ ಪಬ್ ಎಂದು ಹೇಳಲಾಗುತ್ತಿದೆ. ಆದರೆ ಗೂಗಲ್ ನಲ್ಲಿ ಒಮ್ಮೆ ಸರ್ಚ್ ಮಾಡಿ ಅದು ರಾಸ್ತಾ ಪಬ್ ಅಲ್ಲ ಅದು ರಾಸ್ತಾ ಕೆಫೆ.

ನಾನೊಬ್ಬ ಕಲಾವಿದೆ ಆದ್ದರಿಂದ ಸಹಜವಾಗಿಯೇ ಕೆಫೆಯಿಂದ ಹೊರಗೆ ಬಂದಾಗ ಮೊಬೈಲ್‌ ನಲ್ಲಿ ವೀಡಿಯೋ ಮಾಡುತ್ತಿದ್ದರು. ಅದನ್ನು ನೋಡಿ ನಾವು ಪ್ರಶ್ನೆ ಮಾಡಿದ್ದು ಅಷ್ಟೇ. ನನ್ನ ಸ್ನೇಹಿತ ಕೂಡಾ ಬಹಳ ಸಾವಧಾನವಾಗಿ ಅವರನ್ನು ಒಳ್ಳೆಯ ರೀತಿಯಲ್ಲೇ ಪ್ರಶ್ನೆ ಮಾಡಿದ್ದರು. ಆದರೆ ಅದನ್ನೇ ನಾನು ಕುಡಿದಿದ್ದೆ, ಕೆಫೆಯ ಹೆಸರನ್ನು ಪಬ್ ಎಂದು ತೋರಿಸಲಾಗಿದೆ ಎಂದು ಅಸಮಾಧಾನವನ್ನು ಹೊರಹಾಕಿದ್ದಾರೆ. ದಿವ್ಯ ಸುರೇಶ್ ಅವರು ಅಂದು ರಾತ್ರಿ ನಡೆದಿದ್ದೇ ಬೇರೆ, ಆದರೆ ಮಾದ್ಯಮಗಳಲ್ಲಿ ಸುದ್ದಿಯಾಗಿರುವುದೇ ಬೇರೆ ರೀತಿಯಲ್ಲಿ ಎನ್ನುವ ಅಸಮಾಧಾನವನ್ನು ಹೊರಹಾಕಿದ್ದಾರೆ.

Leave a Comment