ಆಷಾಢ ಮಾಸದ ಶುಕ್ರವಾರ ತಪ್ಪದೇ ಈ ಕೆಲಸ ಮಾಡಿ: ಎಲ್ಲಾ ಕಷ್ಟಗಳಿಂದ ಮುಕ್ತಿ ಪಡೆಯಿರಿ!!

Astrology tips Entertainment Featured-Articles News ಜೋತಿಷ್ಯ

ಆಷಾಡ ಮಾಸ ಎಂದೊಡನೆ ತಟ್ಟನೆ ಅನೇಕರು ಹೇಳುವುದು ಇದು ಅಶುಭ ಮಾಸ ಎಂದು. ಏಕೆಂದರೆ ಈ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯದ ಕಾರಣ ಅನೇಕರು ಈ ಮಾಸವನ್ನು ಅಶುಭ ಮಾಸವೆಂದೇ ಭಾವಿಸಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಆದರೆ ಇದೇ ವೇಳೆ ಅನೇಕರಿಗೆ ತಿಳಿಯದ ವಿಷಯ ಏನೆಂದರೆ ಆಷಾಢ ಮಾಸ ಖಂಡಿತ ಅಶುಭ ಮಾಸವಲ್ಲ. ಇದೊಂದು ಶುಭ ಮಾಸ, ದೇವಿ ಚಾಮುಂಡೇಶ್ವರಿ ಜನ್ಮ ಕೂಡಾ ಇದೇ ಆಷಾಢ ಮಾಸದಲ್ಲಿ ಆಯಿತು. ಆದರೆ ಆಷಾಢದಲ್ಲಿ ಮದುವೆ, ನಾಮಕರಣಗಳಂತಹ ಶುಭ ಕಾರ್ಯ ಮಾಡಬಾರದು ಎನ್ನಲಾಗಿದೆ.

ನಮ್ಮ ಪೂರ್ವಜರು ಇಂತಹ ನಿಯಮ ಮಾಡಲು ಖಂಡಿತ ಕಾರಣಗಳಿವೆ. ಆಷಾಢ ಮಾಸದಲ್ಲಿ ರೈತಾಪಿ ವರ್ಗವು ಹೊಲ ಗದ್ದೆಗಳ ಕೆಲಸಗಳಲ್ಲಿ ತೊಡಗಿಕೊಳ್ಳುವ ಕಾರಣ ಶುಭ ಕಾರ್ಯಗಳ ಆಯೋಜನೆ ಅವರ ಕೃಷಿ ಕಾರ್ಯಕ್ಕೆ ಅಡಚಣೆ ಎನ್ನುವ ಕಾರಣಕ್ಕೆ ಹಿಂದಿನಿಂದಲೂ ಈ ಮಾಸದಲ್ಲಿ ಶುಭ ಕಾರ್ಯಗಳ ಆಚರಣೆಗೆ ವಿರಾಮವನ್ನು ನೀಡುತ್ತಾ ಬರಲಾಗಿದೆ. ಆದರೆ ಸಂಪೂರ್ಣ ವಿಚಾರ ತಿಳಿಯದ ಜನರು ಆಷಾಢ ಮಾಸವನ್ನು ಅಶುಭ ಎಂದೇ ಭಾವಿಸುತ್ತಾರೆ ಹಾಗೂ ಶುಭ ಕಾರ್ಯ ಮಾಡುವುದು ಸರಿಯಲ್ಲ ಎನ್ನುತ್ತಾರೆ.

ಪುರಾಣ ಕಥೆಗಳ ಕಡೆಗೆ ಗಮನ ನೀಡಿದಾಗ, ಇದೇ ಆಷಾಢ ಮಾಸದಲ್ಲಿ ಮಹಾದೇವನು ದೇವಿ ಪಾರ್ವತಿಗೆ ಅಮರತ್ವದ ಬಗ್ಗೆ ತಿಳಿಸಿದ್ದ, ಅಮರಾವತಿ ವ್ರತವನ್ನು ಆಷಾಢ ಮಾಸದಲ್ಲೇ ಮಾಡಲಾಗುವುದು. ಕೆಲವು ಪುರಾಣ ಕಥೆಗಳ ಪ್ರಕಾರ ದೇವಿ ಗಂಗಾ ಉತ್ತರಾಭಿಮುಖವಾಗಿ ಸಂಚರಿಸಿದ ಮಾಸ ಕೂಡಾ ಇದೆ ಎನ್ನಲಾಗಿದ್ದು, ಆಷಾಢ ಮಾಸದ ಶುಕ್ರವಾರದಂದು ದೇವಿ ಚಾಮುಂಡೇಶ್ವರಿಯ ಜನ್ಮವಾಯಿತು ಎನ್ನಲಾಗಿದ್ದು, ಈ ಮಾಸ ಶುಭ ಎನ್ನುವುದಕ್ಕೆ ಈ ಎಲ್ಲವೂ ನಿದರ್ಶನಗಳಾಗಿವೆ.

ಆದರೆ ಹಿಂದಿನಿಂದ ನಡೆದು ಬಂದಿರುವ ಆಚರಣೆಯಂತೆ ಈ ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡುವುದು ಬೇಡ. ಇದೇ ವೇಳೆ ಆಷಾಡ ಮಾಸದ ಪ್ರತಿ ಶುಕ್ರವಾರದಂದು ಸಂಪತ್ತಿನ ದೇವಿಯಾದ ಶ್ರೀ ಮಹಾಲಕ್ಷ್ಮಿ ಯ ದೇವಿಯ ವಿಶೇಷ ಪೂಜೆಯನ್ನು ಮಾಡಿದರೆ ಇದರಿಂದ ಶ್ರೀಮನ್ನಾರಾಯಣನ ಕೃಪೆ ಕೂಡಾ ದೊರೆಯುತ್ತದೆ ಎನ್ನುವ ಪ್ರತೀತಿ ಇದೆ. ಶ್ರೀ ಮಹಾವಿಷ್ಣು ವಿಗೆ ಪ್ರಿಯವಾದ ಪ್ರಥಮ ಏಕಾದಶಿ ಸಹಾ ಆಷಾಢ ಮಾಸದಲ್ಲೇ ಬರುವುದು. ಇದಲ್ಲದೇ ಅಮರನಾಥ ದೇವಾಲಯ ತೆರೆಯುವುದು ಸಹಾ ಇದೇ ಆಷಾಢದಲ್ಲಿ ಎನ್ನುವುದು ವಿಶೇಷ.

Leave a Reply

Your email address will not be published.