ಆ ಘಟನೆಯ ನಂತರ “ನಾನು ಹೀರೋಯಿನ್ ಆಗಲ್ಲ” ಎಂದು ನಿರ್ಧರಿಸಿದ್ದರು ಅಮಿತಾಬ್ ಬಚ್ಚನ್ ಮಗಳು!!

Entertainment Featured-Articles News

ಬಾಲಿವುಡ್ ನ ದಿಗ್ಗಜ ನಟ ಅಮಿತಾಬ್ ಬಚ್ಚನ್ ಹಾಗೂ ಜಯಾ ಬಚ್ಚನ್ ದಂಪತಿಯ ಮಗಳು ಶ್ವೇತಾ ಬಚ್ಚನ್. ಕೆಲವೇ ದಿನಗಳ ಹಿಂದೆಯಷ್ಟೇ ಶ್ವೇತಾ ಬಚ್ಚನ್ ತಮ್ಮ 48 ನೇ ಜನ್ಮದಿನವನ್ನು ಆಚರಣೆ ಮಾಡಿಕೊಂಡಿದ್ದಾರೆ. ಬುಧವಾರ ರಾತ್ರಿ ನಡೆದ ಜನ್ಮದಿನದ ಪಾರ್ಟಿಯಲ್ಲಿ ತಂದೆ , ತಾಯಿ ಹಾಗೂ ಸಹೋದರ ಅಭಿಷೇಕ್ ಬಚ್ಚನ್ ಮತ್ತು ಅತ್ತಿಗೆ ಐಶ್ವರ್ಯ ರೈ ಅಲ್ಲದೇ ಬಾಲಿವುಡ್ ನ ದಿಗ್ಗಜರಾದ ಕರಣ್ ಜೋಹರ್, ಸಿದ್ಧಾರ್ಥ್ ಮಲ್ಹೋತ್ರಾ, ಶಾರೂಖ್ ಖಾನ್ ಹಾಗೂ ಅವರ ಪತ್ನಿ ಗೌರಿ ಖಾನ್, ಸೋನಾಲಿ ಬೇಂದ್ರೆ ಹಾಗೂ ಇತರೆ ಸ್ಟಾರ್ ಗಳು ಭಾಗವಹಿಸಿದ್ದರು.

ಶ್ವೇತಾ ಬಚ್ಚನ್ ತಮ್ಮ 48 ನೇ ಜನ್ಮದಿನವನ್ನು ಬಹಳ ಸಡಗರ ಸಂಭ್ರಮದಿಂದ ಆಚರಣೆ ಮಾಡಿಕೊಂಡಿದ್ದಾರೆ. ಶ್ವೇತಾ ಅವರ ತಂದೆ ಅಮಿತಾಬ್ ಬಚ್ಚನ್, ತಾಯಿ ಜಯಾ ಬಚ್ಚನ್ ಇಬ್ಬರೂ ಬಾಲಿವುಡ್ ನ ದಿಗ್ಗಜ ನಟರಾಗಿದ್ದಾರೆ. ಇದೇ ವೇಳೆ ಸಹೋದರನಾದ ಅಭಿಷೇಕ್ ಬಚ್ಚನ್ ಮತ್ತು ಅತ್ತಿಗೆ ಐಶ್ವರ್ಯ ರೈ ಕೂಡಾ ಬಾಲಿವುಡ್ ನಲ್ಲಿ ಸಾಕಷ್ಟು ಹೆಸರನ್ನು ಮಾಡಿರುವ ನಟರು. ಆದರೆ ಮನೆಯಲ್ಲಿ ಹೀಗೆ ಕಲಾವಿದರ ದಂಡೇ ಇದ್ದರೂ ಶ್ವೇತಾ ಮಾತ್ರ ಸಿನಿಮಾಗಳಿಂದ ದೂರ ಉಳಿದಿರುವುದು ನೋಡಿದಾಗ ಖಂಡಿತ ನಮಗೆ ಆಶ್ಚರ್ಯವಾಗುತ್ತದೆ.

ಮನೆಯಲ್ಲೇ ಕಲಾವಿದರು ಇದ್ದರೂ ಶ್ವೇತಾ ಸಿನಿಮಾಗಳ ಕಡೆಗೆ ಆಸಕ್ತಿ ತೋರಿಲ್ಲ ಎನ್ನುವುದು ವಾಸ್ತವ, ಸಾಮಾನ್ಯವಾಗಿ ಸ್ಟಾರ್ ಗಳ ಮಕ್ಕಳು ಸಿನಿಮಾ ರಂಗಕ್ಕೆ ಬಹಳ ಸುಲಭವಾಗಿ ಅಡಿಯಿಡುತ್ತಾರೆ. ತಂದೆ ತಾಯಿಯರ ಜನಪ್ರಿಯತೆ ಅವರಿಗೆ ಬಹಳ ಸುಲಭವಾಗಿ ಸ್ಟಾರ್ ಡಂ ತಂದು ಕೊಡುತ್ತದೆ. ಆದರೆ ಇಂತಹ ಅವಕಾಶವಿದ್ದರೂ ಸಹಾ ಶ್ವೇತಾ ಬಚ್ಚನ್ ಮಾತ್ರ ಸಿನಿಮಾದಿಂದ ದೂರ ಉಳಿದಿರುವುದಕ್ಕೆ ಕಾರಣವೊಂದಿದೆ. ಹಾಗಾದರೆ ಆ ಕಾರಣವಾದರೂ ಏನು? ತಿಳಿಯೋಣ ಬನ್ನಿ.

ಶ್ವೇತಾ ಒಬ್ಬ ಫ್ಯಾಶನ್ ಡಿಸೈನರ್ ಆಗಿದ್ದಾರೆ. ಆದರೆ ಬಾಲ್ಯದಲ್ಲಿ ಅವರ ಮನಸ್ಸಿನಲ್ಲಿಯೂ ಸಹಾ ನಟನೆಯ ಕಡೆಗೆ ಒಲವಿತ್ತು. ಮನೆಯಲ್ಲಿ ಸಿನಿಮಾ ವಾತಾವರಣ ಇದ್ದುದ್ದರಿಂದ ಶ್ವೇತಾ ಶಾಲೆಯ ದಿನಗಳಲ್ಲಿ ನಟನೆ ಹಾಗೂ ಗಾಯನದ ಕಡೆಗೆ ಗಮನವನ್ನು ಹರಿಸಿದ್ದರು. ಒಂದು ಸಂದರ್ಶನದಲ್ಲಿ ಶ್ವೇತಾ ತಾನು ಶಾಲೆಯಲ್ಲಿ ಒಂದು ಡಾನ್ಸ್ ನಲ್ಲಿ ಕೂಡಾ ಭಾಗವಾಗಿದ್ದೆ ಎಂದು ಹೇಳುತ್ತಾ, ಅಂದು ನಡೆದ ಆ ಒಂದು ಘಟನೆಯಿಂದ ತಾನು ಮುಂದೆ ನಟನೆ ಮಾಡುವುದಿಲ್ಲ ಎಂದೇ ದೃಢ ನಿರ್ಧಾರವನ್ನು ಮಾಡಿ ಬಿಟ್ಟೆ ಎಂಬುದಾಗಿ ಹೇಳಿದ್ದಾರೆ.

ಶಾಲಾ ದಿನಗಳಲ್ಲಿ ಒಂದು ಡ್ಯಾನ್ಸ್ ನಲ್ಲಿ ಶ್ವೇತಾ ಭಾಗವಹಿಸಿದ್ದರು. ಆ ಡಾನ್ಸ್ ನ ಒಂದು ಮುಖ್ಯವಾದ ಭಾಗದಲ್ಲಿ ವೇದಿಕೆಯ ಮೇಲೆ ಎಲ್ಲರೂ ಹಿಂದೆ ತಿರುಗಿದಾಗ ಶ್ವೇತಾ ಮಾತ್ರ ಹಿಂದೆ ತಿರುಗಿರಲಿಲ್ಲ. ಇದಕ್ಕೆ ಕಾರಣ ಆಕೆಯ ಡ್ರೆಸ್ ಹಿಂಭಾಗದಲ್ಲಿ ಹರಿದು ಹೋಗಿತ್ತು. ಅದಕ್ಕೆ ಆಕೆ ಹಿಂದೆ ತಿರುಗದೇ ಹಾಗೇ ನಿಂತು ಬಿಟ್ಟಳು. ತಾನು ಹಾಗೆ ಮಾಡಿದ್ದರಿಂದ ಇಡೀ ಡಾನ್ಸ್ ಹಾಳಾಗಿತ್ತು ಎನ್ನುವ ಮಾತನ್ನು ಶ್ವೇತಾ ಬಚ್ಚನ್ ಅವರು ಹಂಚಿಕೊಂಡಿದ್ದಾರೆ. ಅದೇ ದಿನ ತಾನು ಇನ್ನೆಂದೂ ವೇದಿಕೆಗೆ ಬರಲ್ಲ ಎಂದು ತೀರ್ಮಾನ ಮಾಡಿದ್ದಾಗಿ ಶ್ವೇತಾ ಹೇಳಿದ್ದಾರೆ.

ಶ್ವೇತಾ ಅವರು ಮಾತನಾಡುತ್ತಾ ನಟಿಯಾಗಲು ಅಗತ್ಯವಿರುವ ಪ್ರತಿಭೆ ಹಾಗೂ ಶ್ರಮ ನನ್ನಲ್ಲಿ ಇಲ್ಲ ಎನಿಸುತ್ತೆ. ಅಲ್ಲದೇ ಕ್ಯಾಮೆರಾ ಮುಂದೆ ನಾನು ಸಹಜವಾಗಿ ಇರೋದು ಸಾಧ್ಯವಿಲ್ಲ. ಲೈಟ್, ಕ್ಯಾಮೆರಾ, ಆ್ಯಕ್ಷನ್ ನಂತರ ಪದಗಳನ್ನು ಕೇಳಿದೊಡನೆಯೇ ಮನಸ್ಸಿನಲ್ಲಿ ಒಂದು ಭಯ ಉಂಟಾಗುತ್ತದೆ ಎಂದು ಶ್ವೇತಾ ಹೇಳುತ್ತಾರೆ. ನಿಖಿಲ್ ನಂದಾ ಅವರನ್ನು ಮದುವೆಯಾಗಿರುವ ಶ್ವೇತಾ ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ. ಫ್ಯಾಷನ್ ಡಿಸೈನರ್ ಆಗಿ ತಮ್ಮ ವೃತ್ತಿ ಮುಂದುವರೆಸಿದ್ದಾರೆ.

Leave a Reply

Your email address will not be published.