ಆ್ಯಂಕರ್ ಅನುಶ್ರೀ ಕೊಟ್ರು ಸರ್ಪ್ರೈಸ್: ಇದು ಭಾರತೀಯ ಚಿತ್ರರಂಗದಲ್ಲೇ ಮೊದಲ ಪ್ರಯತ್ನ ಎಂದ ಅನುಶ್ರೀ

0 2

ಕನ್ನಡದ ನಿರೂಪಕಿ ಅನುಶ್ರೀ ಎಂದರೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ?? ಕಿರಿಯರಿಂದ ಹಿಡಿದು ಹಿರಿಯರವರೆಗೆ ಕೂಡಾ ಆ್ಯಂಕರ್ ಅನುಶ್ರೀ ಎಂದರೆ ತಟ್ಟನೆ ಅವರನ್ನು ಗುರುತಿಸುವಷ್ಟು ಅನುಶ್ರೀ ಅವರು ಕನ್ನಡ ನಾಡಿನ ಜನರ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ನಟಿ ಅನುಶ್ರೀ ಅವರು ಸ್ಯಾಂಡಲ್ವುಡ್ ನಲ್ಲಿ ಕೆಲವು ಸಿನಿಮಾ ಗಳನ್ನು ಮಾಡಿದ್ದರಾದರೂ ಸಹಾ ಅವರು ದೊಡ್ಡ ಹೆಸರನ್ನು ಮಾಡಿರುವುದು ಮಾತ್ರ ಒಬ್ಬ ನಿರೂಪಕಿಯಾಗಿ ಎನ್ನುವುದನ್ನು ವಿಶೇಷವಾಗಿ ಹೇಳುವ ಅಗತ್ಯವೇ ಇಲ್ಲ. ಒಬ್ಬ ಸ್ಟಾರ್ ನಟಿಯಷ್ಟೇ ಜನಪ್ರಿಯತೆಯನ್ನು ಅನುಶ್ರೀ ಒಬ್ಬ ನಿರೂಪಕಿಯಾಗಿ ಪಡೆದುಕೊಂಡಿದ್ದಾರೆ.

ನಿರೂಪಕಿಯಾಗಿ ಸಾಕಷ್ಟು ಬ್ಯುಸಿಯಾಗಿ ಸಿನಿಮಾ ರಂಗದಿಂದ ಅಂತರವನ್ನು ಕಾಯ್ದುಕೊಂಡಿದ್ದ ಅನುಶ್ರೀ ಇದೀಗ ಒಂದು ಸಣ್ಣ ಗ್ಯಾಪ್ ನ ನಂತರ ಮತ್ತೊಮ್ಮೆ ಸ್ಯಾಂಡಲ್ವುಡ್ ಕಡೆಗೆ ಅಡಿಯಿಡಲು ಸಜ್ಜಾಗಿದ್ದಾರೆ. ನಾಲ್ಕು ವರ್ಷಗಳ ಗ್ಯಾಪ್ ನ ನಂತರ ಅನುಶ್ರೀ ಅವರು ಚಂದನವನಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಹೊಸ ಪ್ರತಿಭೆ ಪ್ರಭಾಕರನ್ ಅವರು ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾವೊಂದರಲ್ಲಿ ಅನುಶ್ರೀ ಅವರು ನಟಿಸುತ್ತಿದ್ದಾರೆ. ಈ ವಿಷಯ ಖಂಡಿತ ಅವರ ಅಭಿಮಾನಿಗಳಿಗೆ ಬಹಳಷ್ಟು ಖುಷಿಯನ್ನು ನೀಡಲಿದೆ ಎನ್ನುವುದು ನಿಜ.

ಮಮ್ಮಿ ಸೇವ್ ಮೀ ಮತ್ತು ದೇವಕಿ ಸಿನಿಮಾಗಳನ್ನು ನಿರ್ದೇಶನ ಮಾಡಿದಂತಹ ‌ನಿರ್ದೇಶಕ ಲೋಹಿತ್ ಅವರ ಬಳಿ ಪ್ರಭಾಕರನ್ ಅವರು ಅಸೋಸಿಯೇಟ್ ಆಗಿ ಕೆಲಸವನ್ನು ಮಾಡಿದ್ದರು. ಈಗ ಈ ಹೊಸ ಸಿನಿಮಾದ ಮೂಲಕ ಅವರು ಸ್ವತಂತ್ರ ನಿರ್ದೇಶನಕನಾಗಲು ಹೊರಟಿದ್ದಾರೆ. ಸಿನಿಮಾ ಶೂಟಿಂಗ್ ಶೀಘ್ರದಲ್ಲೇ ಆರಂಭವಾಗಲಿದೆ ಎನ್ನಲಾಗಿದ್ದು, ಅನುಶ್ರೀ ಅವರು ಸಹಾ ಈ ಸಿನಿಮಾದ ಡ್ರಾಮಾ ಮತ್ತು ಥ್ರಿಲ್ಲಿಂಗ್ ಅಂಶಗಳು ಬಹಳ ಇಷ್ಟವಾಯ್ತು ಎಂದಿದ್ದಾರೆ.

ಭಾರತೀಯ ಚಿತ್ರರಂಗದಲ್ಲೇ ಇದೊಂದು ಹೊಸ ಪ್ರಯತ್ನ ಎಂದಿರುವ ಅನುಶ್ರೀ ಅವರು ನಾಲ್ಕು ವರ್ಷಗಳ ನಂತರ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ನಾನು ಸಿನಿಮಾದಿಂದ ದೂರ ಉಳಿದಿರಲಿಲ್ಲ. ಒಳ್ಳೆಯ ಕಥೆಗಳು ಸಿಕ್ಕಿರಲಿಲ್ಲ ಅಷ್ಟೇ. ಚಿತ್ರದ ಮೇಕಿಂಗ್ ಮತ್ತು ಭ ಯಾ ನಕ ಕಥೆಯನ್ನು ಅವರು ತೋರಿಸಿದ ರೀತಿ ಬಹಳ ಇಷ್ಟವಾಯಿತು ಎನ್ನುವ ಮಾತನ್ನು ಅನುಶ್ರೀ ಹೇಳಿದ್ದಾರೆ.

Leave A Reply

Your email address will not be published.