ಆ ಒಂದೇ ಒಂದು ಕಾರಣಕ್ಕೆ ಜೂ. NTR ಜೊತೆ ಹೊಸ ಸಿನಿಮಾ‌ ರಿಜೆಕ್ಟ್ ಮಾಡಿದ ಸಮಂತಾ! ಶಾಕ್ ನಲ್ಲಿ ಟಾಲಿವುಡ್

Entertainment Featured-Articles Movies News

ದಕ್ಷಿಣ ಸಿನಿಮಾರಂಗದಲ್ಲಿ ಸದ್ಯಕ್ಕಂತೂ ನಟಿ ಸಮಂತಾ ಬಹಳ ಸದ್ದು, ಸುದ್ದಿ ಮಾಡುತ್ತಿದ್ದಾರೆ. ಸಮಂತಾ ಇರುವ ಕಡೆ ಸುದ್ದಿ ಎನ್ನುವಂತಾಗಿದೆ. ವೃತ್ತಿಜೀವನದಲ್ಲಿ ಸಮಂತಾ ಅವರ ಯಶಸ್ಸಿನ ಓಟ ಬಹಳ ವೇಗವಾಗಿ ಸಾಗುತ್ತಿದೆ. ಒಂದರ ನಂತರ ಮತ್ತೊಂದು ಎನ್ನುವಂತೆ ದೊಡ್ಡ ದೊಡ್ಡ ಸಿನಿಮಾಗಳ ಅವಕಾಶಗಳನ್ನು ಪಡೆದುಕೊಳ್ಳುತ್ತಿರುವ ನಟಿ ಸಮಂತಾ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಾಗಿದೆ. ಹೊಸ ಹೊಸ ಅವಕಾಶಗಳು ನಟಿಯನ್ನು ಹುಡುಕಿಕೊಂಡು ಬರುತ್ತಿವೆ. ಸಿನಿಮಾ‌ ವಿಚಾರ, ಖಾಸಗಿ ವಿಚಾರಗಳು ಹೀಗೆ ಸಾಕಷ್ಟು ಸುದ್ದಿಯಲ್ಲಿರುವ ಸಮಂತಾ ಒಂದು ಹೊಸ ವಿಚಾರವಾಗಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಬಾರಿ ಸುದ್ದಿಯಾಗಿರುವುದು ತೆಲುಗಿನ ಸ್ಟಾರ್ ನಟನ ಸಿನಿಮಾವನ್ನು ತಿರಸ್ಕಾರ ಮಾಡುವ ಮೂಲಕ ಎನ್ನುವ ವಿಚಾರ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ.

ಹೌದು, ನಟಿ ಸಮಂತಾ ತೆಲುಗು ಸ್ಟಾರ್ ನಟ, ತ್ರಿಬಲ್ ಆರ್ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಜೂನಿಯರ್ ಎನ್ಟಿಆರ್ ಅವರ ಹೊಸ ಸಿನಿಮಾವನ್ನು ತಿರಸ್ಕರಿಸಿದ್ದಾರೆ ಎನ್ನುವ ಸುದ್ದಿ ಈಗ ಸಖತ್ ಸದ್ದು ಮಾಡುತ್ತಿದೆ. ತ್ರಿಬಲ್ ಆರ್ ಯಶಸ್ಸಿನ ನಂತರ ಜೂನಿಯರ್ ಎನ್ಟಿಆರ್ ತೆಲುಗಿನ ಪ್ರಖ್ಯಾತ ನಿರ್ದೇಶಕ ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಜೂನಿಯರ್ ಎನ್ಟಿಆರ್ ಅದರ ಮೂವತ್ತನೆಯ ಸಿನಿಮಾ ಆಗಿದೆ ಎನ್ನುವುದು ಸಹಾ ವಿಶೇಷ. ಪಕ್ಕಾ ಮಾಸ್ ಕಥೆಯ ಮೂಲಕ ಅಭಿಮಾನಿಗಳನ್ನು ಮತ್ತು ಪ್ರೇಕ್ಷಕರನ್ನು ರಂಜಿಸಲು ಎನ್ಟಿಆರ್ ಸಜ್ಜಾಗುತ್ತಿದ್ದಾರೆ.

ಎನ್ಟಿಆರ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅವರ ಹೊಸ ಸಿನಿಮಾ ಮೋಷನ್ ಗ್ಲಿಂಪ್ಸ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಕುತೂಹಲವನ್ನು ಮೂಡಿಸಿದೆ. ಹೀಗಾಗಿ ಅಭಿಮಾನಿಗಳು ಸಿನಿಮಾ ಯಾವಾಗ ತೆರೆಗೆ ಬರಲಿದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಈ ಸಿನಿಮಾದಲ್ಲಿ ನಾಯಕಿ ಯಾರು ? ಎನ್ನುವ ವಿಷಯ ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಹಿಂದೊಮ್ಮೆ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ನಟಿಸಲಿದ್ದಾರೆ ಎನ್ನುವ ಸುದ್ದಿಯಾಗಿದ್ದವು. ಏಕೆಂದರೆ ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಸೂಪರ್ ಹಿಟ್ ಸಿನಿಮಾ ಜನತಾ ಗ್ಯಾರೇಜ್ ನಲ್ಲಿ ಎನ್ಟಿಆರ್ ಜೊತೆಗೆ ಸಮಂತಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

ಈಗಲೂ ನಿರ್ದೇಶಕ ಕೊರಟಾಲ ಶಿವ ಅದೇ ಜೋಡಿಯನ್ನು ಮತ್ತೊಮ್ಮೆ ಪ್ರೇಕ್ಷಕರ ಮುಂದೆ ತರಲು ಪ್ರಯತ್ನವನ್ನು ಮಾಡಿದ್ದರು. ಅವರು ಸಮಂತಾರನ್ನು ನಾಯಕಿಯನ್ನಾಗಿ ಮಾಡುವ ಆಲೋಚನೆ ಹೊಂದಿದ್ದರು. ಈ ವಿಚಾರವಾಗಿ ನಟಿಯೊಂದಿಗೆ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಆದರೆ ಸಂಭಾವನೆ ವಿಚಾರದಲ್ಲಿ ಸಮಂತಾ ರಾಜಿ ಮಾಡಿಕೊಳ್ಳದ ಕಾರಣ, ಅವರನ್ನು ಈ ಸಿನಿಮಾದಿಂದ ಕೈಬಿಡಲಾಗಿದೆ ಎನ್ನುವ ಸುದ್ದಿಯೊಂದು ಹರದಾಡಿದೆ. ನಿರ್ದೇಶಕ ಕೊರಟಾಲ ಶಿವ ಸಮಂತಾಗೆ ಎರಡೂವರೆ ಕೋಟಿ ರೂಪಾಯಿ ಸಂಭಾವನೆಯ ಆಫರ್ ನೀಡಿದ್ದರು ಎನ್ನಲಾಗಿದೆ.

ಆದರೆ ನಟಿ ಸಮಂತಾ ನಾಲ್ಕು ಕೋಟಿ ರೂಪಾಯಿಗಳ ಸಂಭಾವನೆಯ ಬೇಡಿಕೆಯನ್ನು ಇಟ್ಟಿದ್ದು, ಅವರು ಅದಕ್ಕಿಂತ ಕಡಿಮೆ ಸಂಭಾವನೆ ಪಡೆಯಲು ಒಪ್ಪದ ಕಾರಣ, ಕಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ವಿಚ್ಛೇದನದ ನಂತರ ನಟಿ ಸಮಂತಾ ಸಿನಿಮಾಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ನಾಯಕಿ ಪ್ರಧಾನ ಪಾತ್ರಗಳಿರುವ ಸಿನಿಮಾಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಪುಷ್ಪಾ ಸಿನಿಮಾದ ಒಂದು ಹಾಡಿನಿಂದ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದ ಸಮಂತಾ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಟಿ ತಮ್ಮ ಸಂಭಾವನೆಯನ್ನು ಏರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

Leave a Reply

Your email address will not be published.