ಆ ಎರಡು ಸಿನಿಮಾ ನಂತರ ನನ್ನ ಆಲೋಚನೆ ಬದಲಾಗಿದೆ: ರಶ್ಮಿಕಾ ಮಂದಣ್ಣ ಮಾತಿಗೆ ಬೆರಗಾದ ಅಭಿಮಾನಿಗಳು

0 1

ಹಿಂದೊಮ್ಮೆ ಮನರಂಜನೆಯ ಮೂಲಗಳು ಅಥವಾ ಮನರಂಜನೆಯ ಪ್ರಮುಖ ಮಾದ್ಯಮಗಳು ಎಂದೊಡನೆ ತಟ್ಟನೆ ನೆನಪಾಗುತ್ತಿದ್ದುದು ಟಿವಿ, ಸಿನಿಮಾ ಮಾತ್ರ. ಆದರೆ ಇಂದು ಕಾಲ ಬದಲಾಗಿದೆ, ಆಧುನಿಕತೆಯ ಭರಾಟೆ ಬಹಳ ಜೋರಾಗಿದೆ‌. ಮನರಂಜನೆಯ ಪ್ರಮುಖ ಮೂಲಗಳಾಗಿ ಸಾಮಾಜಿಕ ಜಾಲತಾಣಗಳು ಹೊರ ಹೊಮ್ಮಿವೆ. ಬೆರಳ ತುದಿಯಲ್ಲಿ ಕ್ಷಣ ಮಾತ್ರದಲ್ಲಿ ಮನರಂಜನೆಯ ವಿಶಾಲವಾದ ಜಗತ್ತನ್ನು ತೆರೆದು ಇಡುವ ಈ ಅದ್ಭುತ ತಾಣಗಳು ಇಂದು ಜನ ಜೀವನದ ಒಂದು ಪ್ರಮುಖ ಭಾಗವಾಗಿ ಹೋಗಿವೆ. ಆದ್ದರಿಂದಲೇ ಸಾಮಾಜಿಕ ಜಾಲತಾಣಗಳು ಜನರ ಪ್ರಿಯ ತಾಣಗಳಾಗಿವೆ.

ಮನರಂಜನೆಯ ವಿಷಯ ಬಂದಾಗ ಇಲ್ಲಿ ಮನಸ್ಸಿಗೆ ಮುದ ನೀಡುವ ಫೋಟೋಗಳು, ವಿವಿಧ ಭಾವನೆಗಳನ್ನು ಕೆರಳಿಸುವ, ರೋಚಕತೆಯನ್ನು ಮೂಡಿಸುವ ವೀಡಿಯೋಗಳು, ಜಾಗತಿಕ ಮಟ್ಟದ ಸಂಚಲನ ಸುದ್ದಿ, ಸಮಾಚಾರಗಳು ಹೀಗೆ ಹತ್ತು ಹಲವು ವೈವಿದ್ಯಮಯ ವಿಷಯಗಳು ಹೇರಳವಾಗಿ ದೊರೆಯುತ್ತವೆ. ಅಲ್ಲದೇ ಈ ವಿಷಯಗಳಲ್ಲಿ ಕಳೆದು ಹೋದರೆ ಸಮಯದ ಅರಿವು ಕೂಡಾ ನಮಗೆ ಆಗುವುದಿಲ್ಲ, ಅಷ್ಟೊಂದು ಪರಿಣಾಮಕಾರಿಯಾಗಿದೆ ಸಾಮಾಜಿಕ ಜಾಲತಾಣಗಳು.

ಇನ್ನು ಮನರಂಜನೆಯ ಜೊತೆಗೆ ಇಲ್ಲಿ ನಮಗೆ ನಮ್ಮ ಕಣ್ಣಿಗೆ ಹಾಗೂ ಬುದ್ಧಿಗೆ ಸವಾಲು ಎಸೆಯುವಂತಹ ಫೋಟೋ ಪಜಲ್ ಗಳು ಸಹಾ ನೋಡಲು ಸಿಗುತ್ತವೆ. ಇವು ನಮ್ಮ ಕಣ್ಣನ್ನು ತಮ್ಮ ಕಡೆ ಬಹಳ ಸುಲಭವಾಗಿ ಸೆಳೆದು ಬಿಡುತ್ತವೆ. ಅಲ್ಲದೇ ಫೋಟೋಗಳಲ್ಲಿ ಅಡಗಿರುವ ರಹಸ್ಯವನ್ನು, ಸರಿಯಾದ ಚಿತ್ರವನ್ನು, ಅದರಲ್ಲಿ ಅಡಗಿರುವ ವ್ಯತ್ಯಾಸವನ್ನು ಕಂಡು ಹಿಡಯುವ ಸವಾಲನ್ನು ನೀಡಿದಾಗ, ಸಹಜವಾಗಿಯೇ ನಮ್ಮ ದೃಷ್ಟಿಗೆ ಹಾಗೂ ಬುದ್ಧಿಗೆ ನಾವು ಕೆಲಸವನ್ನು ನೀಡಲು ಮುಂದಾಗುತ್ತೇವೆ.

ಪ್ರಸ್ತುತ ಅಂತಹುದೇ ಒಂದು ಫೋಟೋ ಎಲ್ಲರ ಗಮನ ಸೆಳೆದಿದೆ. ಭಾರತೀಯ ಕ್ರಿಕೆಟ್ ನ ದಿಗ್ಗಜ, ಅಸಂಖ್ಯಾತ ಅಭಿಮಾನಿಗಳ ತಾರೆ ವಿರಾಟ್ ಕೊಹ್ಲಿ ಯಾರಿಗೆ ತಾನೇ ತಿಳಿಯದು?? ಈಗ ವೈರಲ್ ಆಗಿರುವ ಫೋಟೋ ಪಜಲ್ ನಲ್ಲಿ ಒಂದಷ್ಟು ಜನರು ಒಂದು ಕಡೆ ಕುಳಿತಿದ್ದು, ಎಲ್ಲರೂ ವಿರಾಟ್ ಕೊಹ್ಲಿ ತರವೇ ಕಾಣುತ್ತಿದ್ದಾರೆ. ಫೋಟೋ ನೋಡಿದ ತಕ್ಷಣ ಅವರಲ್ಲಿ ಅಸಲಿ ವಿರಾಟ್ ಕೊಹ್ಲಿ ಯಾರೆಂದು ಗುರ್ತಿಸುವುದು ಸಾಧ್ಯವಾಗುವುದಿಲ್ಲ. ಏಕೆಂದರೆ ಹೋಲಿಕೆಗಳು ಎಲ್ಲರಲ್ಲೂ ಒಂದೇ ರೀತಿ ಕಾಣುತ್ತದೆ.

ಈಗ ಸವಾಲು ಏನೆಂದರೆ ಈ ಫೋಟೋವನ್ನು ಜೂಮ್ ಮಾಡದೇ ಅಲ್ಲಿರುವವರಲ್ಲಿ ವಿರಾಟ್ ಕೊಹ್ಲಿ ಯಾರೆಂದು ಗುರುತಿಸುವುದು. ‌ಅನೇಕರಿಗೆ ಇದು ಸಾಧ್ಯವಾಗಿಲ್ಲ. ಕೆಲವರ ದೃಷ್ಟಿ ಚುರುಕಾಗಿದ್ದು ತಟ್ಟನೆ ಉತ್ತರ ಕಂಡು ಹಿಡಿದಿದ್ದಾರೆ. ಈಗ ಉತ್ತರ ಹುಡುಕುವ ಸರದಿ ನಿಮ್ಮದು, ನಿಮ್ಮ ದೃಷ್ಟಿಗೆ ಇದು ಸವಾಲು, ಇದರಲ್ಲಿ ವಿರಾಟ್ ಕೊಹ್ಲಿ ಯಾರು? ಪತ್ತೆ ಹಚ್ಚಿ ನೋಡೋಣ. ತಟ್ಟನೆ ಸಿಕ್ಕರೆ ಖಂಡಿತ ನಿಮ್ಮ ದೃಷ್ಟಿ ಬಹಳ ಶಾರ್ಪ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.‌

Leave A Reply

Your email address will not be published.