ಆ ಘಳಿಗೆ ಬಂದೇ ಬಿಡ್ತು: ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ನೀಡಿದ ನಟಿ ರಮ್ಯಾ!! ಥ್ರಿಲ್ಲಾದ ನೆಟ್ಟಿಗರು
ಸ್ಯಾಂಡಲ್ವುಡ್ ನ ಸ್ಟಾರ್ ನಟಿಯಾಗಿ ಮಿಂಚಿ ಸದ್ಯಕ್ಕೆ ಸಿನಿಮಾ ರಂಗದಿಂದ ದೂರವಿದ್ದರೂ ಸಹಾ ತಮ್ಮ ತಾರಾ ವರ್ಚಸ್ಸನ್ನು ಉಳಿಸಿಕೊಂಡಿರುವ ನಟಿ ಎಂದರೆ ಅವರು ರಮ್ಯಾ. ಹೌದು, ನಟಿ ರಮ್ಯಾ ಅವರು ಸಿನಿಮಾಗಳಲ್ಲಿ ನಟಿಸುತ್ತಿಲ್ಲ, ಯಾವುದೇ ರಿಯಾಲಿಟಿ ಶೋ ಅಥವಾ ಸೆಲೆಬ್ರಿಟಿ ಚಾಟ್ ಶೋ ಎಂದು ಜನರ ಮುಂದೆ ಬಂದಿಲ್ಲ. ಕೇವಲ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ಅವರಿಗೆ ಅಭಿಮಾನಿಗಳ ಅಭಿಮಾನಕ್ಕೆ ಮಾತ್ರ ಯಾವುದೇ ಧಕ್ಕೆಯಾಗಿಲ್ಲ. ರಮ್ಯ ಅವರು ಬಹಳ ಖುಷಿಯಿಂದ ತಮ್ಮ ಸ್ಟಾರ್ ಡಂ ಬಗ್ಗೆ ಹೇಳುವಷ್ಟು ಜನಪ್ರಿಯತೆ ಅವರು ಪಡೆದುಕೊಂಡಿದ್ದಾರೆ. ನಟಿ ರಮ್ಯಾ ಸಿನಿಮಾಕ್ಕೆ ರೀ ಎಂಟ್ರಿ ನೀಡುತ್ತಾರೆ ಎನ್ನುವ ಸುದ್ದಿಗಳು ಆಗಾಗ ಹರಿದಾಡುತ್ತಲೇ ಇರುತ್ತದೆ. ಅಲ್ಲದೇ ಅನೇಕರು ರಮ್ಯಾ ಅವರ ಮದುವೆಯ ಬಗ್ಗೆ ಕೂಡಾ ಕೇಳುತ್ತಲೇ ಇರುತ್ತಾರೆ.
ಆದರೆ ಈಗ ನಟಿ ತಮ್ಮೆಲ್ಲಾ ಅಭಿಮಾನಿಗಳಿಗೆ ಸಖತ್ ಸರ್ಪ್ರೈಸ್ ಒಂದನ್ನು ನೀಡಿದ್ದಾರೆ. ರಮ್ಯಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಹೊಸ ಪೋಸ್ಟ್ ಶೇರ್ ಮಾಡಿಕೊಂಡು, ಅಧಿಕೃತವಾಗಿ ಒಂದು ಸಿಹಿ ಸುದ್ದಿಯನ್ನು ನೀಡಲಿರುವ ಬಗ್ಗೆ ಘೋಷಣೆಯನ್ನು ಮಾಡಿದ್ದಾರೆ. ನಟಿಯು ಪೋಸ್ಟ್ ಶೇರ್ ಮಾಡಿದ್ದೇ ತಡ, ಅಭಿಮಾನಿಗಳು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ನಟಿಯು ನೀಡಲಿರುವ ಸಿಹಿ ಸುದ್ದಿಯಾದರೂ ಏನು? ಎನ್ನುವುದರ ಬಗ್ಗೆ ಕುತೂಹಲವನ್ನು ವ್ಯಕ್ತಪಡಿಸುತ್ತಿದ್ದಾರೆ. ರಮ್ಯಾ ಅವರ ಪೋಸ್ಟ್ ನ ಅರ್ಥವನ್ನು ತಿಳಿಯುವ ತವಕದಲ್ಲಿ ಇದ್ದಾರೆ ಅವರ ಅಭಿಮಾನಿಗಳು.
ರಮ್ಯಾ ಅವರು ಗಣೇಶ ಚತುರ್ಥಿಯ ದಿನ ತಾನು ಒಂದು ಸಿಹಿಸುದ್ದಿ ನೀಡುವುದಾಗಿ ಹೇಳಿದ್ದಾರೆ. ಧುಮುಕುವುದಕ್ಕೆ ಇದೇ ಸರಿಯಾದ ಸಮಯವಲ್ಲವೇ? ನಾಳೆ 11:15 ಕ್ಕೆ ಸಿಹಿ ಸುದ್ದಿಯನ್ನು ನೀಡಲು ಬಹಳ ಉತ್ಸುಕಳಾಗಿದ್ದೇನೆ ಎಂದು ನಟಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ರಮ್ಯಾ ಅವರು ಇತ್ತೀಚಿಗೆ ಸಿನಿಮಾಗಳನ್ನು, ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದ್ದರು. ಅಲ್ಲದೇ ಚಿತ್ರೀಕರಣದ ಸ್ಥಳಕ್ಕೆ ಸಹಾ ಭೇಟಿ ನೀಡಿದ್ದರು. ಇದೆಲ್ಲಾ ನೋಡಿ ಬಹುಶಃ ಅವರು ಸಿನಿ ರಂಗಕ್ಕೆ ಕಮ್ ಬ್ಯಾಕ್ ಮಾಡಲು ಸಿದ್ಧತೆಗಳನ್ನು ನಡೆಸಿದ್ದಾರೆ ಎಂದು ಅಭಿಮಾನಿಗಳು ಊಹೆಗಳನ್ನು ಮಾಡುತ್ತಿದ್ದರು.