HomeEntertainmentಆಸಕ್ತಿಕರ ಸಂಚಿಕೆಗಳ ನಡುವೆ ಮುಕ್ತಾಯದ ಹಂತ ತಲುಪಿದೆಯಾ ಕನ್ನಡದ ಈ ಜನಪ್ರಿಯ ಧಾರಾವಾಹಿ?

ಆಸಕ್ತಿಕರ ಸಂಚಿಕೆಗಳ ನಡುವೆ ಮುಕ್ತಾಯದ ಹಂತ ತಲುಪಿದೆಯಾ ಕನ್ನಡದ ಈ ಜನಪ್ರಿಯ ಧಾರಾವಾಹಿ?

ಕನ್ನಡ ಕಿರುತೆರೆಯ ಜನಪ್ರಿಯ ಖಾಸಗಿ ವಾಹಿನಿಯೊಂದರಲ್ಲಿ ಇತ್ತೀಚೆಗೆ ಕೆಲವು ಜನಪ್ರಿಯ ಧಾರಾವಾಹಿಗಳು ಅಂತಿಮ ಹಂತವನ್ನು ತಲುಪುತ್ತಿವೆ‌. ಅಲ್ಲದೇ ಕೆಲವು ಧಾರಾವಾಹಿಗಳು ಈಗಾಗಲೇ ಮುಗಿದಿದ್ದು, ಅವುಗ ಜಾಗವನ್ನು ಡಬ್ಬಿಂಗ್ ಧಾರಾವಾಹಿಗಳು ಅಲಂಕರಿಸವೆ. ಹೌದು, ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ‘ಜೀವ ಹೂವಾಗಿದೆ’ ಹಾಗೂ ‘ಇಂತಿ ನಿಮ್ಮ ಆಶಾ’ ಧಾರಾವಾಹಿಗಳು ಕೆಲವೇ ದಿನಗಳ ಹಿಂದೆಯಷ್ಟೇ ಮುಕ್ತಾಯಗೊಂಡಿದೆ. ಈ ಧಾರಾವಾಹಿಗಳ ಜಾಗದಲ್ಲಿ ಇದೀಗ 2 ಡಬ್ಬಿಂಗ್ ಸೀರಿಯಲ್ ಗಳು ಪ್ರಸಾರ ಕಾಣುತ್ತಿದೆ.

ಈಗ ಇವುಗಳ ಬೆನ್ನಲ್ಲೇ ಮತ್ತೊಂದು ಹೊಸ ಸುದ್ದಿ ಹರಿದಾಡಿದೆ. ಮಾಧ್ಯಮವೊಂದರ ವರದಿಯ ಪ್ರಕಾರ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ಮತ್ತೊಂದು ಧಾರಾವಾಹಿ ‘ಆಕಾಶದೀಪ’ ಶ್ರೀಘ್ರದಲ್ಲೇ ಮುಕ್ತಾಯವಾಗಲಿದೆ ಎನ್ನುವ ಮಾತೊಂದು ಕೇಳಿಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಧಾರಾವಾಹಿಯೂ ಮುಗಿಯಲಿದೆ ಎನ್ನುವ ರೂಮರ್ ಒಂದು ಬಹಳ ಸದ್ದನ್ನು ಮಾಡುತ್ತಿದೆ. ಆದರೆ ಈ ವಿಚಾರವಾಗಿ ವಾಹಿನಿ ಆಗಲೀ ಅಥವಾ ನಿರ್ಮಾಪಕರಾಗಲೀ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ನೀಡಿಲ್ಲ ಎನ್ನಲಾಗಿದೆ.

ಧಾರಾವಾಹಿಯ ತಂಡವು ಮುಂಬರಲಿರುವ ಸಂಚಿಕೆಗಳ ಚಿತ್ರೀಕರಣದಲ್ಲಿ ಸಕ್ರಿಯವಾಗಿದ್ದು, ಯಾರೂ ಕೂಡಾ ಎಲ್ಲಿಯೂ ಧಾರಾವಾಹಿಯ ಮುಕ್ತಾಯದ ಕುರಿತಾಗಿ ಇನ್ನೂ ತುಟಿ ಬಿಚ್ಚಿಲ್ಲ. ಇನ್ನಿ ಈಗ ಧಾರಾವಾಹಿಯಲ್ಲಿ ನಾಯಕ ಆಕಾಶ್ ಮತ್ತು ನಾಯಕಿ ದೀಪಾ ರ ಮದುವೆಯ ವಿಶೇಷ ಸಂಚಿಕೆಗಳು ಪ್ರಸಾರವಾಗಲಿದೆ. ಈ ವಿಶೇಷ ಸಂಚಿಕೆಗಳ ಇಡೀ ಚಿತ್ರ ತಂಡವು ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದು, ಭರದಿಂದ ಚಿತ್ರೀಕರಣ ಸಾಗುತ್ತಿದೆ.

ಈ ವಿಶೇಷ ಸಂಚಿಕೆಗಳಲ್ಲಿ ಅದ್ಭುತ ಡ್ಯಾನ್ಸ್ ಪರ್ಫಾರ್ಮೆನ್ಸ್ ಗಳು ಇರುತ್ತವೆ ಎನ್ನಲಾಗುತ್ತಿದ್ದು, ಧಾರಾವಾಹಿಯ ಕಥೆಯಲ್ಲಿ ಪ್ರಮುಖವಾದ ತಿರುವೊಂದು ಕೂಡಾ ಮೂಡಿಬರುತ್ತದೆ ಎಂದು ಹೇಳಲಾಗಿದೆ. ಒಂದು ಕಡೆ ಕುತೂಹಲಭರಿತ ಸಂಚಿಕೆಗಳತ್ತ ಸಾಗುತ್ತಿರುವಾಗಲೇ ಅದರ ನಡುವೆ ಈಗ ಧಾರಾವಾಹಿ ಮುಕ್ತಾಯಗೊಳ್ಳಲಿದೆ ಎನ್ನುವ ಸುದ್ದಿ ಇನ್ನಷ್ಟು ಕುತೂಹಲವನ್ನು ಕೆರಳಿಸುವಂತೆ ಮಾಡಿದೆ.

ಆಕಾಶದೀಪ ಜನಪ್ರಿಯ ಬಂಗಾಳಿ ಸೀರಿಯಲ್ ಒಂದರ ಕನ್ನಡ ರಿಮೇಕ್ ಆಗಿದೆ. ಈ ಧಾರಾವಾಹಿಯ ಮೂಲಕ ನಟ ಜಯ್ ಡಿ ಸೂಜ ರವರು ಮೂರು ವರ್ಷಗಳ ನಂತರ ಕನ್ನಡ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಇವರು ಕನ್ನಡದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದು ಮನೆದೇವ್ರು ಸೀರಿಯಲ್ ನಲ್ಲಿ. ಇವರು ತೆಲುಗು ಕಿರುತೆರೆಯಲ್ಲಿ ಕೂಡ ಸಾಕಷ್ಟು ಜನಪ್ರಿಯತೆಯನ್ನು ಈ ನಟ ಪಡೆದುಕೊಂಡಿದ್ದಾರೆ. ಎನ್ನುವುದು ವಿಶೇಷವಾಗಿದೆ

- Advertisment -