ಊಟ ಇಲ್ದೇ ಇದ್ರು ಓಕೆ, ಆದ್ರೆ ಸೆ ಕ್ಸ್ ಇಲ್ದೇ ಇರೋಕಾಗಲ್ಲ: ಸಂಚಲನ ಸೃಷ್ಟಿಸಿದ ಸಮಂತಾ ಹೇಳಿಕೆ.

Written by Soma Shekar

Updated on:

---Join Our Channel---

ಇತ್ತೀಚಿಗೆ ಬೇರೆಲ್ಲಾ ನಟಿಯರಿಗಿಂತ ತನ್ನ ವೃತ್ತಿ ಜೀವನಕ್ಕಿಂದ ವೈಯಕ್ತಿಕ ಜೀವನದಿಂದಾಗಿಯೇ ಸಾಕಷ್ಟು ಸುದ್ದಿಯಾಗಿರುವ ನಟಿ ಎಂದರೆ ಸಮಂತಾ. ಒಂದಾ, ಎರಡಾ ಅದೆಷ್ಟು ವಿಷಯಗಳು ಸಮಂತಾ ಬಗ್ಗೆ ಹರಿದಾಡಿದವು ಎನ್ನುವುದನ್ನು ಹೇಳುವುದಾದರೆ ಸಮಂತಾ ವಿಚ್ಛೇದನದ ಸುದ್ದಿ, ಸಮಂತಾ ಗರ್ಭಿಣಿ ಆಗುತ್ತಿದ್ದಾರೆನ್ನುವ ವದಂತಿ, ಸಮಂತಾ ಅಫೇರ್, ನಾಗಚೈತನ್ಯ ಜೊತೆಗೆ ಮನಸ್ತಾಪ, ಬಾಲಿವುಡ್ ಗೆ ಎಂಟ್ರಿ, ವಿಚ್ಛೇದನದ ನಂತರ ದೊಡ್ಡ ಮೊತ್ತದ ಸಂಭಾವನೆ, ಐಟಂ ಹಾಡಿಗೆ ಹೆಜ್ಜೆ ಹಾಕುವುದು ಹೀಗೆ ಹತ್ತು ಹಲವು ವಿಷಯಗಳಿಂದಾಗಿ ಸಮಂತಾ ಮಾದ್ಯಮಗಳ ಪ್ರಮುಖ ಸುದ್ದಿಯಾದರು.

ಬಹುಶಃ ಈ ವರ್ಷ ಸಮಂತಾ ರಷ್ಟು ಚರ್ಚೆಗೆ ಒಳಗಾದ ದಕ್ಷಿಣದ ನಟಿ ಇನ್ನೊಬ್ಬರಿಲ್ಲ ಎಂದರೆ ತಪ್ಪಾಗಲಾರದು. ಈಗ ಇವೆಲ್ಲವುಗಳ ನಡುವೆಯೇ ಸಮಂತಾ ಸೆ ಕ್ಸ್ ಕುರಿತಾಗಿ ಹೇಳಿದ್ದ ಮಾತೊಂದು ಈಗ ವೈರಲ್ ಆಗಿದೆ. ಇದು 2017 ರಲ್ಲಿ ಸಮಂತಾ ನೀಡಿದ್ದ ಸಂದರ್ಶನದ ವೀಡಿಯೋ. ಅದರಲ್ಲಿ ಸಮಂತಾ ಸೆ ಕ್ಸ್ ಕುರಿತಾಗಿ ಮಾತನಾಡಿದ್ದರು. ಅದೇ ವೀಡಿಯೋ ಈಗ ಮತ್ತೊಮ್ಮೆ ವೈರಲ್ ಆಗಿದೆ. ಹಾಗಾದ್ರೆ ಅಂದು ಸಮಂತಾ ಏನು ಹೇಳಿದ್ರು?? ನೆಟ್ಟಿಗರ ರಿಯಾಕ್ಷನ್ ಏನು?? ತಿಳಿಯೋಣ ಬನ್ನಿ.

ಸಂದರ್ಶನದ ವೇಳೆ ನಟಿಯನ್ನು, ಆಹಾರ ಮುಖ್ಯವೋ, ಸೆ ಕ್ಸ್ ಮುಖ್ಯವೋ ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ ನಟಿ ಕೊಟ್ಟ ಉತ್ತರ ಬೋಲ್ಡ್ ಆಗಿರೋದು ಮಾತ್ರವೇ ಅಲ್ಲ, ಏನಿದು? ಸಮಂತಾ ಹೀಗೆ ಹೇಳಿದ್ರಾ?? ಎಂದು ಕೆಲವರಿಗೆ ಅನಿಸಬಹುದು. ಏಕೆಂದರೆ ಸಮಂತಾ “ಒಂದು ದಿನ ಊಟ ಇಲ್ಲದೇ ಹೋದರೂ ಇರಬಹುದು, ಆದರೆ ಸೆ ಕ್ಸ್ ಇಲ್ಲದೇ ಇರಲಾರೆ” ಎನ್ನುವ ಮಾತನ್ನು ಹೇಳಿದ್ದರು. ಆ ಮಾತಿನ ತುಣುಕು ಇರುವ ಸಣ್ಣ ವೀಡಿಯೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಸದ್ದು ಮಾಡಿದೆ.

ಸೆ ಕ್ಸ್ ಬಗ್ಗೆ ಇಂತಹ ಚರ್ಚೆಗೆ ಕಾರಣವಾದ ಹೇಳಿಕೆಗಳನ್ನು ನೀಡುವುದರಲ್ಲಿ ಸಮಂತಾ ಮಾತ್ರವೇ ಅಲ್ಲ, ಈ ಹಿಂದೆ ಹಲವು ಬಾಲಿವುಡ್ ಹಾಗೂ ದಕ್ಷಿಣದ ಸೆಲೆಬ್ರಿಟಿಗಳು ಸಹಾ ಸೆ ಕ್ಸ್ ಮುಖ್ಯ ಎಂದು ಹೇಳಿರುವ ಸಂದರ್ಭಗಳು ಉಂಟು. ಇನ್ನು ಸಮಂತಾ ವಿಚ್ಛೇದನದ ನಂತರ ಬಾಲಿವುಡ್ ಗೆ ಮಾತ್ರವೇ ಅಲ್ಲ ಹಾಲಿವುಡ್ ಗೂ ಎಂಟ್ರಿ ನೀಡಿರುವುದು ಅಧಿಕೃತವಾಗಿದೆ. ಸಮಂತಾ ಸದ್ಯಕ್ಕಂತೂ ಫುಲ್ ಬ್ಯುಸಿಯಾಗಿದ್ದಾರೆ ಈ ನಟಿ.

Leave a Comment