ಅನುಶ್ರೀಗೆ ಮತ್ತೆ ಡ್ರ ಗ್ಸ್ ಕೇಸ್ ತಲೆನೋವು: ಗಂಭೀರ ಆರೋಪ ಉಲ್ಲೇಖಿತ ಚಾರ್ಜ್ ಶೀಟ್ ದಾಖಲು
ಕಳೆದ ವರ್ಷ ಲಾಕ್ಡೌನ್ ಅವಧಿಯಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸದ್ದು-ಸುದ್ದಿ ಮಾಡಿದಂತಹ ವಿಷಯ ಎಂದರೆ ಡ್ರ ” ಗ್ಸ್ ಹ ಗ ರಣ. ಈ ವಿಷಯ ಹೊರಬಂದ ಕೂಡಲೇ ಅದು ಸ್ಯಾಂಡಲ್ವುಡ್ ನಲ್ಲಿ ಮಾತ್ರವೇ ಅಲ್ಲದೇ ಇಡೀ ರಾಜ್ಯದಲ್ಲಿ ಒಂದು ಸಂಚಲನವನ್ನು ಸೃಷ್ಟಿಸಿತ್ತು. ಅನೇಕ ನಟ ನಟಿಯರ ಹೆಸರು ಈ ವಿಚಾರದಲ್ಲಿ ಕೇಳಿ ಬಂದು, ದೊಡ್ಡ ಮಟ್ಟದ ಚರ್ಚೆಗಳಿಗೆ ಇದು ಕಾರಣವಾಗಿತ್ತು. ಈ ವಿಚಾರವಾಗಿ ಸ್ಯಾಂಡಲ್ವುಡ್ ನ ಇಬ್ಬರು ಜನಪ್ರಿಯ ತಾರೆಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನ ಗಲ್ರಾನಿ ರಾಣಿ ಅವರನ್ನು ದೀರ್ಘಕಾಲದವರೆಗೆ ನ್ಯಾಯಾಂಗ ಬಂ ಧ ನದಲ್ಲಿ ಇರಿಸಲಾಗಿತ್ತು.
ಇಬ್ಬರು ನಟಿಯರ ವಿಚಾರಣೆಯನ್ನು ನಡೆಸಲಾಗಿತ್ತು. ಆನಂತರ ಈ ಇಬ್ಬರು ನಟಿಯರು ಜಾಮೀನಿನ ಮೇರೆಗೆ ಹೊರಬಂದಿದ್ದಾರೆ. ಡ್ರ ” ಗ್ಸ್ ಹಗರಣದ ಸುದ್ದಿ ಹೊರ ಬಂದಮೇಲೆ ಸಿಸಿಬಿ ನಡೆಸಿದ ವಿಚಾರಣೆಯ ವೇಳೆ ಸಾಕಷ್ಟು ಜನ ನಟ-ನಟಿಯರನ್ನು ಸಿಸಿಬಿ ಕಚೇರಿಗೆ ಕರೆಸಿ ವಿಚಾರಣೆಯನ್ನೂ ನಡೆಸಲಾಗಿತ್ತು. ಅವರನ್ನು ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಆಗ ಎಲ್ಲಕ್ಕಿಂತ ಹೆಚ್ಚು ಸದ್ದನ್ನು ಮಾಡಿದ್ದ ಸುದ್ದಿ ಕನ್ನಡ ಕಿರುತೆರೆಯ ಲೋಕದ ಸ್ಟಾರ್ ಆ್ಯಂಕರ್ ಎನಿಸಿಕೊಂಡಿರುವ ಹಾಗೂ ಒಬ್ಬ ನಟಿಯು ಆಗಿರುವ ಅನುಶ್ರೀ ಅವರ ಹೆಸರು ಈ ವಿಚಾರದಲ್ಲಿ ಕೇಳಿಬಂದಾಗ.
ಹೌದು, ಅನುಶ್ರೀ ಅವರ ಹೆಸರು ಡ್ರ ಗ್ಸ್ ಪ್ರಕರಣದೊಂದಿಗೆ ತಳುಕು ಹಾಕಿಕೊಂಡ ನಂತರ ನಟಿ ಮಂಗಳೂರಿಗೆ ತಲುಪಿ, ಅಲ್ಲಿ ವಿಚಾರಣೆಯನ್ನು ಎದುರಿಸಿದರು. ಮಾದ್ಯಮಗಳ ಮೂಲಕ ಅವರು ತನಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದರು. ಆದರೆ ವಿಚಾರ ಅಷ್ಟಕ್ಕೇ ಮುಗಿದಿಲ್ಲ. ಇದೀಗ ಮತ್ತೊಮ್ಮೆ ಈ ವಿಷಯ ಮುನ್ನೆಲೆಗೆ ಬಂದಿದೆ. ಈ ಪ್ರಜರಣದ ವಿಚಾರದಲ್ಲಿ ತನಿಖೆ ನಡೆಸುತ್ತಿರುವ ಸಿಸಿಬಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಚಾರ್ಜ್ ಶೀಟ್ ನ ವಿವರಗಳು ಮಾಧ್ಯಮಗಳಿಗೆ ಲಭ್ಯವಾಗಿದೆ ಎನ್ನಲಾಗಿದ್ದು, ಕೆಲವು ಮಾದ್ಯಮಗಳು ಈಗಾಗಲೇ ಅದನ್ನಿ ಪ್ರಕಟ ಮಾಡಿವೆ.
ಚಾರ್ಜ್ ಶೀಟ್ ನಲ್ಲಿ ಆರೋಪಿ ನಂಬರ್ 2 ಕಿಶೋರ ಅಮನ್ ನೀಡಿರುವ ಹೇಳಿಕೆಯನ್ನು ತನಿಖಾಧಿಕಾರಿಗಳು ಉಲ್ಲೇಖ ಮಾಡಿದ್ದು, ಅದರ ಅನ್ವಯ ಅನುಶ್ರೀ ಅವರು ಕೇವಲ ಡ್ರ” ಗ್ಸ್ ಸೇವನೆ ಮಾಡುತ್ತಿರಲಿಲ್ಲ ಬದಲಾಗಿ ಅದರ ಸಾಗಾಟವನ್ನು ಕೂಡಾ ನಡೆಸುತ್ತಿದ್ದರು ಎಂದು ಹೇಳಲಾಗಿದೆ. ಅನುಶ್ರೀ ನಮ್ಮ ರೂಮಿಗೆ ಡ್ರ” ಗ್ಸ್ ತರುತ್ತಿದ್ದರು. ಹಾಗೂ Ecstasy ಮಾತ್ರೆಗಳನ್ನು ಅವರು ತರುತ್ತಿದ್ದರು ಎಂದು ಕಿಶೋರ್ ಶೆಟ್ಟಿ ಹೇಳಿದ್ದಾನೆ ಎನ್ನಲಾಗಿದೆ.
ಆತನು ಹೇಳಿರುವ ವಿಚಾರಗಳನ್ನು ತನಿಖಾಧಿಕಾರಿಗಳು ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ಹೇಳಲಾಗಿದೆ. ಇನ್ನು ಕೆಲವೇ ದಿನಗಳ ಹಿಂದೆ ನಟಿ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಅವರು ಡ್ರ” ಗ್ಸ್ ಸೇವನೆ ಮಾಡಿರುವುದು ಖಚಿತ ಎನ್ನುವ ವರದಿ ಹೈದರಾಬಾದಿನ ಪ್ರಯೋಗಾಲಯ ನೀಡಿತ್ತು. ಈ ವಿಷಯ ಕೂಡಾ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ಅನುಶ್ರೀ ಅವರ ವಿಷಯ ಹೊರಬಂದಿದೆ.