ಆ ಒಬ್ಬನಿಗಾಗಿ ಈ ಇಬ್ಬರು ಸ್ಟಾರ್ ನಟಿಯರ ನಡುವೆ ನಡೆದಿತ್ತು ದೊಡ್ಡ ಜಗಳ: ಇಷ್ಟಕ್ಕೂ ಅವನು ಯಾರು?

Written by Soma Shekar

Published on:

---Join Our Channel---

ಬಾಲಿವುಡ್ ನಟಿ ಮಾಜಿ ಮಿಸ್ ವರ್ಲ್ಡ್ ಐಶ್ವರ್ಯ ರೈ ಎಂದರೆ ಗೊತ್ತಿಲ್ಲದ ಸಿನಿ ಪ್ರೇಮಿಗಳು ಖಂಡಿತ ಇಲ್ಲ.‌ ಅಂದದ ನಟಿಯರ ಹೆಸರು ಬಂದಾಗ ಐಶ್ವರ್ಯ ರೈ ಹೆಸರು ಮೊದಲು ಇರುತ್ತದೆ. ಭಾರತೀಯ ಸಿನಿಮಾ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಈ ನಟಿ ಇಂದಿಗೂ ಸಹಾ ವಿಶ್ವದ ಅಂದವಾದ ಮಹಿಳೆಯರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಐಶ್ವರ್ಯ ರೈ ಅವರನ್ನು ಅಭಿಮಾನಿಸುವ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಪ್ರಸ್ತುತ ಕೆಲವು ವರ್ಷಗಳಿಂದ ಸಿನಿಮಾಗಳಿಂದ ದೂರವೇ ಇರುವ ನಟಿ ಮಣಿರತ್ನಂ ಅವರ ಹೊಸ ಸಿನಿಮಾ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ನಟಿ ಐಶ್ವರ್ಯ ರೈ ಬಾಲಿವುಡ್ ಸಿನಿಮಾ ರಂಗದಲ್ಲಿ ನಂಬರ್ ಒನ್ ನಟಿಯಾಗಿ ಮೆರೆದವರು. ಅಲ್ಲದೇ ರೂಪದರ್ಶಿಯಾಗಿ ವಿಶ್ವದ ಸುಪ್ರಸಿದ್ಧ ಬ್ರಾಂಡ್ ಗಳಿಗೆ ಅವರು ಇಂದಿಗೂ ಸಹಾ ರಾಯಭಾರಿಯಾಗಿದ್ದಾರೆ. ಐಶ್ವರ್ಯ ರೈ ಪ್ರಸ್ತುತ ಬಾಲಿವುಡ್ ನ ಸ್ಟಾರ್ ಕುಟುಂಬ ಬಚ್ಚನ್ ಫ್ಯಾಮಿಲಿಯ ಸೊಸೆಯಾಗಿದ್ದು, ಅಭಿಷೇಕ್ ಬಚ್ಚನ್ ಅವರ ಸತಿಯಾಗಿ, ಮುದ್ದು ಮಗಳ ತಾಯಿಯಾಗಿ ಖುಷಿಯ ಜೀವನವನ್ನು ನಡೆಸುತ್ತಿದ್ದಾರೆ. ನಟಿ ಐಶ್ವರ್ಯ ಅವರ ಜೀವನದಲ್ಲಿ ಅಭಿಷೇಕ್ ಬಚ್ಚನ್ ಗಿಂತ ಮೊದಲು ಕೆಲವರ ಆಗಮನವಾಗಿತ್ತು.

ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದ ನಂತರ ನಟಿ ಐಶ್ವರ್ಯ ರೈ ಹೆಸರು ವಿವೇಕ್ ಓಬೆಯಾರ್ ಹಾಗೂ ಸಲ್ಮಾನ್ ಖಾನ್ ಜೊತೆಗೆ ತಳಕು ಹಾಕಿಕೊಂಡಿತ್ತು. ಅಲ್ಲದೇ ಅವರ ಪ್ರೇಮ ವ್ಯವಹಾರ ಗಳು ಕೂಡಾ ರಹಸ್ಯವಾಗಿ ಉಳಿದಿರಲಿಲ್ಲ‌. ಈ ವಿಚಾರವಾಗಿ ಸಾಕಷ್ಟು ಸುದ್ದಿಗಳಾದವು. ಸಲ್ಮಾನ್ ಖಾನ್ ಹಾಗೂ ಐಶ್ವರ್ಯ ರೈ ನಡುವೆ ನಡೆದ ವಿ ವಾ ದ ವೊಂದು ಸಖತ್ ಸುದ್ದಿ ಕೂಡಾ ಆಗಿತ್ತು. ಆದರೆ ಐಶ್ವರ್ಯ ಅವರ ಜೀವನದಲ್ಲಿ ಅಭಿಷೇಕ್, ವಿವೇಕ್ ಓಬೆರಾಯ್ ಮತ್ತು ಸಲ್ಮಾನ್ ಖಾನ್ ಗಿಂತಲೂ ಮೊದಲೇ ಒಬ್ಬ ವ್ಯಕ್ತಿಯ ವಿಚಾರವಾಗಿ ಸಖತ್ ಸುದ್ದಿಯಾಗಿದ್ದರು.

ಹೌದು, ನಟಿ ಐಶ್ವರ್ಯ ರೈ ಸಿನಿಮಾ ರಂಗಕ್ಕೆ ಬರುವ ಮೊದಲು ಮಾಡೆಲಿಂಗ್ ಜಗತ್ತಿನಲ್ಲಿ ತನ್ನ ವೃತ್ತಿಯನ್ನು ಆರಂಬಿಸಿದರು. ಮಾಡೆಲ್ ಐಶ್ವರ್ಯ ರೈ ಜೊತೆಗೆ ಅಂದಿನ ಮಾಡೆಲ್ ಆಗಿದ್ದವರು ರಾಹುಲ್ ಮುಲ್ ಚಂದಾನಿ‌. ಇಬ್ಬರೂ ರ್ಯಾಂಪ್ ಮೇಲೆ ಒಟ್ಟಿಗೆ ಹೆಜ್ಜೆ ಹಾಕಿದ್ದರು‌. ಅಲ್ಲದೇ ಇವರ ನಡುವೆ ಒಂದು ಒಳ್ಳೆಯ ಸ್ನೇಹ ಕೂಡಾ ಇತ್ತು. ಆಗ ಇವರ ಸ್ನೇಹಕ್ಕಿಂತ ಹೆಚ್ಚಿನದು ಏನೋ ಇದೆ ಎನ್ನುವ ಸುದ್ದಿಗಳು ಹರಡಿದ್ದವು. ಆದರೆ ಐಶ್ವರ್ಯ ರೈ ತಮ್ಮ ನಡುವೆ ಇರುವುದು ಸ್ನೇಹ ಮಾತ್ರವೇ ಎಂದಿದ್ದರು. ಅಲ್ಲದೇ ಐಶ್ವರ್ಯ ರೈ ಸಿನಿಮಾ ರಂಗದಲ್ಲಿ ಬ್ಯುಸಿಯಾದ ಮೇಲೆ ರಾಹುಲ್ ಜೊತೆ ಕಾಣಿಸಿಕೊಳ್ಳಲಿಲ್ಲ.

ಆದರೆ ಆ ಸಂದರ್ಭದಲ್ಲಿ ಅಂದರೆ 90 ರ ದಶಕದಲ್ಲಿ ಸ್ಟಾರ್ ನಟಿಯಾಗಿದ್ದ ಮೊನಿಷಾ ಕೊಯಿರಾಲಾ ಸಂದರ್ಶನವೊಂದರಲ್ಲಿ ತನ್ನ ಗೆಳೆಯ ರಾಹುಲ್ ಐಶ್ವರ್ಯ ರೈ ಅನ್ನು ತನ್ನ ಜೀವನದಿಂದ ಹೊರ ಹಾಕಿದ್ದಾನೆ ಎನ್ನುವ ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದರು. ಇದರಿಂದ ಶಾ ಕ್ ಆಗಿದ್ದ ನಟಿ ಐಶ್ವರ್ಯ ರೈ ಅನಂತರ ಒಂದು ಸಂದರ್ಶನದಲ್ಲಿ ನನಗೂ ರಾಹುಲ್ ಗೂ ನಡುವೆ ಏನೂ ಇಲ್ಲ, ಮೊನಿಷಾ ಕೊಯಿರಾಲ ತಾವೇ ಕಲ್ಪಿಸಿಕೊಂಡ ಸತ್ಯಗಳನ್ನು ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದರು.

ಇದೇ ವೇಳೆ ಐಶ್ವರ್ಯ ರೈ, ಮೊನಿಷಾ ಕೊಯಿರಾಲ ತಮ್ಮ ಸೀನಿಯರ್ ನಟಿಯರಾದ ರೇಖಾ ಮತ್ತು ಶ್ರೀದೇವಿ ಅಂತಹವ ಬಗ್ಗೆಯೇ ಟೀಕೆ ಮಾಡಿರುವುದು ಗೊತ್ತಿದೆ. ಅಂತಹುದರಲ್ಲಿ ಆ ನಟಿಯ ಮಾತಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಆಕೆಯ ಮಾತು ಆಕೆಯ ವ್ಯಕ್ತಿತ್ವ ಎಂತದ್ದು ಎನ್ನುವುದನ್ನು ತೋರಿಸುತ್ತದೆ ಎಂದು ಹೇಳಿದ್ದರು. ಅಲ್ಲದೇ ಮೊನಿಷಾ ಕೊಯಿರಾಲ ಬಗ್ಗೆ ನನಗೆ ದ್ವೇ ಷ ವಿಲ್ಲ, ಆಕೆ ಸದಾ ಖುಷಿಯಾಗಿರಲಿ ಎಂದು ಐಶ್ವರ್ಯ ಹಾರೈಸಿದ್ದರು.

Leave a Comment