ಆಹಾರ ಪ್ರಿಯರ ಕಣ್ಸೆಳೆಯಿತು ಈ ಹೊಸ ಐಸ್ ಕ್ರೀಂ ಮಸಾಲೆ ದೋಸೆ: ವೀಡಿಯೋ ಭರ್ಜರಿ ವೈರಲ್

0 2

ಬಹಳಷ್ಟು ಜನರು ಆಹಾರ ಪ್ರಿಯರು, ವೈವಿದ್ಯಮಯ ಆಹಾರಗಳ ರುಚಿಯನ್ನು ಸವಿಯುವ ಆಸಕ್ತಿ ಅನೇಕರಿಗೆ ಇರುತ್ತದೆ. ರುಚಿಯಾದ ಆಹಾರ ರಸ್ತೆ ಬದಿಯಲ್ಲಿ ಸಿಗುತ್ತದೆ ಎಂದರೂ ಹುಡುಕಿಕೊಂಡಿ ಹೋಗಿ ಜನರು ಅದರ ಸವಿಯನ್ನು ಸವಿದು ಬರುವುದುಂಟು. ಸೋಶಿಯಲ್ ಮೀಡಿಯಾಗಳಲ್ಲಿ ಫುಡ್ ಬ್ಲಾಗ್ ಗಳು, ಫುಡ್ ಮೇಕಿಂಗ್ ಚಾನೆಲ್ ಗಳು ಪಡೆಯುವ ಯಶಸ್ಸು ಕೂಡಾ ಜನರ ಆಹಾರ ಪ್ರಿಯತೆಗೆ ಒಂದು ಸಾಕ್ಷಿ ಎಂದೇ ಹೇಳಬಹುದಾಗಿದೆ. ಅದರಲ್ಲೂ ಆಹಾರ ಸಿದ್ಧಪಡಿಸುವವರು ಹೊಸ ಹೊಸ ಪ್ರಯೋಗಗಳನ್ನು ಸಹಾ ಮಾಡುವುದುಂಟು.

ಆಹಾರ ಪದಾರ್ಥಗಳ ವಿಷಯ ಬಂದಾಗ ದೋಸೆ ಮತ್ತು ಐಸ್ ಕ್ರೀಂ ಎಂದರೆ ಯಾರಿಗೆ ತಾನೇ ಇಷ್ಟ ಇರುವುದಿಲ್ಲ ಹೇಳಿ?? ಆದರೆ ಈ ಎರಡನ್ನು ಸೇರಿಸಿ ಒಂದು ಹೊಸ ಆಹಾರವನ್ನು ಸಿದ್ಧಪಡಿಸಿದರೆ ಹೇಗಿರುತ್ತದೆ?? ಊಹೆ ಮಾಡುವುದು ಕಷ್ಟ, ಆದರೆ ಇಂತಹುದೊಂದು ಪ್ರಯತ್ನವನ್ನು ಒಬ್ಬರು ಮಾಡಿದ್ದು ಈ ವೀಡಿಯೋ ಈಗ ಸೋಶಿಯಲ್ ವೀಡಿಯೋಗಳಲ್ಲಿ ವೈರಲ್ ಆಗುತ್ತಾ ಸಾಗಿದೆ. ವ್ಯಾಪಾರಸ್ಥರು ಗಿರಾಕಿಗಳನ್ನು ಸೆಳೆಯಲು ಇಂತಹ ಅನೇಕ ಕಸರತ್ತುಗಳನ್ನು ಮಾಡುತ್ತಾರೆ.

ಇಷ್ಟು ದಿನ ದೋಸೆ ಗಳ ವೈರೈಟಿ, ಐಸ್ ಕ್ರೀಂ ಗಳ ವೆರೈಟಿ ಗಳಾಯಿತು, ಈಗ ದೋಸೆ ಹಾಗೂ ಐಸ್ ಕ್ರೀಂ ಎರಡೂ ಸೇರಿಸಿ ಹೊರ ವೆರೈಟಿ ಮಾಡಲು ಮುಂದಾಗಿದ್ದಾರೆ. ಈ ಹೊಸ ವೆರೈಟಿಯಾದರೂ ಏನು ಅಂತೀರಾ?? ಅದೇ ಐಸ್ ಕ್ರೀಂ ಮಸಾಲೆ ದೋಸೆ. ಹೌದು ದೋಸೆ ಹಿಟ್ಟು ಹೆಂಚಿನ ಮೇಲೆ ಹಾಕಿ, ಅದರೊಳಗೆ ಕೆಂಪು ಚಟ್ನಿ, ಪಲ್ಯ ತುಂಬಿ ಮಸಾಲೆ ದೋಸೆ ಸಿದ್ಧ ಮಾಡುವುದನ್ನು ನಾವೆಲ್ಲಾ ನೋಡಿದ್ದೇವೆ. ಆದರೆ ಈಗ ವೆರೈಟಿ ಐಸ್ ಕ್ರೀಂ ಮಸಾಲೆ ದೋಸೆ ಸರದಿ.

https://www.instagram.com/reel/CYvWSFxJNwb/?utm_source=ig_web_copy_link

ವ್ಯಕ್ತಿಯೊಬ್ಬರು ಮಸಾಲೆ ದೋಸೆ ಐಸ್ ಕ್ರೀಂ ಮಾಡಲು, ಐಸ್ ಕ್ರೀಂ ಅನ್ನು ರೋಲ್ ಮಾಡಿ, ಅದಕ್ಕೆ ಚಟ್ನಿ ಮತ್ತು ಪಲ್ಯವನ್ನು ಹಾಕುತ್ತಾರೆ. ಅನಂತರ ಅವರು ಮಸಾಲೆ ದೋಸೆ, ಅದರ ಪಲ್ಯದ ಜೊತೆಗೆ ವೆನಿಲ್ಲಾ ಐಸ್ ಕ್ರೀಂ ಅನ್ನು ಸೇರಿಸುವುದು ನೋಡಿದಾಗ ಬಹಳ ಅಚ್ಚರಿಯಾಯಿತು. ನಂತರ ಅದನ್ನು ರೋಲ್ ಮಾಡಿ ಪಲ್ಯ, ಚಟ್ನಿ ಹಾಕಿ ಸಿದ್ಧಪಡಿಸುತ್ತಿರುವ ಈ ವೀಡಿಯೋ ಭರ್ಜರಿ ವೈರಲ್ ಆಗಿದ್ದು, ಈಗ ಇದನ್ನು ನೋಡಿ ನೆಟ್ಟಿಗರು ವೈವಿದ್ಯಮಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

Leave A Reply

Your email address will not be published.