ಆಸ್ಪತ್ರೆಗೆ ದಾಖಲಾದ ನಟಿ ಸಂಜನಾ ಗಲ್ರಾನಿ: ಅವರ ತಾಯಿ ಹೇಳಿದ್ದೇನು??

Written by Soma Shekar

Published on:

---Join Our Channel---

ಡ್ರ ಗ್ಸ್ ಸೇವನೆಯ ವಿಷಯವು ದೃಢ ಪಟ್ಟಿರುವ ಬೆನ್ನಲ್ಲೇ ಇದೀಗ ನಟಿ ಸಂಜನಾ ಗಲ್ರಾನಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ನಟಿ ಸಂಜನಾ ಗಲ್ರಾನಿ ಅವರ ತಾಯಿ ರೇಷ್ಮಾ ಅವರು ಮಾದ್ಯಮಗಳ ಜೊತೆ ಮಾತನಾಡಿದ್ದು, ತಮ್ಮ ಮಗಳಿಗೆ ಈ ಹಿಂದೆ ಸರ್ಜರಿ ಆಗಿತ್ತು. ಹೀಗಾಗಿ ರಾತ್ರಿಯೇ ಆಸ್ಪತ್ರೆಗೆ ದಾಖಲಾಗಿದ್ದು, ಆಕೆ ಮಾನಸಿಕವಾಗಿ ಅಪ್ಸೆಟ್ ಆಗಿದ್ದಾರೆ ಎನ್ನುವ ಮಾತುಗಳನ್ನು ಹೇಳಿದ್ದಾರೆ. ಅವರು ಮಾತನಾಡುತ್ತಾ ತಮ್ಮ ಮಗಳು ಪ್ರಸ್ತುತ ಈ ಕೇ ಸ್ ನ ವಿಚಾರವಾಗಿ ಸಾಕಷ್ಟು ಡಿಸ್ಟರ್ಬ್ ಆಗಿದ್ದಾರೆ. ಖಿನ್ನತೆಗೆ ಒಳಗಾಗಿರುವ ಆಕೆಯನ್ನು ಹುಷಾರಿಲ್ಲದ ಕಾರಣಕ್ಕೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅವರು ತಮ್ಮ ಮಗಳ ಪರಿಸ್ಥಿತಿಯ ಬಗ್ಗೆ ಒಂದಷ್ಟು ಮಾಹಿತಿಯನ್ನು ನೀಡಿದ್ದಾರೆ.

ರೇಷ್ಮಾ ಅವರು, ನನ್ನ ಮಗಳು ಏನೂ ತಪ್ಪು ಮಾಡಿಲ್ಲ, ಆದರೆ ದು ರಾದೃಷ್ಟದಿಂದ ಈ ರೀತಿ ಆಗಿದೆ. ನಾನು ಭಗವಂತನನ್ನು ನಂಬುತ್ತೇನೆ. ದೇವರ ದಯೆಯಿಂದ ನಾಲ್ಕು ಜನರಿಗೆ ಸಹಾಯವನ್ನು ಮಾಡುತ್ತಿದ್ದೇವೆ, ಸಂಜನಾ ತನಗೆ ಹುಷಾರಿಲ್ಲದ ಕಾರಣ ‌ನನಗೆ ಊಟ ‌ನೀಡಲು ಹೇಳಿದ್ದಾಳೆ. ಒಂದು ಹುಡುಗಿಯಾಗಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾಳೆ. ಆದರೆ ಎಲ್ಲಾ ನಮ್ಮ‌ ವಿಧಿ. ಸಂಜನಾಗೆ ಹುಷಾರಿಲ್ಲದ ಕಾರಣ ಎಲ್ಲರೂ ಬೇಸರದಲ್ಲಿ ಇದ್ದೇವೆ. ತುಂಬಾ ಡಿಪ್ರೆಸ್ ಆಗಿದ್ದಾರೆ. ಎಲ್ಲರೂ ಸಪೋರ್ಟ್ ಮಾಡಿ, ತಾಯಿಯಾಗಿ ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದಿದ್ದಾರೆ.

ಕಳೆದ ವರ್ಷ ಲಾಕ್ ಡೌನ್ ಅವಧಿಯಲ್ಲಿ ಸದ್ದು ಮಾಡಿದ್ದ ಸ್ಯಾಂಡಲ್ವುಡ್ ಡ್ರ ಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಅವರು ನ್ಯಾಯಾಂಗ ಬಂ ಧ ನಕ್ಕೆ ಒಳಗಾಗಿದ್ದರು. ಅನಂತರ ಅವರು ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಇನ್ನು ಹತ್ತು ತಿಂಗಳ ನಂತರ ಹೈದ್ರಾಬಾದ್ ನ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ನಡೆಸಿದ್ದ ತಲೆ ಕೂದಲ ಪರೀಕ್ಷೆಯಲ್ಲಿ ನಟಿಯರ ಮಾ ದ ಕ ವಸ್ತು ಸೇವನೆಯು ದೃಢ ಪಟ್ಟಿದ್ದು ಈ ವರದಿಯು ಈಗಾಗಲೇ ಸಿಸಿ‌ಬಿ ಕೈ ಸೇರಿದೆ.

Leave a Comment