ಆ ಕೆಟ್ಟ ಘಟನೆಯಿಂದ ಕಣ್ಣೀರು ಹಾಕಿದ್ದ ಸಾಯಿ ಪಲ್ಲವಿ ಇನ್ನು ತುಂಡು ಉಡುಗೆ ಧರಿಸಲ್ಲ ಎಂದು ನಿರ್ಧಾರ ಮಾಡಿದ್ದರು!!

Entertainment Featured-Articles Movies News

ಸಾಯಿ ಪಲ್ಲವಿ, ಈ ಹೆಸರು ದಕ್ಷಿಣ ಸಿನಿಮಾ ರಂಗದಲ್ಲಿ ಚಿರಪರಿಚಿತ ಹೆಸರು. ಅದರಲ್ಲೂ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸಾಯಿ ಪಲ್ಲವಿ ಎಂದರೆ ಸಿಕ್ಕಾಪಟ್ಟೆ ಕ್ರೇಜ್. ಸರಳತೆ, ನಟನೆ, ಅದ್ಭುತ ಡ್ಯಾನ್ಸ್, ಅತಿರೇಕವಲ್ಲದ ಗ್ಲಾಮರ್ ಹೀಗೆ ತನ್ನದೇ ಆದ ವಿಶೇಷ ಸ್ಟೈಲ್ ನಿಂದಲೇ ಸ್ಟಾರ್ ನಟಿಯಾಗಿ ಬೆಳೆದಿರುವ ಸಾಯಿ ಪಲ್ಲವಿ ಅನ್ಯ ನಟಿಯರ ಹಾಗೆ ಗ್ಲಾಮರ್ ಗೊಂಬೆ ಖಂಡಿತ ಅಲ್ಲ. ಈ ನಟಿ ಬೇರೆ ನಟಿಯರ ಜೊತೆ ಟಾಪ್ ಹೀರೋಯಿನ್ ರೇಸ್ ನಲ್ಲಿ ಮೊದಲೇ ಇಲ್ಲ. ಏಕೆಂದರೆ ಈ ನಟಿ ತನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇಲ್ಲ ಕೇವಲ ನಾಯಕನ ಪಕ್ಕ ಕುಣಿಯೋಕೆ, ರೊಮ್ಯಾನ್ಸ್ ಮಾಡೋಕೆ ಎಂದರೆ ಅಂತಹ ಪಾತ್ರಗಳಿಗೆ ಹಿಂದು ಮುಂದು ನೋಡದೇ ನೋ ಎನ್ನುವ ಧೈರ್ಯವಂತ‌ ನಟಿ.

ಆದ್ದರಿಂದಲೇ ಸಾಯಿ ಪಲ್ಲವಿ ಅವರು ನಟಿಸುವ ಸಿನಿಮಾ ಹಿಟ್ ಆಗಲೀ ಅಥವಾ ಸೋಲನ್ನು ಕಾಣಲಿ ನಟಿಯ ಪಾತ್ರಕ್ಕೆ ಮಾತ್ರ ಮೆಚ್ಚುಗೆಗಳು ಹರಿದು ಬರುತ್ತವೆ. ಇನ್ನು ಬೋಲ್ಡ್ ಡ್ರೆಸ್, ಹೆವಿ ಮೇಕಪ್ ಇದಕ್ಕೆಲ್ಲಾ ಸಾಯಿ ಪಲ್ಲವಿ ಒಪ್ಪುವುದಿಲ್ಲ ಎನ್ನುವುದು ಕೂಡಾ ಎಲ್ಲರಿಗೂ ತಿಳಿದಿದೆ. ಆದ್ದರಿಂದಲೇ ಅಭಿಮಾನಿಗಳು ಇವರನ್ನು ಲೇಡಿ ಪವನ್ ಕಲ್ಯಾಣ್ ಎಂದು ಕರೆಯುತ್ತಾರೆ. ತನ್ನ ಇಂತಹ ನಿಲುವಿನ ಕಾರಣದಿಂದಲೇ ಸ್ಟಾರ್ ನಟರ ಸಿನಿಮಾಗಳನ್ನು, ಜನರಿಗೆ ಮೋಸ ಮಾಡುವ ಜಾಹೀರಾತುಗಳಿಗೆ ಸಹಾ ಸಾಯಿ ಪಲ್ಲವಿ ನೋ ಹೇಳಿದ್ದುಂಟು.

ನಟಿ ಸಾಯಿ ಪಲ್ಲವಿ ಶಿಕ್ಷಣಕ್ಕಾಗಿ ಜಾರ್ಜಿಯಾ ಗೆ ಹೋದಾಗ ಅಲ್ಲಿ ಟ್ಯಾಂಗೋ ನೃತ್ಯವನ್ನು ಕಲಿತರು. ಆ ವೇಳೆ ಕೆಲವೊಂದು ವಿಶೇಷ ರೀತಿಯ ಡ್ರೆಸ್ ಗಳನ್ನು ಧರಿಸಬೇಕು ಎಂದು ಹೇಳಿದಾಗ ಮನೆಯವರ ಒಪ್ಪಿಗೆಯನ್ನು ಪಡೆದು ಸಾಯಿ ಪಲ್ಲವಿ ಅಂತಹ ವಸ್ತ್ರಗಳನ್ನು ಧರಿಸಿದ್ದರಂತೆ. ಆ ವೇಷ ಭೂಷಣ ಧರಿಸಿ ಟ್ಯಾಂಗೋ ನೃತ್ಯವನ್ನು ಮಾಡುವುದು ಆರಾಮದಾಯಕವಾಗಿತ್ತು ಎಂದು ಸಾಯಿ ಪಲ್ಲವಿ ಹೇಳಿದ್ದರು. ಆದರೆ ಇದಾರ ನಂತರ ಅವರು ಪ್ರೇಮಂ‌ ಸಿನಿಮಾದಲ್ಲಿ ನಟಿಸಿದಾಗ, ಸಿನಿಮಾ ಬಿಡುಗಡೆಯ ಬೆನ್ನಲ್ಲೇ ಅವರ ಟ್ಯಾಂಗೋ ನೃತ್ಯದ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹೊರಬಂತು.

ಸಾಯಿ ಪಲ್ಲವಿ ಅವರು ಟ್ಯಾಂಗೋ ಡ್ಯಾನ್ಸ್ ಗಾಗಿ ಅದಕ್ಕೆ ತಕ್ಕಂತೆ ವಸ್ತ್ರ ಧರಿಸಿ ಬಹಳ ಗ್ರೇಸ್ ನಿಂದ ಡ್ಯಾನ್ಸ್ ಮಾಡಿದ್ದರು. ಆದರೆ ಆ ವೀಡಿಯೋ ವೈರಲ್ ಆದ ಮೇಲೆ ಜನರಿಂದ ಬಂದ ಕಾಮೆಂಟ್ ಗಳನ್ನು ನೋಡಿದ ಮೇಲೆ ಅದು ಅವರ ಮನಸ್ಸಿಗೆ ಬಹಳ ನೋವನ್ನುಂಟು ಮಾಡಿದ ಕಾರಣ ಅಂದಿನಿಂದಲೇ ತಾನು ಪೂರ್ಣ ಪ್ರಮಾಣದ ವಸ್ತ್ರಗಳನ್ನು ಮಾತ್ರವೇ ಧರಿಸಲು ಮತ್ತು ತೆರೆಯ ಮೇಲೆ ಹೆಚ್ಚು ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಬಾರದು ಎನ್ನುವ ನಿರ್ಧಾರವೊಂದನ್ನು ಮಾಡಿ ಬಿಟ್ಟರಂತೆ. ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ಈ ವಿಷಯಗಳನ್ನು ಹಂಚಿಕೊಂಡಿದ್ದಾರೆ.

Leave a Reply

Your email address will not be published.